ನವದೆಹಲಿ: ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಶನಿವಾರ ಫೇಸ್ಬುಕ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಸೋಷ್ಯಲ್ ನೆಟ್ವರ್ಕ್ಗೆ ಪ್ರವೇಶಿಸಿದ್ದಾರೆ.
ಶನಿವಾರ ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಈ ಹಾಟ್ ನಟಿ, 'ಲೆಟ್ಸ್ ಡೂ ದಿಸ್' ಎಂಬ ಶೀರ್ಷಿಕೆ ನೀಡಿ ತಮ್ಮ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ತನ್ನ ನೂತನ ಚಿತ್ರದ ಪ್ರಚಾರಕ್ಕಾಗಿಯೇ ಇದೀಗ ಕತ್ರೀನಾ ಸೋಷ್ಯಲ್ ನೆಟ್ವರ್ಕ್ಗೆ ಬಂದಿದ್ದಾಳೆ ಎಂದು ಹೇಳಲಾಗುತ್ತಿದೆ.