ಶುಕ್ರವಾರ, ಸೆಪ್ಟೆಂಬರ್ 17, 2021
25 °C

‘ಡೈನೊಸಾರ್‌ ನೇಮ್ಡ್‌ ನಿರ್ಮಲ’ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿ ಮೂವ್‌ ಥಿಯೇಟರ್‌ನ ಮಕ್ಕಳ ವಿಭಾಗವಾದ ಟೈನಿ ಟೇಲ್ಸ್‌ ತಂಡದಿಂದ ‘ಡೈನೊಸಾರ್‌ ನೇಮ್ಡ್‌ ನಿರ್ಮಲ’ ಸಂವಾದಾತ್ಮಕ ನಾಟಕ ಪ್ರದರ್ಶನಗೊಳ್ಳಲಿದೆ.

‘ನಿರ್ಮಲ’ ಎಂಬ ನಿಗೂಢ ಪ್ರಾಣಿಯ ಬಗ್ಗೆ ಕಥೆಯನ್ನು ಹೆಣೆಯಲಾಗಿದೆ. ಈ ನಾಟಕದ ಪಾತ್ರಧಾರಿ ಗೋವಿಂದ್ ಅಂಕಲ್‌ ಅವರಿಗೆ ಮಾತ್ರ ‘ನಿರ್ಮಲ’ ಡೈನೊಸಾರ್‌ ಬಗ್ಗೆ ಮಾಹಿತಿ ಇರುತ್ತದೆ. ನಾಲ್ಕು ಮಕ್ಕಳು ಈ ಪ್ರಾಣಿಯನ್ನು ಹುಡುಕಿಕೊಂಡು ಹೊರಡುತ್ತಾರೆ. ಈ ನಾಟಕದಲ್ಲಿ ಮೋಜಿನೊಂದಿಗೆ ಮಕ್ಕಳಿಗೆ ಪರಿಸರ ಜ್ಞಾನವನ್ನೂ ನೀಡಲಾಗಿದೆ. ಜಾಗತಿಕ ತಾಪಮಾನ ಏರಿಕೆಯ ಬಗ್ಗೆಯೂ ಸಾಕಷ್ಟು ಸಂಗತಿಯನ್ನು ನಾಟಕದ ಮೂಲಕ ಹೇಳಲಾಗಿದೆ.

ಈ ‘ನಿರ್ಮಲ’ ಕೊನೆಗೂ ಮಕ್ಕಳಿಗೆ ಸಿಗುತ್ತದೆಯೇ? ನಿರ್ಮಲ ಎಂದರೆ ನಿಜವಾಗಿಯೂ ಏನಾಗಿರಬಹುದು? ಎಂಬ ಕುತೂಹಲದೊಂದಿಗೆ ನಾಟಕ ಆರಂಭವಾಗುತ್ತದೆ. ನಿರ್ದೇಶನ–ಅಭಿಷೇಕ್‌ ಅಯ್ಯಂಗಾರ್‌. ಸ್ಥಳ–ಪ್ರಯೋಗ್‌ ಥಿಯೇಟರ್‌, ಬನಶಂಕರಿ, ಸೆಪ್ಟೆಂಬರ್‌ 29, ರಾತ್ರಿ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು