ಲಂಡನ್‌ನಲ್ಲಿ ಮಾನ್ವಿತಾ ಮಂಗಾಟ!

7

ಲಂಡನ್‌ನಲ್ಲಿ ಮಾನ್ವಿತಾ ಮಂಗಾಟ!

Published:
Updated:
Deccan Herald

ಲಂಡನ್‌ ಪೊಲೀಸರು ಕನ್ನಡದ ನಟ ವಸಿಷ್ಠ ಸಿಂಹ ಮತ್ತು ನಟಿ ಮಾನ್ವಿತಾ ಹರೀಶ್‌ ಅವರನ್ನು ಬಂಧಿಸಿದ್ದಾರೆ. ಅವರು ಮಾಡಿದ ಅಪರಾಧವಾದರೂ ಏನು? ಬಕಿಂಗ್‌ ಹ್ಯಾಂ ಪ್ಯಾಲೇಸಿನ ಎದುರಲ್ಲಿ ಹಾಡುತ್ತ, ಕುಣಿಯುತ್ತ ಪ್ರೇಮಿಸಿದ್ದು. ಬಂಧಿಸಿದ ಕೆಲವೇ ಗಳಿಗೆಗಳಲ್ಲಿ ಅವರ ಬಿಡುಗಡೆಯಾಗಿದೆ! ಮಾನ್ವಿತಾ ಹರೀಶ್‌ ಅವರ ಮುಖದ ಮೇಲೆ ಮೂಡಿದ ಒಂದು ಸುಂದರ ನಗುವನ್ನು ಕಂಡು ಅಮೆರಿಕ ಪೊಲೀಸರು ಫಿದಾ ಆಗಿ ಅವರನ್ನು ಬಿಡುಗಡೆ ಮಾಡಿದ್ದಾರೆ. 

ಇದೇನು ಬ್ರೇಕಿಂಗ್‌ ನ್ಯೂಸ್‌ ಇಷ್ಟೊಂದು ಸಿನಿಮೀಯವಾಗಿದೆಯಲ್ಲ ಎಂದುಕೊಳ್ಳಬೇಡಿ. ಇದು ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡ ಸಿನಿಮೀಯ ಬ್ರೇಕಿಂಗ್‌ ನ್ಯೂಸ್‌.

ನಾಗತಿಹಳ್ಳಿ ಚಂದ್ರಶೇಖರ್, ತಮ್ಮ ಹೊಸ ಚಿತ್ರದ ಚಿತ್ರೀಕರಣಕ್ಕಾಗಿ ತಂಡದೊಂದಿಗೆ ಲಂಡನ್‌ನಲ್ಲಿ ಬೀಡುಬಿಟ್ಟಿದ್ದಾರೆ. ವಿದೇಶ ಪ್ರವಾಸ ಮೇಷ್ಟ್ರಿಗೆ ಹೊಸತಲ್ಲ. ಹಾಗೆ ಬೇರೆ ದೇಶಕ್ಕೆ ಹೋದಾಗಲೆಲ್ಲ ಅವರು ತಾವು ನೋಡಿದ ಜಾಗವನ್ನು ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೂಲಕ ಹಂಚಿಕೊಳ್ಳುವುದೂ ಅವರಿಗೆ ಖಯಾಲಿ. ಈಗ ಲಂಡನ್‌ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವಾಗಲೂ ಅಲ್ಲಿನ ಕೆಲವು ಖುಷಿಯ ಗಳಿಗೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಹಂಚಿಕೊಳ್ಳುತ್ತಿದ್ದಾರೆ. 

ಬಕಿಂಗ್‌ಹ್ಯಾಂ ಅರಮನೆಯ ಎದುರು ಪೊಲೀಸ್‌ ಸಿಬ್ಬಂದಿಯೊಂದಿಗೆ ವಸಿಷ್ಠ ಸಿಂಹ ಮತ್ತು ಮಾನ್ವಿತಾ ಹರೀಶ್‌ ನಿಂತು ನಗುತ್ತಿರುವ ವಿಡಿಯೊವನ್ನು ಹಂಚಿಕೊಂಡ ನಾಗತಿಹಳ್ಳಿ ಮೇಲಿನ ಹಾಗೆ ಬ್ರೇಕಿಂಗ್‌ ಕ್ಯಾಪ್ಶನ್‌ ಕೊಟ್ಟಿದ್ದಾರೆ.

ಇದೊಂದೇ ಅಲ್ಲ, ಲಂಡನ್‌ ಬ್ರಿಡ್ಜ್‌ ಮೇಲೆ ಮಾನ್ವಿತಾ ಹರೀಶ್‌ ನರ್ತಿಸುತ್ತಿರುವ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ. ಅದಕ್ಕೆ ‘ಮುಂಜಾನೆ ಮಾನ್ವಿತಾ ಮಂಗಾಟ’ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. 

ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮಗೊಂಡಿಲ್ಲ. ವಸಿಷ್ಟ ಸಿಂಹ ಮತ್ತು ಮಾನ್ವಿತಾ ಹರೀಶ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

ನಾಗತಿಹಳ್ಳಿ ಚಂದ್ರಶೇಖರ್ ಫೇಸ್‌ಬುಕ್‌ ಪುಟದ ಕೊಂಡಿ: www.facebook.com/NomadChandru/

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !