ಯಶ್ರಾಜ್ ಬ್ಯಾನರ್ನ `ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದ ಮೂಲಕ ಬಾಲಿವುಡ್ಗೆ ಅಡಿ ಇಟ್ಟ ಪರಿಣೀತಿ ಚೋಪ್ರಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ತಾನು ಬಿಕಿನಿ ತೊಡಲು ಸಿದ್ಧ ಎಂದು ಹೇಳಿ ಸುದ್ದಿ ಮಾಡಿದ್ದಾಳೆ. `ನಾನು ನಿರ್ದೇಶಕರ ನಟಿ. ಸ್ಕ್ರಿಪ್ಟ್ ಮತ್ತು ಪಾತ್ರಕ್ಕೆ ಅಗತ್ಯವಿದ್ದರೆ ನಾನು ಬಿಕಿನಿ ಹಾಕಲು ಸಿದ್ಧ ಜೊತೆಗೆ ಎಂಥದೇ ದೃಶ್ಯಗಳನ್ನು ನಿರ್ವಹಿಸಲು ಸಿದ್ಧ~ ಎಂದಿದ್ದಾಳೆ.
`ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದ ನಟನೆಗೆ ಫಿಲಂಫೇರ್ ಅತ್ಯುತ್ತಮ ಚೊಚ್ಚಿಲ ನಟಿ ಪ್ರಶಸ್ತಿ ಪಡೆದು ಬೀಗುತ್ತಿರುವ ಪರಿಣೀತಿ ಆ ಚಿತ್ರದಲ್ಲಿ ಅವಕಾಶ ಪಡೆಯಲು 85 ಕೆಜಿ ಇದ್ದ ತನ್ನ ದೇಹತೂಕವನ್ನು ಇಳಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಗೆಳೆಯ ಮತ್ತು `ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದ ನಿರ್ದೇಶಕ ಮನೀಶ್ ಶರ್ಮಾ ತಮ್ಮನ್ನು ಆದಿತ್ಯಾ ಚೋಪ್ರಾಗೆ ಪರಿಚಯಿಸಿ ಅವಕಾಶ ಕೊಡಿಸಿದ ದಿನಗಳ ನೆನಪಿಗೆ ಜಾರುವ ಆಕೆ, ಇದೀಗ ಯಶ್ರಾಜ್ ಬ್ಯಾನರ್ನ ಮೂರು ಚಿತ್ರಗಳಿಗೆ ಸಹಿ ಮಾಡಿದ್ದಾಳೆ.
`ಲೇಡೀಸ್ ವರ್ಸಸ್ ರಿಕ್ಕಿ ಬೆಹಲ್~ ಚಿತ್ರದಲ್ಲಿ ಅವಳಿಗೆ ಸಿಕ್ಕಿದ್ದು ಎರಡನೇ ನಾಯಕಿ ಪಾತ್ರ. ಇದೀಗ `ಇಷ್ಕಯಾದೆ~ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗುವ ಅವಕಾಶ ಸಿಕ್ಕಿದೆ.