ಸೋಮವಾರ, ಮಾರ್ಚ್ 27, 2023
32 °C

ವೆಬ್‌ ಸಿರೀಸ್‌ನಲ್ಲಿ ಮುಂಬೈ ಭೂಗತಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸದಾ ಒಂದಿಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ‘ಕಂಪನಿ’ ಚಿತ್ರದ ಬಳಿಕ ಇದೀಗ ವೆಬ್‌ ಸಿರೀಸ್‌ನಲ್ಲಿ ಮುಂಬೈ ಭೂಗತ ಲೋಕದ ಮುಖವನ್ನು ಅನಾವರಣಗೊಳಿಸಲು ಹೊರಟಿದ್ದಾರೆ.

2002ರಲ್ಲಿ ‘ಕಂಪನಿ‘ ಸಿನಿಮಾದ ಮೂಲಕ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೀವನ ಕತೆಯನ್ನು ಬೆಳ್ಳಿತೆರೆಗೆ ತಂದು ಯಶಸ್ವಿಯಾಗಿರುವ ವರ್ಮಾ ಈ ವೆಬ್ ಸಿರೀಸ್‌ ಮೂಲಕ ಮತ್ತೊಮ್ಮೆ ದಾವೂದ್‌ ಕತೆಯನ್ನು ಹೇಳಲು ಹೊರಟಿದ್ದಾರೆ. ಮುಂಬೈನ 80ರ ದಶಕದ ಭೂಗತಲೋಕ ಮತ್ತು 1993ರ ಮುಂಬೈ ಬಾಂಬ್‌ ಸ್ಫೋಟ ಘಟನಾವಳಿಗಳನ್ನು ಎಳೆ, ಎಳೆಯಾಗಿ ತೆರೆದಿಡಲು ಸಜ್ಜಾಗಿದ್ದಾರೆ.

ತಮ್ಮ ಮುಂದಿನ ಚಿತ್ರ ‘ಬ್ಯೂಟಿಫುಲ್‌’ ಚಿತ್ರದ ಪ್ರಮೋಷನ್‌ಗಾಗಿ ಮುಂಬೈಗೆ ಬಂದಿದ್ದ ಆರ್‌ಜಿವಿ ವೆಬ್‌ ಸಿರೀಸ್‌ ವಿಷಯವನ್ನು ಪ್ರಕಟಿಸಿದ್ದಾರೆ. ಎರಡು ದಶಕಗಳಿಂದ ನಾನು ಮುಂಬೈ ಭೂಗತ ಲೋಕ ಮತ್ತು ಭೂಗತ ಪಾತಕಿಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದೇನೆ. ವೆಬ್‌ ಸಿರೀಸ್‌ನಿಂದ ಮಾತ್ರ ಇದಕ್ಕೆ ನ್ಯಾಯ ಸಲ್ಲಿಸಬಹುದು ಎಂದು ಆರ್‌ಜಿವಿ ಹೇಳಿದ್ದಾರೆ.

2002ರಲ್ಲಿ ಬಿಡುಗಡೆಯಾಗಿದ್ದ ವರ್ಮಾ ನಿರ್ದೇಶನದ ‘ಕಂಪನಿ’ ಭಾರಿ ಸದ್ದು ಮಾಡಿತ್ತು. ಅಜಯ್‌ ದೇವಗನ್‌, ವಿವೇಕ್‌ ಒಬೇರಾಯ್‌, ಉರ್ಮಿಳಾ ಮಾತೋಂಡ್ಕರ್‌ ಸೇರಿದಂತೆ ಚಿತ್ರ ಬಹುದೊಡ್ಡ ತಾರಾಗಣವನ್ನೇ ಹೊಂದಿತ್ತು. 

ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ್ದ ಆಮಿರ್‌ ಖಾನ್‌, ಜಾಕಿ ಶ್ರಾಫ್‌ ಮತ್ತು ಊರ್ಮಿಳಾ ಮಾತೋಂಡ್ಕರ್‌ ನಟನೆಯ ಯಶಸ್ವಿ ಚಿತ್ರ ‘ರಂಗೀಲಾ’ದ ಸಿಕ್ವೆಲ್‌ ಎಂದು ಸುಳಿವನ್ನು ಆರ್‌ಜಿವಿ ತಮ್ಮ ಮುಂದಿನ ಚಿತ್ರ ‘ಬ್ಯೂಟಿಫೂಲ್‌’ ಬಗ್ಗೆ ಸುಳಿವು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು