ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಪಿ.ಎನ್.ಸತ್ಯ ಶನಿವಾರ ಸಂಜೆ ನಿಧನರಾದರು. ರೌಡಿಸಂ ಕಥೆಯನ್ನು ಒಳಗೊಂಡ ಚಿತ್ರಗಳ ನಿರ್ದೇಶನದ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಕೆಲ ತಿಂಗಳಿಂದ ಸತ್ಯ ಅನಾರೋಗ್ಯದಿಂದ ಬಳಲುತ್ತಿದ್ದರು.

ದರ್ಶನ್ ನಾಯಕನಾಗಿ ಅಭಿನಯಿಸಿದ ‘ಮೆಜೆಸ್ಟಿಕ್’ ಚಿತ್ರದ ಮೂಲಕ ನಿರ್ದೇಶಕನಾಗಿ ಸತ್ಯ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದರು. ಸುದೀಪ್ ಅಭಿನಯದ ‘ಗೂಳಿ’, ದುನಿಯಾ ವಿಜಯ್ ಅಭಿನಯದ ‘ಶಿವಾಜಿನಗರ’ ಸೇರಿ ಅನೇಕ ಸಿನಿಮಾಗಳನ್ನು ಸತ್ಯ ನಿರ್ದೇಶಿಸಿದ್ದಾರೆ.

‘ಪಾಗಲ್’ ಚಿತ್ರದಲ್ಲಿ ನಾಯಕನಾಗಿಯೂ ಅವರು ಕಾಣಿಸಿಕೊಂಡಿದ್ದರು. ಹತ್ತಾರು ಸಿನಿಮಾಗಳಲ್ಲಿ ಖಳನಟನ ಪಾತ್ರದಲ್ಲಿಯೂ ಅಭಿನಯಿಸಿದ್ದರು. ‘ಮರಿ ಟೈಗರ್’ ಸತ್ಯ ನಿರ್ದೇಶನದ ಕೊನೆಯ ಸಿನಿಮಾ.

ನಿರ್ದೇಶನದ ಕೆಲವು ಸಿನಿಮಾಗಳು:
* ಡಾನ್
* ದಾಸಾ
* ಶಾಸ್ತ್ರಿ
* ತಂಗಿಗಾಗಿ
* ಹ್ಯಾಟ್ರಿಕ್ ಹೊಡಿ ಮಗ
* ಬೆಂಗಳೂರು ಅಂಡರ್‌ವರ್ಡ್

ಸತ್ಯ ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.