ನವದೆಹಲಿ: ವೀಕ್ಷಕರ ಮೆಚ್ಚುಗೆ ಪಡೆದ ಪಂಚಾಯತ್ ವೆಬ್ ಸರಣಿಯ 4ನೇ ಸೀಸನ್ ಜೂನ್ 24 ರಂದು ಪ್ರೈಮ್ ವಿಡಿಯೊದಲ್ಲಿ ತೆರೆಕಾಣಲಿದೆ.

ಜಿತೇಂದ್ರ ಕುಮಾರ್, ನೀನಾ ಗುಪ್ತಾ, ರಘುವೀರ್ ಯಾದವ್, ಚಂದನ್ ರಾಯ್ ಸೇರಿ ಹಲವರು ನಟಿಸಿದ್ದಾರೆ.

ದೀಪಕ್ ಕುಮಾರ್ ಮಿಶ್ರಾ ಮತ್ತು ಚಂದನ್ ಕುಮಾರ್ ನಿರ್ಮಿಸಿರುವ ಪಂಚಾಯತ್ ವೆಬ್ ಸಿರೀಸ್, ಎಂಜಿನಿಯರಿಂಗ್ ಪದವಿ ಪಡೆದ ಅಭಿಷೇಕ್ ತ್ರಿಪಾಠಿ (ಜಿತೇಂದ್ರ ಕುಮಾರ್) ಎಲ್ಲಿಯೂ ಉದ್ಯೋಗ ಸಿಗದೆ ಉತ್ತರ ಪ್ರದೇಶದ ಫುಲೆರಾ ಎನ್ನುವ ಹಳ್ಳಿಯ (ಕಾಲ್ಪನಿಕ ಗ್ರಾಮ) ಪಂಚಾಯತ್ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಸೇರಿಕೊಳ್ಳುತ್ತಾನೆ. ಈತನ ಸುತ್ತ ‘ಪಂಚಾಯತ್’ ವೆಬ್ ಸರಣಿಯ ಕಥೆ ಸುತ್ತುತ್ತದೆ.

ಪ್ರಧಾನ್ ಹಾಗೂ ಅವರ ಪತ್ನಿಗೆ ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗುವ ಭೂಷಣ್, ಪ್ರಧಾನ್ ಪುತ್ರಿ ಹಾಗೂ ಅಭಿಷೇಕ್ ನಡುವಿನ ಮೌನರಾಗ, ಅಭಿಷೇಕ್ ಗೆಳೆಯರಾದ ಪ್ರಹ್ಲಾದ್ಚಾ ಮತ್ತು ವಿಕಾಸ್ ಕಚಗುಳಿಗಳು, ಈ ನಾಲ್ಕನೇ ಆವೃತ್ತಿಯಲ್ಲಿ ಹೇಗಿರಲಿದೆ ಎಂಬ ಕುತೂಹಲ ಗರಿಗೆದರಿವೆ.

ಈ ಹೊಸ ಸೀಸನ್ನಲ್ಲಿ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುವ ಅನಿರೀಕ್ಷಿತ ಟ್ವಿಸ್ಟ್ಗಳನ್ನು ಇಡಲಾಗಿದೆ ಎಂದು ತಂಡ ಹೇಳಿದೆ.

ಪಂಚಾಯತ್ ಸೀಸನ್ –1 2020ರಲ್ಲಿ ತೆರೆಕಂಡಿತ್ತು, 2022ರಲ್ಲಿ ಎರಡನೇ ಸೀಸನ್ ಮತ್ತು 2024ರಲ್ಲಿ ಮೂರನೇ ಸೀಸನ್ ತೆರೆಕಂಡಿತ್ತು. ಈ ಎಲ್ಲ ಸೀಸನ್ಗಳಲ್ಲಿ 8 ಸಂಚಿಕೆಗಳಿದ್ದವು. ಈಗ 4ನೇ ಸೀಸನ್ ಜೂನ್ 24 ರಂದು ತೆರೆಕಾಣುತ್ತಿದ್ದು ಎಷ್ಟು ಸಂಚಿಕೆಗಳಿರಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.