ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಾಗೆ ಮಾಧವನಾದ ಶಾಹೀದ್

ಪಂಚರಂಗಿ
Last Updated 7 ಜುಲೈ 2015, 19:51 IST
ಅಕ್ಷರ ಗಾತ್ರ

ಬಾಲಿವುಡ್‌ ಚಾಕ್‌ಲೆಟ್‌ ಹೀರೋ ಶಾಹಿದ್‌ ಕಪೂರ್‌ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.ದೆಹಲಿಯ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ಕೆಲವೇ ಕೆಲವು ಸಂಬಂಧಿಗಳು ಮತ್ತು ಆಪ್ತ ಸಂಬಂಧಿಗಳ ಸಮ್ಮುಖದಲ್ಲಿ ಶಾಹೀದ್‌ ದೆಹಲಿ ಮೂಲದ ಮೀರಾ ರಜಪೂತ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಅಡಿಯಿರಿಸಿದ್ದಾರೆ.

‘ಹೈದರ್‌’ ಸ್ಟಾರ್‌ ಶಾಹೀದ್‌, 21 ವರ್ಷದ ಮೀರಾ ಅವರೊಂದಿಗೆ ಈ ವರ್ಷದ ಆರಂಭಕ್ಕೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಈ ಹಿಂದೆ ನಟಿ ಕರೀನಾ ಕಪೂರ್‌ ಅವರೊಂದಿಗೆ ಮೂರು ವರ್ಷಗಳ ಕಾಲ ಪ್ರೇಮ ಸಂಬಂಧ ಹೊಂದಿದ್ದ ಶಾಹೀದ್‌ ಅವರ ಹೆಸರು ನಂತರದ ದಿನಗಳಲ್ಲಿ ವಿದ್ಯಾ ಬಾಲನ್‌, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಬಿಪಾಷಾ ಬಸು ಅವರ ಜತೆಗೂ ಕೇಳಿಬಂದಿತ್ತು. ಈಗ ಮೀರಾ ಅವರ ಕೈಹಿಡಿಯುವುದರೊಂದಿಗೆ ಶಾಹೀದ್‌ ಪ್ರೇಮಜೀವನಕ್ಕೆ ಸಂಪ್ರದಾಯಿಕ ಮೊಹರು ಬಿದ್ದಂತಾಗಿದೆ.

ಮೊದಲಿನಿಂದಲೂ ತಮ್ಮ ಮದುವೆಯ ವಿಷಯದಲ್ಲಿ ಗುಟ್ಟು ಕಾಪಾಡಿಕೊಂಡೇ ಬಂದಿರುವ ಶಾಹೀದ್‌, ‘ನಾವಿಬ್ಬರೂ ಸಹಜ ವ್ಯಕ್ತಿಗಳಷ್ಟೆ’ ಎಂದು ಹೇಳಿದ್ದಾರೆ.‘ಮದುವೆಯ ವಿಷಯದಲ್ಲಿ ನಾನು ಹೆಚ್ಚಿನ ವಿವರಗಳನ್ನು ನೀಡಲು ಬಯಸುವುದಿಲ್ಲ. ಅವಳು ಸಾಧಾರಣ ಹುಡುಗಿ. ನಾನೂ ಸಾಧಾರಣ ಹುಡುಗ. ನಾವು ಇದನ್ನು ಒಂದು ಸಹಜ ಘಟನೆಯಾಗಿಯೇ ನೋಡಲು ಬಯಸುತ್ತೇವೆ. ಮದುವೆ ಎನ್ನುವುದು ನಮ್ಮ ಬದುಕಿನ ವೈಯಕ್ತಿಕ ಸನ್ನಿವೇಶ. ಅದರ ಬಗ್ಗೆ ಹೆಚ್ಚಿನ ವಿವರ ನೀಡಲು ನನಗೆ ಇಷ್ಟವಿಲ್ಲ’ ಎಂದು ಅವರು ಹೇಳಿದ್ದಾರೆ.

ಮಂಗಳವಾರ ಸಂಜೆ ದೆಹಲಿಯ ಫೈವ್‌ಸ್ಟಾರ್‌ ಹೋಟೆಲ್‌ ಒಂದರಲ್ಲಿ ಏರ್ಪಡಿಸಲಾಗಿರುವ ಆತಿಥ್ಯ ಸಮಾರಂಭಕ್ಕೆ ಸುಮಾರು 250 ಜನ ಗಣ್ಯರನ್ನು ಆಮಂತ್ರಿಸಲಾಗಿತ್ತು. ಜುಲೈ 12ರಂದು ಮುಂಬೈನಲ್ಲಿ ಪ್ರತ್ಯೇಕ ಆರತಕ್ಷತಾ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ದೆಹಲಿ ಮೂಲದ ರವೀಶ್‌ ಕಪೂರ್‌ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿದ್ದಾರೆ.ಶಾಹೀದ್‌ ತಮ್ಮ ಮುಂದಿನ ಚಿತ್ರ ‘ಶಾಂದಾರ್‌’ನಲ್ಲಿ ಅಲಿಯಾ ಭಟ್‌ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ವಿಕ್ರಮಾದಿತ್ಯ ಮೋಟ್ವಾನೆ ಅವರ ನಿರ್ಮಾಣದ ‘ಉಡ್ತಾ ಪಂಜಾಬ್‌’ ಚಿತ್ರವೂ ಅವರ ಕೈಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT