ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಉಡುಪನ್ನು ನೋಡಿ ಟ್ರೋಲ್ ಮಾಡಿದವರಿಗೆ ಸ್ಪಷ್ಟ ಉತ್ತರ ನೀಡಿದ ಚಂಕಿ ಪಾಂಡೆ

Last Updated 22 ಮಾರ್ಚ್ 2022, 11:16 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿನ ಕಾರಣಕ್ಕೆ ಮಗಳನ್ನು ಟ್ರೋಲ್ ಮಾಡಿದವರ ವಿರುದ್ಧ ನಟ ಚಂಕಿಪಾಂಡೆ ಗರಂ ಆಗಿದ್ದಾರೆ.

ಚಂಕಿಪಾಂಡೆ ಪುತ್ರಿ ನಟಿ ಅನನ್ಯಾ ಪಾಂಡೆ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮಿಷ್ಟದ ಉಡುಪು ಧರಿಸಿದ್ದರು. ಆದರೆ ಅವರ ಉಡುಪು ಸಭ್ಯವಾಗಿಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದರು.

ಟ್ರೋಲ್ ಕುರಿತು ಅನನ್ಯಾ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಅನನ್ಯಾ ತಂದೆ ಚಂಕಿಪಾಂಡೆ ಈ ಬಗ್ಗೆ ‘ಹಿಂದುಸ್ತಾನ್ ಟೈಮ್ಸ್‌‘ಗೆ ನೀಡಿರುವ ಹೇಳಿಕೆಯಲ್ಲಿ ಟ್ರೋಲ್ ಮಾಡಿದವರಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

ನಮ್ಮ ಮಗಳಿಗೆ, ಅವಳಿಷ್ಟದ ಉಡುಪು ಧರಿಸುವ ಸ್ವಾತಂತ್ರ್ಯವಿದೆ. ಅಲ್ಲದೆ, ಯಾವುದು ತಪ್ಪು ಮತ್ತು ಯಾವುದು ಸರಿ ಎನ್ನುವ ಕುರಿತು ಆಕೆಗೆ ಸ್ಪಷ್ಟತೆಯಿದೆ. ಅವಳಿಗೆ ಏನು ಇಷ್ಟವೋ, ಅದನ್ನು ಧರಿಸುತ್ತಾಳೆ. ಇನ್ನೊಬ್ಬರಿಂದ ಕಲಿಯಬೇಕಿಲ್ಲ ಎಂದು ಚಂಕಿಪಾಂಡೆ ಹೇಳಿದ್ದಾರೆ.

ಉಡುಪಿನ ಆಯ್ಕೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಕುರಿತು ಮಗಳ ನಿಲುವನ್ನು ಸಮರ್ಥಿಸಿ, ಬೆಂಬಲ ನೀಡಿರುವ ಚಂಕಿಪಾಂಡೆ ಅವರ ನಡೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT