ಶನಾಯಾ ಸುಮ್ಮನೆ ಸುದ್ದಿಯಾಗ್ತಿಲ್ಲ

ಶುಕ್ರವಾರ, ಏಪ್ರಿಲ್ 19, 2019
27 °C

ಶನಾಯಾ ಸುಮ್ಮನೆ ಸುದ್ದಿಯಾಗ್ತಿಲ್ಲ

Published:
Updated:

ಕಪೂರ್‌ ಮನೆತನದ ಹುಡುಗಿ ಶನಾಯಾ ಕಪೂರ್‌ಗೆ ಪ್ರಚಾರದ ಗೀಳು. ನಟ ಸಂಜಯ್ ಕಪೂರ್‌ ಮತ್ತು ವಿನ್ಯಾಸಕಿ ಮೆಹೀಪ್‌ ಕಪೂರ್‌ ಮಗಳಾದ ಶನಾಯಾ ಸಹ ನಿರ್ದೇಶಕಿಯಾಗಿ ಬಾಲಿವುಡ್‌ಗೆ ಕಾಲಿಡುವುದಕ್ಕೂ ಮೊದಲೇ ಭಾರಿ ಪ್ರಚಾರ ಗಿಟ್ಟಿಸಿಕೊಂಡವಳು.

ಪ್ರಚಾರಪ್ರಿಯರಿಗೆ ಪ್ರಚಾರ ಗಿಟ್ಟಿಸಿಕೊಳ್ಳಲು ಕಾರಣ ಬೇಕಿಲ್ಲ ಎನ್ನುವುದಕ್ಕೆ ಶನಾಯಾ ಉತ್ತಮ ಉದಾಹರಣೆ. ಕೂತರೆ ನಿಂತರೆ ಫೋಟೊ ಕ್ಲಿಕ್ಕಿಸಿಕೊಂಡು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವುದು ಆಕೆಯ ಚಾಳಿ.

ಸಾಮಾನ್ಯವಾಗಿ ಅವಳ ಜೊತೆಗಿರುವವರು ಅಂತಿಂತವರಲ್ಲ. ಬಾಲಿವುಡ್‌ನ ಮೋಹಕ ತಾರೆಯರಾದ ಅನನ್ಯಾ ಪಾಂಡೆ, ಸುಹಾನಾ ಖಾನ್‌, ಖುಷಿ ಕಪೂರ್‌, ಜಾಹ್ನವಿ ಕಪೂರ್‌... . ಹಾಗೆ ನೋಡಿದರೆ, ಶನಾಯಾ ಅವರ ಕಸಿನ್‌ಗಳ ದೊಡ್ಡ ದಂಡೇ ಬಿ ಟೌನ್‌ನಲ್ಲಿದೆ. ಆಗಲೇ ಹೇಳಿರುವ ಹೆಸರುಗಳೊಂದಿಗೆ ಸೋನಂ ಕಪೂರ್‌, ಅರ್ಜುನ್‌ ಕಪೂರ್‌, ರಿಯಾ ಕಪೂರ್‌, ಅನ್ಷುಲಾ ಕಪೂರ್‌, ಹರ್ಷವರ್ಧನ್‌ ಕಪೂರ್‌ ಅವರೂ ಈ ಪಟ್ಟಿಯಲ್ಲಿ ಸೇರುತ್ತಾರೆ.

ಶನಾಯಾ ಈಗ ಮತ್ತೆ ಸುದ್ದಿಯಲ್ಲಿರುವುದೂ ಇನ್‌ಸ್ಟಾಗ್ರಾಂ ಫೋಟೊಗಳಿಂದಾಗಿಯೇ. ಕಸಿನ್‌ ಖುಷಿ ಕಪೂರ್‌ ಜೊತೆ ಒಂದೇ ಬಗೆಯ ಸ್ಟೈಲಿಶ್‌ ಉಡುಪು ಧರಿಸಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಅದು ವೈರಲ್ ಆಗಿದೆ. ಫೋಟೊಗೆ ಶನಾಯಾ ತಂದೆ ತಾಯಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಪೂರ್‌ ಮನೆತನದ ತಮ್ಮದೇ ವಯಸ್ಸಿನ ಸೆಲೆಬ್ರಿಟಿಗಳು ಶನಾಯಾ ಜತೆ ಸುತ್ತಾಡುವುದು, ಹೀಗೆ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುವುದು ಸಾಮಾನ್ಯ. ಶ್ರೀದೇವಿ–ಬೋನಿ ಕಪೂರ್‌ ಮಗಳು ಜಾಹ್ನವಿ ಕಪೂರ್‌ ಕೂಡಾ ಆಗೀಗ ಸೇರುವುದಿದೆ. ಶಾರುಖ್‌ ಖಾನ್‌ ಮಗಳು ಸುಹಾನಾ ಖಾನ್‌, ಚುಂಕಿ ಪಾಂಡೆ ಮಗಳು ಅನನ್ಯಾ ಪಾಂಡೆಯಂತೂ ಶನಾಯಾ ಅಚ್ಚುಮೆಚ್ಚಿನ ಜೋಡಿ.

ಹುಡುಗಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬಿಂದಾಸ್‌ ಫೋಟೊಗಳನ್ನು ಅಪ್‌ಲೋಡ್‌ ಮಾಡಿ, ಬರುವ ಲೈಕ್ಸ್‌, ಕಮೆಂಟ್‌ಗಳನ್ನು ಎಣಿಸುತ್ತಾ ಕೂತಿದ್ದರೆ, ಕಪೂರ್‌ ಮನೆತನದ ಹೆಚ್ಚಿನ ಮಕ್ಕಳಂತೆ ಸಿನಿಮಾದ ಮೂಲಕವೇ ಶನಾಯಾ ಕೂಡಾ ಬಿ ಟೌನ್‌ ಪ್ರವೇಶಿಸುತ್ತಾರೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಸಂಜಯ್‌ ಮತ್ತು ಮೆಹೀಪ್‌ ದಂಪತಿಗೆ ಮಗಳು ನಟನೆಯ ಮಜಲುಗಳನ್ನು ಬೇರೆ ರೀತಿಯಿಂದ ಕಲಿಯಲಿ ಎಂಬ ಆಸೆಯಿತ್ತು. ಮಗಳ ಆಸಕ್ತಿ ಇದ್ದುದೂ ಅದೇ. ಹಾಗಾಗಿ ಸೋನಂ ಕಪೂರ್ ಮತ್ತು ಅರ್ಜುನ್‌ ಕಪೂರ್‌ ಅವರಂತೆ ಶನಾಯಾ ಕೂಡಾ ಸಹನಿರ್ದೇಶಕಿಯಾಗಿ ಬಾಲಿವುಡ್‌ಗೆ ಕಾಲಿಟ್ಟರು. 

ಮಗಳಿಗೆ ಬಾಲಿವುಡ್‌ ಕಲಿಕೆಯ ಪಾಠಶಾಲೆಯಾಗಲಿ, ನಟನೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ ಎಂದು ಅಪ್ಪ ಅಮ್ಮ ಬೆನ್ನುತಟ್ಟಿದರು. ಜಾಹ್ನವಿ ನಟನೆಯ ‘ಗುಂಜನ್‌ ಸಕ್ಸೇನಾ’ ಬಯೋಪಿಕ್‌ನಲ್ಲಿ ಶನಾಯಾ ನಿರ್ದೇಶನದ ಮಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಅಪ್ಪ ಅಮ್ಮ ಮತ್ತು ಮಗಳು ಲೆಕ್ಕಾಚಾರ ಹಾಕಿರುವಂತೆ ಮುಂದಿನ ವರ್ಷ ಕಪೂರ್‌ ಮನೆತನದ ಈ ಬೆಡಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾಳೆ.

ಹೀಗೆ, ಶನಾಯಾ ಸುದ್ದಿಯಾಗಲೆಂದೇ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಹಾಕುತ್ತಿರಬಹುದು. ಆದರೂ ಅವಳು ಸುಮ್ಮನೆ ಸುದ್ದಿಯಾಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !