ಶನಿವಾರ, ಮಾರ್ಚ್ 6, 2021
28 °C

ಆನ್‌ಲೈನ್‌ ವೇದಿಕೆಯಲ್ಲಿ ’ಪ್ರಿಯಾಸ್ ಮಾಸ್ಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಮಹಿಳಾ ಸೂಪರ್ ಹೀರೊಗಳನ್ನು ಒಳಗೊಂಡಿರುವ ಭಾರತದ ಮೊದಲ ಜನಪ್ರಿಯ ಯುವ ಕಾಮಿಕ್ ಪುಸ್ತಕ ‘ಪ್ರಿಯಾಸ್ ಮಾಸ್ಕ್‌’ ಈಗ ತಮಿಳು, ಕನ್ನಡ ಮತ್ತು ಮಲಯಾಳಂ ಆವೃತಿಗಳಲ್ಲಿ ಆನ್‌ಲೈನ್‌ ವೇದಿಕೆಯಲ್ಲಿ ಲಭ್ಯವಿದೆ.

ಚೆನ್ನೈನಲ್ಲಿರುವ ಯುಎಸ್‌ ಕಾನ್ಸುಲೇಟ್‌ನ ಜನರಲ್ ಕಾಮಿಕ್‌ ಪುಸ್ತಕದ ಆನ್‌ಲೈನ್‌ ಆವೃತ್ತಿಗಳನ್ನು ಬಿಡುಗಡೆ ಮಾಡಿದರು.

‘ಪ್ರಿಯಾಸ್‌ ಮಾಸ್ಕ್‌’ ವೆಬ್‌ ಸರಣಿಯೂ ಬಿಡುಗಡೆಯಾಗಿದ್ದು, ದೆಹಲಿಯ ಶುಭ್ರ ಪ್ರಕಾಶ್ ಚಿತ್ರಕಥೆ ಬರೆದಿದ್ದಾರೆ. ಸಿನಿಮಾಗೆ ಅಮೆರಿಕ ರಾಯಭಾರ ಕಚೇರಿಯ ನಾರ್ತ್‌ ಇಂಡಿಯಾ ಆಫೀಸ್ (ಎನ್‌ಐಒ) ಬಂಡವಾಳ ಹೂಡಿದೆ. ಮಹಿಳಾ ಪಾತ್ರಧಾರಿಗಳಿಗೆ ವಿದ್ಯಾ ಬಾಲನ್‌, ಮೃಣಾಲ್‌ ಠಾಕೂರ್‌, ಹಾಲಿವುಡ್‌ ನಟಿ ರೊಸನ್ನ ಆರ್ಕ್ವೇಟ್‌ ಧ್ವನಿಯಾಗಿದ್ದಾರೆ.

‘ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜಾಗತಿಕ ಸವಾಲುಗಳನ್ನು ಅಮೆರಿಕ ಮತ್ತು ಭಾರತದ ಪ್ರತಿಭಾವಂತರು ಒಟ್ಟಾಗಿ ಎದುರಿಸಲು ಬದ್ಧರಾಗಿದ್ದಾರೆ ಎಂಬುದಕ್ಕೆ ಈ ಕಾಮಿಕ್‌ ಪುಸ್ತಕ ಮತ್ತೊಂದು ಉದಾಹರಣೆಯಾಗಿದೆ’ ಎಂದು ಚೆನ್ನೈನಲ್ಲಿರುವ ಯುಎಸ್‌ ಕಾನ್ಸುಲೇಟ್‌ನ ಜನರಲ್ ಕೊರಿ ಬಿಕಲ್‌ ಹೇಳಿದ್ದಾರೆ.

https://www.priyashakti.com/priyas-mask ವೆಬ್‌ಸೈಟ್‌ ಮೂಲಕ ‘ಪ್ರಿಯಾಸ್ ಮಾಸ್ಕ್‌’ ಕಾಮಿಕ್‌ ಪುಸ್ತಕವನ್ನು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು