ಶುಕ್ರವಾರ, ನವೆಂಬರ್ 22, 2019
20 °C

‘ಮಾಫಿಯಾ’ ಟೀಸರ್‌ಗೆ ಮೆಚ್ಚುಗೆಯ ಸುರಿಮಳೆ

Published:
Updated:
Prajavani

ಕಾರ್ತಿಕ್‌ ನರೇನ್‌ ನಿರ್ದೇಶನದ ‘ಮಾಫಿಯಾ’ ಸಿನಿಮಾದ ಟೀಸರ್ ಬಿಡುಗಡೆಗೊಂಡಿದೆ. ರಜನಿಕಾಂತ್ ಸೇರಿದಂತೆ ಸ್ಟಾರ್ ನಟರು ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾದಲ್ಲಿ ಅರುಣ್ ವಿಜಯ್ ಹಾಗೂ ಪ್ರಿಯಾ ಭವಾನಿ ಶಂಕರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಯುವ ನಿರ್ದೇಶಕನ ಸಾಹಸ ಹಾಗೂ ಹೊಸತನದಿಂದ ಕೂಡಿದ ಮೇಕಿಂಗ್ ಕುರಿತು ನಟ ರಜಿನಿಕಾಂತ್‌ ಹೊಗಳಿದ್ದಾರೆ.

‘ಆ್ಯಕ್ಷನ್‌ ಥ್ರಿಲ್ಲರ್ ಸಿನಿಮಾದ ಟೀಸರ್ ನೋಡಿ ಖುಷಿಯಾಯಿತು. ಬುದ್ದಿವಂತಿಕೆಯಿಂದ ಸ್ಕ್ರಿಪ್ಟ್ ಹೆಣೆಯಲಾಗಿದೆ. ಮೇಕಿಂಗ್ ಕೂಡ ಚೆನ್ನಾಗಿದೆ. ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಇಷ್ಟ ಆಯಿತು’ ಎಂದು ರಜನಿಕಾಂತ್‌ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

‘ಸಿನಿಮಾದಲ್ಲಿ ಸಾಕಷ್ಟು ಹೊಸಸಂಗತಿಗಳು ಇವೆ. ಜನರಿಗೂ ತುಂಬಾ ಇಷ್ಟ ಆಗಲಿದೆ. ಸ್ಟಾರ್‌ ನಟರಿಂದ ಮೆಚ್ಚುಗೆ ಸಿಕ್ಕಿದ್ದು ನನ್ನ ಪುಣ್ಯ’ ಎಂದು ಕಾರ್ತಿಕ್‌ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)