ಮತ್ತೆ ‘ನಿತ್ಯಾ’ ಪಯಣ

7

ಮತ್ತೆ ‘ನಿತ್ಯಾ’ ಪಯಣ

Published:
Updated:
Deccan Herald

‘ಮೊದಲ ಮಳೆಯಂತೆ ಎದೆಗೆ ಇಳಿದೆ ಮೆಲ್ಲಗೆ’ ಎಂದು ಚೇತನ್‌ ಜೊತೆ ಹಾಡಿ ಕುಣಿದು ‘ಕನ್ನಡದ ಮೈನಾ’ ಎಂದೇ ಗುರುತಿಸಿಕೊಂಡ ಮಲೆಯಾಳಿ ಕುಟ್ಟಿ ನಿತ್ಯಾ ಮೆನನ್‌ ಮತ್ತೆ ಬ್ಯುಸಿಯಾಗಿದ್ದಾರೆ. ಏಕವ್ಯಕ್ತಿ ಪಾತ್ರವಿರುವ ಬಹುಭಾಷಾ ಚಿತ್ರ ‘ಪ್ರಾಣ’ದ ಮೂಲಕ ಅವರು ಮತ್ತೆ ಸುದ್ದಿಯಾಗಿದ್ದರು. ಇದೀಗ ಇನ್ನಷ್ಟು ಹೊಸ ಚಿತ್ರಗಳ ಅವಕಾಶ ಅವರ ಕೈಯಲ್ಲಿವೆ.

ಮೂರು ವರ್ಷಗಳ ಬ್ರೇಕ್‌ ನಂತರ ಮಲಯಾಳಂ ಚಿತ್ರರಂಗಕ್ಕೆ ಮರಳಿರುವ ನಿತ್ಯಾ ಅಲ್ಲಿ ಸಹಿ ಹಾಕಿದ್ದ ಚಿತ್ರವೊಂದರಿಂದ ಹೊರಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಫಹಾದ್‌ ಫಾಸಿಲ್‌ ಜೊತೆಗೆ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದ ಈ ಸುಂದರಿ ಆ ಚಿತ್ರವನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದರ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ‘ಫಹಾದ್‌ ಜೊತೆ ನಟಿಸುವ ಈ ಅವಕಾಶ ಸಿಕ್ಕಿದೆ. ಉತ್ತಮ ನಟರೊಂದಿಗೆ ನಟಿಸುವುದೇ ಖುಷಿ’ ಎಂದು ನಿತ್ಯಾ ಹೇಳಿಕೊಂಡಿದ್ದರು.

ಫಹಾದ್‌ ಜೋಡಿಯಾಗಿ ‘ಬೆಂಗಳೂರು ಡೇಸ್‌’ನಲ್ಲಿ ನಟಿಸಿದ್ದ ನಿತ್ಯಾ, ದುಲ್ಕರ್‌ ಸಲ್ಮಾನ್‌ ಜೊತೆಗಿನ ‘100 ಡೇಸ್‌ ಆಫ್‌ ಲವ್‌’ ನಂತರ ಚಿತ್ರರಂಗದಿಂದ ದೂರವುಳಿದಿದ್ದರು. ಹೊಸ ಚಿತ್ರ, ಟಿ.ಕೆ.ರಾಜೀವ್ ಕುಮಾರ್ ನಿರ್ದೇಶನದ ‘ಕೊಳಂಬಿ’ಯಲ್ಲಿ ನಿತ್ಯಾ ಅವರದು ನಾಯಕಿ ಪಾತ್ರ. ಅಲ್ಲದೆ ಹೆಸರಾಂತ ನಿರ್ದೇಶಕ ಮತ್ತು ನಿರ್ಮಾಪಕ ಮಿಷ್ಕಿನ್‌ ಅವರ ಹೊಸ ಚಿತ್ರದಲ್ಲಿಯೂ ನಿತ್ಯಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ನಿತ್ಯಾ ಮೆನನ್‌ ಎರಡನೇ ಇನ್ನಿಂಗ್ಸ್‌ ಭರ್ಜರಿಯಾಗಿದೆ ಎಂದು ಹೇಳಬಹುದು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !