ನೆಟ್ಫ್ಲಿಕ್ಸ್, ಹಾಟ್ಸ್ಟಾರ್, ಜೀ 5 ಸೇರಿದಂತೆ ಒಟಿಟಿ ವೇದಿಕೆಗಳಲ್ಲಿ ಈ ವಾರ (ಡಿ.28 ರಿಂದ ಜ.3) ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾ ಮತ್ತು ವೆಬ್ ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾ ಮತ್ತು ವೆಬ್ ಸರಣಿಗಳು:

ಸಿನಿಮಾ: ಏಕೋ

ಭಾಷೆ: ಮಲಯಾಳ

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಡಿ.31

ದಿನಜಿತ್ ಅಯ್ಯಥನ್ ನಿರ್ದೇಶನದ ಮಲಯಾಳ ಭಾಷೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಏಕೋ’ ಡಿ.31ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಕೇರಳದ ಹಳ್ಳಿಯೊಂದರಲ್ಲಿ ಆರಂಭವಾಗುವ ಕತೆ, ಶ್ವಾನ ತಳಿ ಸಂರಕ್ಷಕ ಕುರಿಯಾಚನ್ ಹಾಗೂ ಅವನ ಮಲೇಷ್ಯಾ ಮೂಲದ ಪತ್ನಿಯ ಪಾತ್ರದ ಸುತ್ತಾ ಸಾಗುತ್ತದೆ. ಸಿನಿಮಾವು ಕೊನೆಯವರೆಗೂ ಕುತೂಹಲದಿಂದ ಸಾಗುತ್ತದೆ. ಸಂದೀಪ್ ಪ್ರದೀಪ್, ಸೌರಭ್ ಸಚ್ದೇವ, ಸಿಮ್ ಝಿ ಫೀ, ಬಿಯಾನಾ ಮೊಮಿನ್, ಬಿನು ಪಪ್ಪು ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ: ಮೊಗ್ಲಿ

ಭಾಷೆ: ತೆಲುಗು

ಒಟಿಟಿ: ಈಟಿವಿ ವಿನ್

ಬಿಡುಗಡೆ ದಿನಾಂಕ: ಜ.1

ಟಾಲಿವುಡ್ನ ರೋಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ‘ಮೊಗ್ಲಿ’ ಜ.1ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರವನ್ನು ಸಂದೀಪ್ ರಾಜ್ ನಿರ್ದೇಶಿಸಿದ್ದಾರೆ. ರೋಶನ್ ಕಣಕಾಲ, ಸಾಕ್ಷಿ ಮ್ಹಾಡೋಲ್ಕರ್ ಹಾಗೂ ಬಂಡಿ ಸರೋಜ್ ಕುಮಾರ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಡಿ.13ರಂದು ಚಿತ್ರ ಬಿಡುಗಡೆಯಾಗಿತ್ತು. ಸಿನಿಮಾವು 2 ಗಂಟೆ 40 ನಿಮಿಷ ಅವಧಿಯಿದೆ.

ಸಿನಿಮಾ: ಹಕ್

ಭಾಷೆ: ಹಿಂದಿ

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಜ.2

ಯಾಮಿ ಗೌತಮ್ ಧರ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಪಾತ್ರದಲ್ಲಿ ನಟಿಸಿರುವ ಮಹಿಳಾ ಹಕ್ಕುಗಳ ಕುರಿತ ನೈಜ ಘಟನೆ ಆಧಾರಿತ ಬಾಲಿವುಡ್ ಚಲನಚಿತ್ರ ‘ಹಕ್, ಜನವರಿ 2ರಂದು ‘ನೆಟ್ಫ್ಲಿಕ್ಸ್’ನಲ್ಲಿ ಬಿಡುಗಡೆಯಾಗಲಿದೆ. ಸುಪ್ರೀಂ ಕೋರ್ಟ್ನಲ್ಲಿ ‘ಷಾ ಬಾನೋ’ ಪ್ರಕರಣ ಎಂದೇ ಪ್ರಸಿದ್ದವಾಗಿದ್ದ, ಮುಸ್ಲಿಂ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳದ ವಿರುದ್ಧ ನಡೆಸಿದ ಮಹಿಳೆಯರ ಹಕ್ಕುಗಳ ಹೋರಾಟದ ಕುರಿತು ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ. ಫ್ಯಾಮಿಲಿ ಮ್ಯಾನ್, ರಾಣಾ ನಾಯ್ಡು ವೆಬ್ ಸರಣಿಗಳ ನಿರ್ದೇಶಕರಾಗಿರುವ ಸುಪರ್ಣ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸಿನಿಮಾ: ಕುಮ್ಕಿ 2

ಭಾಷೆ: ತಮಿಳು

ಒಟಿಟಿ: ಅಮೆಜಾನ್ ಪ್ರೈಮ್

ಬಿಡುಗಡೆ ದಿನಾಂಕ: ಜ.3

2012ರಲ್ಲಿ ಬಿಡುಗಡೆಯಾಗಿದ್ದ ಮಾನವ ಮತ್ತು ಆನೆಯ ನಡುವಿನ ಭಾಂದವ್ಯದ ಕತೆಯುಳ್ಳ ತಮಿಳಿನ ಕುಮ್ಕಿ ಸಿನಿಮಾದ ಎರಡನೇ ಭಾಗವಾಗಿರುವ ‘ಕುಮ್ಕಿ 2’ ಸಿನಿಮಾವು ಜನವರಿ 3ರಂದು ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವನ್ನು ಪ್ರಭು ಸೊಲೊಮನ್ ನಿರ್ದೇಶಿಸಿದ್ದಾರೆ. ಮಥಿ, ಅರ್ಜುನ್ ದಾಸ್ ಮತ್ತು ಸೀರಿತಾ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2025ರ ನವೆಂಬರ್ 15ರಂದು ಚಿತ್ರವು ಬಿಡುಗಡೆಯಾಗಿತ್ತು.

ವೆಬ್ಸರಣಿ: ಸ್ಟ್ರೇಂಜರ್ ಥಿಂಗ್ಸ್ 5 – ವ್ಯಾಲೂಮ್ 2

ಭಾಷೆ: ಇಂಗ್ಲಿಷ್

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಜ.1

ನೆಟ್ಫ್ಲಿಕ್ಸ್ ಒರಿಜಿನಲ್ನ ಪ್ರಮುಖ ವೆಬ್ ಸರಣಿ ‘ಸ್ಟ್ರೇಂಜರ್ ಥಿಂಗ್ಸ್ ’ ಸರಣಿಯ 5ನೇ ಸೀಸನ್ನ ವ್ಯಾಲೂಮ್ 3, ಕೊನೆಯ ಎಪಿಸೋಡ್ ಜ.1ರಂದು ಬಿಡುಗಡೆಯಾಗಲಿದೆ. ಹಾಕಿನ್ಸ್ನ ಮಕ್ಕಳ ಪಡೆಯು ವೆಕ್ನಾ ವಿರುದ್ಧ ಗೆದ್ದು, ಜಗತ್ತನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆಯೇ ಎನ್ನುವ ಕುತೂಹಲಕ್ಕೆ ಈ ಎಪಿಸೋಡ್ ಉತ್ತರ ನೀಡುತ್ತವೆ. ಈಗಾಗಲೇ 5ನೇ ಸೀಸನ್ನಲ್ಲಿ 7 ಎಪಿಸೋಡ್ಗಳು ಬಿಡುಗಡೆಯಾಗಿದೆ. ಸ್ಟ್ರೇಂಜರ್ ಥಿಂಗ್ಸ್ 5 ವೆಬ್ಸರಣಿಯ ಕೊನೆಯ ಎಪಿಸೋಡ್ 128 ನಿಮಿಷಗಳ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.