ಮಲ್ಲೇಶ್ವರಂನಲ್ಲಿ ಕೃತಿಕಾ ಗಾಯನ

7

ಮಲ್ಲೇಶ್ವರಂನಲ್ಲಿ ಕೃತಿಕಾ ಗಾಯನ

Published:
Updated:
Prajavani

‘ಮಲ್ಲೇಶ್ವರಂ ಸಂಗೀತ ಸಭಾ’ ನಗರದ ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಒಂದು. ಏಳು ದಶಕಗಳಿಂದ ನಿರಂತರವಾಗಿ ಸಂಗೀತ ಪ್ರಿಯರ ಮನತಣಿಸುತ್ತಾ ಬರುತ್ತಿದೆ.

2018ರ ಕೊನೆಯ ಕಾರ್ಯಕ್ರಮವಾಗಿ ಕೃತಿಕಾ ಶ್ರೀನಿವಾಸನ್ ಗಾಯನ ಕಾರ್ಯಕ್ರಮವನ್ನು ಮಲ್ಲೇಶ್ವರದ ರಾಮಮಂದಿರದಲ್ಲಿ ಏರ್ಪಡಿಸಲಾಗಿತ್ತು. ಸಂಗೀತ ದಿಗ್ಗಜರು ಈ ಹಿಂದೆ ಪಾಲಿಸಿಕೊಂಡು ಬರುತ್ತಿದ್ದ ಸಾಂಪ್ರದಾಯಿಕ ಅಚ್ಚುಕಟ್ಟುತನ, ಕಛೇರಿಯಉದ್ದಗಲಕ್ಕೂ ಪ್ರತಿಧ್ವನಿಸಿತು.

ಆಹಿರ್ ಭೈರವ್ ರಾಗದಲ್ಲಿ ಉಗಾಬೊಗ ಪ್ರಸ್ತುತಪಡಿಸಿ ಸದಾಶಿವ ಬ್ರಂಹೇಂದ್ರರ ಪಿಬರೆ ರಾಮರಸಂ ಕೃತಿಯಲ್ಲಿ ಕಛೇರಿ ಸಂಪನ್ನಗೊಂಡಿತು.

ಮನೋಧರ್ಮ ಭಾಗವಾದ, ರಾಗಾಲಾಪನೆ ಸ್ವರಪ್ರಸ್ತಾರಗಳಲ್ಲಿ ಜ್ಯೋತ್ಸ್ನಾ ಮಂಜುನಾಥ್ ಪಿಟೀಲಿನಲ್ಲಿ ಅಷ್ಟೇ ಅನುಸರಣೀಯವಾಗಿ ನುಡಿಸಿದರು. ದೀಪಿಕಾ ಶ್ರೀನಿವಾಸನ್ ‌ಮೃದಂಗ ಹಾಗೂ ಚಿದಾನಂದರ ಮೊರ್ಚಿಂಗ್, ಸೊಗಸಾದ ಹದಮಿಳಿತ ಲಯ ಜಮಾವಣೆ ಕಛೇರಿಯುದ್ದಕ್ಕೂ ಮನೋಹರವಾಗಿತ್ತು.

-ಎಸ್.ಕೆ.ಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !