‘ನಾವು ಕಥೆಗಳನ್ನು ಹೇಳುವುದೇಕೆ?’

‘ಮಕ್ಕಳಿಗೆ ನಿದ್ದೆ ಬರಿಸಲು’, ‘ಜನರ ಗಮನ ಹಿಡಿದಿಡಲು’.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಜ್ಯೋತಿಪಾಳ್ಯದಲ್ಲಿರುವ ‘ಅಜ್ಜೀಸ್ ಲರ್ನಿಂಗ್ ಸೆಂಟರ್’ನಲ್ಲಿ ನಾಟಕ ರಚನೆ ಕಾರ್ಯಾಗಾರದಲ್ಲಿ ತರಬೇತಿ ಪಡೆಯುತ್ತಿದ್ದ ಮಕ್ಕಳು ನೀಡಿದ ಉತ್ತರಗಳಿವು.

ಬೆಂಗಳೂರಿನಿಂದ ಒಂದು ಗಂಟೆ ಪ್ರಯಾಣ ದೂರ ಇರುವ ಜ್ಯೋತಿಪಾಳ್ಯ ಪುಟ್ಟ ಹಳ್ಳಿ. ಈ ಗ್ರಾಮೀಣ ಪ್ರದೇಶದಲ್ಲಿ ಕಲಿಕೆ, ಅನ್ವೇಷಣೆ ಮತ್ತು ಪರಿವರ್ತನೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಈ ಸಂಸ್ಥೆ ಪ್ರಯತ್ನಿಸುತ್ತಿದೆ.

‘ನಮ್ಮ ಸುತ್ತಮುತ್ತಲ ಪರಿಸರ, ಈ ನೆಲದ ಕಥೆಗಳು, ನಮ್ಮ ಜನರ ಮತ್ತು ತಲೆಮಾರುಗಳಿಂದ ಮೌಖಿಕವಾಗಿ ಬಂದಿರುವ ಜನಪದವು ಹೊಸ ಮತ್ತು ಸಬಲೀಕರಣದ ಕಥನಗಳ ಹುಟ್ಟಿಗೆ ಕಾರಣವಾಗುತ್ತದೆ. ಇದನ್ನು ತಿಳಿಸಿಕೊಡುವುದು ನಮ್ಮ ಕಾರ್ಯಾಗಾರದ ಉದ್ದೇಶ’ ಎಂದು ತರಬೇತಿ ನೀಡಿದ ರಂಗಕರ್ಮಿ ಅಕ್ಷಯ್ ಗೌತಮ್ ಹೇಳುತ್ತಾರೆ.

ಅವರು ಅಲ್ಲಿನ ವಿದ್ಯಾರ್ಥಿಗಳಿಗೆ ‘ಸೃಷ್ಟಿ ಮತ್ತು ಸಮುದಾಯದ ಕಥನ’ ಎನ್ನುವ ಹತ್ತು ದಿನಗಳ ಕಾರ್ಯಾಗಾರ ನಡೆಸಿದ್ದಾರೆ. ಬಾಲ್ಯವನ್ನು ‘ರೀಲ್ಸ್’ನಲ್ಲಿ ಕಳೆಯುವ ಬದಲು, ಸೃಜನಾತ್ಮಕ ಸಂಗತಿಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.

ಸ್ಥಳೀಯ ಭಾಷೆ, ಸಂಸ್ಕೃತಿಯಿಂದ ಬಂದಿರುವ ಜನಪದ ಗೀತೆಗಳು, ಕಥೆಗಳು ಮತ್ತು ಜೀವನಾನುಭವಗಳನ್ನು ಮಕ್ಕಳಿಗೆ ದಾಟಿಸುವ ಪ್ರಯತ್ನ ಅದಾಗಿತ್ತು. ಅಕ್ಷಯ್ ಮತ್ತು ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಸೇರಿ ಹದಿಹರೆಯದ ವಿಷಯಗಳನ್ನು ಆಧರಿಸಿದ ನಾಟಕ ರಚನೆಯನ್ನು ಪ್ರೋತ್ಸಾಹಿಸಲು ಈ ತರಬೇತಿ ಶಿಬಿರವನ್ನು ವಿನ್ಯಾಸಗೊ
ಳಿಸಿದ್ದರು.

ಮಕ್ಕಳ ನಾಟಕಗಳನ್ನು ಬರೆಯುವ ಆಸಕ್ತಿಯುಳ್ಳವರಿಗೆ ತರಬೇತಿ ನೀಡುವುದು, ಸಮಕಾಲೀನ ರಂಗ ನಿರ್ದೇಶಕರ ಸಹಯೋಗದೊಂದಿಗೆ ಅವರ ಬರಹಗಳನ್ನು ರಂಗಪ್ರಯೋಗಕ್ಕೆ
ತಕ್ಕಂತೆ ಸಿದ್ಧಪಡಿಸುವುದು ಅವರ ಗುರಿಯಾಗಿತ್ತು.

ಇದರಲ್ಲಿ ವಿವಿಧ ವಯೋಮಾನದವರು ಇದ್ದರು. ಮಕ್ಕಳಿಗೆ ಅದು ಪ್ರೀತಿಯ ‘ಅಜ್ಜಿ ಮನೆ’. ದಖನ್ ಪ್ರಸ್ಥಭೂಮಿಯ ಗ್ರಾನೈಟ್ ಬೆಟ್ಟಗಳು ಮತ್ತು ಬಂಡೆಗಳ ನಡುವೆ ಇರುವ ಈ ಸುಂದರ ತಾಣವು ಗಣಿಗಾರಿಕೆಯಿಂದ ಕಳೆಗುಂದಿದೆ. ಸ್ಥಳೀಯ ಜನಪದ ಕಥೆಗಳು, ಸುತ್ತಮುತ್ತಲಿನ ಬಂಡೆ, ಪ್ರಕೃತಿಯೇ ಕಾರ್ಯಾಗಾರದ ವಿಷಯ ವಸ್ತುಗಳಾಗಿದ್ದವು. ಆಟಗಳು ಮತ್ತು ಚಟುವಟಿಕೆಗಳ ಮೂಲಕ ವಿವಿಧ ರಂಗ ತಂತ್ರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಇಲ್ಲಿ ತರಬೇತಿ ನೀಡಿದ್ದಾರೆ.

‘ನಾವು ಶಿಬಿರದಲ್ಲಿ ಐವತ್ತೈದು ಜನಪದ ಕಥೆಗಳನ್ನು ಹಂಚಿಕೊಂಡಿದ್ದೇವೆ. ಇಲ್ಲಿದ್ದವರೆಲ್ಲ ಜನಪದ ಕಥೆಗಳನ್ನೇ ಸ್ಫೂರ್ತಿಯಾಗಿರಿಸಿಕೊಂಡು ನಾಟಕಗಳನ್ನು ಸಿದ್ಧಪಡಿಸಿದ್ದಾರೆ. ಇವುಗಳನ್ನು ಸಮಕಾಲೀನ ರಂಗ ನಿರ್ದೇಶಕರೊಂದಿಗೆ ಚರ್ಚಿಸುತ್ತೇವೆ. ಆಯ್ದ ನಾಟಕಗಳು ಏಪ್ರಿಲ್ನಲ್ಲಿ ಇಲ್ಲಿಯೇ ಪ್ರದರ್ಶನಗೊಳ್ಳಲಿವೆ’ ಎಂದರು ಅಕ್ಷಯ್.

ನೆಲದ ಸಂಸ್ಕೃತಿಯೊಂದಿಗೆ ಆಳವಾಗಿ ಬೆಸೆದುಕೊಂಡ ವಿಷಯಗಳನ್ನೇ ತರಬೇತಿಗೆ ಬಳಸಲಾಗುತ್ತದೆ. ಶಿಬಿರಾರ್ಥಿಯೊಬ್ಬರು ಬಂಡೆಯೊಂದರ ಕಥೆಯನ್ನು ನಾಟಕ ರೂಪದಲ್ಲಿ ಬರೆದಿದ್ದಾರೆ ಎಂದೂ ಅವರು ತಿಳಿಸಿದರು. ಮಕ್ಕಳು, ಹದಿಹರೆಯವದವರು, ಶಿಕ್ಷಕಿ, ವೈದ್ಯಕೀಯ ಸಿಬ್ಬಂದಿ ಸೇರಿ ವಿವಿಧ ಹಿನ್ನೆಲೆ ಇರುವವರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದು ವಿಶೇಷ. ‘ಹೀಗೊಂದು ಕಾರ್ಯಾಗಾರ ಇದೆ ಎಂದು ಪ್ರಚಾರ ಮಾಡಿದಾಗ, ಜನಪದ ಆಧಾರಿತ ನಾಟಕಗಳನ್ನು ಬರೆಯಲು ಆಸಕ್ತಿ ಇರುವ ಹದಿಹರೆಯದ ಕೆಲವರು ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಮಕ್ಕಳೂ ಹೆಸರು ನೋಂದಾಯಿಸಿಕೊಂಡಿದ್ದು, ನಮಗೆ ವಿಶೇಷವೂ ಆಶ್ಚರ್ಯವೂ ಆಯಿತು. ಇದರಿಂದ ಕಾರ್ಯಾಗಾರ ಹೆಚ್ಚು ವೈವಿಧ್ಯಮಯವಾಯಿತು’ ಎಂದು ಕೋಟಿಗಾನಹಳ್ಳಿ ರಾಮಯ್ಯ ಅನುಭವ ಹಂಚಿಕೊಂಡರು.

ರಂಗಭೂಮಿಯ ಕಥೆಗಳನ್ನು ಬರೆಯುವ ಬಗ್ಗೆ ತರಬೇತಿ ನಡೆಸಿಕೊಟ್ಟ ಲಕ್ಷ್ಮಣ್ ಕೆ.ಪಿ ಮಾತನಾಡಿ, ‘ನಾವು ಯಾವುದೇ ಶಾಸ್ತ್ರೀಯ ಕೃತಿಗಳನ್ನಾಗಲಿ, ನಾಟಕಗಳನ್ನು ಇಲ್ಲಿ ಹೇಳಿಕೊಡಲಿಲ್ಲ. ತರಕಾರಿ ವ್ಯಾಪಾರಿಯೊಂದಿಗೆ ಚೌಕಾಶಿ ಮಾಡುವಂಥ ದೈನಂದಿನ ಬದುಕಿನ ಸನ್ನಿವೇಶಗಳ ಬಗ್ಗೆಯೇ ಶಿಬಿರಾರ್ಥಿಗಳೊಂದಿಗೆ ಮಾತನಾಡಿದೆವು. ಬದುಕಿನ ಅನುಭವಗಳಿಂದ ಕಥೆಗಳನ್ನು ಹೆಣೆಯುವುದು ಎಂದರೆ ಪ್ರದರ್ಶನಕಾರ ಮತ್ತು ಪ್ರೇಕ್ಷಕರಿಬ್ಬರ ಅನುಭವಗಳನ್ನು ಗುರುತಿಸುವುದು ಎಂದರ್ಥ. ಹಾಗಾದ ಮಾತ್ರವೇ ಕಥೆ ನಮ್ಮದಾಗುತ್ತದೆ’ ಎಂದರು.

ಎಂಬತ್ತಾರು ವರ್ಷದ ಜನಪದ ಗಾಯಕಿ ಗಂಗಮ್ಮ, ಲೇಖಕ ದಯಾನಂದ, ರಂಗಕರ್ಮಿ ಸತೀಶ್ ತಿಪಟೂರು, ನಾಟಕಕಾರ ಟಿ.ಎಚ್. ಲವಕುಮಾರ, ಸೋಬಾನೆ ರಾಮಯ್ಯ, ರಂಗಕರ್ಮಿ ಚಂದ್ರಶೇಖರ್ ನಿನಾಸಂ ಸೇರಿ ಹಲವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದ್ದಾರೆ.

ಕಥೆಯಿಂದ ರಂಗಕ್ಕೆ

‘ಈಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಅಪರಾಧ ಪ್ರವೃತ್ತಿ ಹೆಚ್ಚುತ್ತಿದೆ. ಹಿಂದೆ ಹದಿಹರೆಯದ ಕೊನೆಯ ಹಂತದಲ್ಲಿ ಕಂಡುಬರುತ್ತಿದ್ದ ಮಾನಸಿಕ ಸಮಸ್ಯೆಗಳು ಈಗ ಒಂಬತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೇ ಕಾಣಿಸಿಕೊಳ್ಳುತ್ತಿವೆ. ಮುಂದಿನ ಪೀಳಿಗೆಗೆ ಜಾನಪದ ಪ್ರಜ್ಞೆಯನ್ನು ವರ್ಗಾಯಿಸುವುದೇ ಇದಕ್ಕಿರುವ ಪರಿಹಾರ. ಇದು ಇಂದಿನ ತುರ್ತು ಹೌದು’ ಎನ್ನುವುದು ಎರಡು ದಶಕಗಳಿಗೂ ಹೆಚ್ಚು ಕಾಲ ಮಕ್ಕಳೊಂದಿಗೆ ಕೆಲಸ ಮಾಡಿರುವ ಕೋಟಿಗಾನಹಳ್ಳಿ ರಾಮಯ್ಯ ಅವರ ಮಾತು.

‘ಸಾಮಾಜಿಕ ಜಾಲತಾಣಗಳು ಯುವಜನತೆಯನ್ನು ಅವರ ಬೇರುಗಳಿಂದ ದೂರ ತಳ್ಳುತ್ತಿವೆ. ‘ರೀಲ್’ಗಳು ಯುವಜನರನ್ನು ಆಳುತ್ತಿವೆ’ ಎಂದು ಆತಂಕ ವ್ಯಕ್ತಪಡಿಸುವ ಅವರು, ಮಕ್ಕಳನ್ನು ಅವರ ವಾಸ್ತವ ಬದುಕಿಗೆ ಹತ್ತಿರ ತರುವುದು ಮಾತ್ರವೇ ಅವರನ್ನು ಅನಿಶ್ಚಿತ ಭವಿಷ್ಯದಿಂದ ರಕ್ಷಿಸಲು ಮತ್ತು ಅವರ ಬದುಕಿಗೆ ಒಂದು ಭದ್ರ ಬುನಾದಿ ನೀಡಲು ಇರುವ ಏಕೈಕ ಮಾರ್ಗ’ ಎನ್ನುವುದು ಅವರ ನಂಬಿಕೆ.

‘ಅಜ್ಜಿ ಮನೆ’ಯಲ್ಲಿ ಬೆಳಗುತ್ತಿರುವ ಈ ಕಥೆಯ ದೀಪ, ಇನ್ನಷ್ಟು ಹಳ್ಳಿಗಳ ಮನಗಳಲ್ಲಿ ಬೆಳಕು ಚೆಲ್ಲಲಿ ಎನ್ನುವುದು ಅಲ್ಲಿನ ಪ್ರತಿಯೊಬ್ಬರ ಆಶಯವಾಗಿದೆ.

ಅಜ್ಜಿ ಮನೆ ಕಥೆ

ಗ್ರಾಮಸ್ಥರ, ಅದರಲ್ಲೂ ಪ್ರಮುಖವಾಗಿ ಹೆಣ್ಣುಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸಲು, ಕಾರ್ಯಾಗಾರಗಳು ಮತ್ತು ವೃತ್ತಿಪರ ಕೌಶಲಗಳ ತರಬೇತಿ ನೀಡಲು ಶಿಕ್ಷಣ ತಜ್ಞೆ ಸಬಿಹಾ ಹಶ್ಮಿ 2022ರಲ್ಲಿ ‘ಅಜ್ಜೀಸ್ ಲರ್ನಿಂಗ್ ಸೆಂಟರ್’ ಅನ್ನು ಸ್ಥಾಪಿಸಿದರು. ಸ್ಥಳೀಯ ಮಕ್ಕಳ ಪ್ರೀತಿಯ ‘ಅಜ್ಜಿ’ಯಾಗಿದ್ದ ಸಬಿಹಾ, ಈ ಕೇಂದ್ರ ಪ್ರಾರಂಭವಾದ ಒಂದು ತಿಂಗಳಲ್ಲೇ ನಿಧನರಾದರು. ಆದರೆ ಅವರ ಕನಸುಗಳಿಗೆ ‘ಅಜ್ಜಿ ಮನೆ’ಯಲ್ಲಿ ಜೀವಬಂದಿದೆ. ಅವರು ಹಾಕಿಕೊಟ್ಟ ಅಡಿಪಾಯದಲ್ಲೇ ಸಂಸ್ಥೆ ಮುನ್ನಡೆಯುತ್ತಿದೆ. ಮಾಗಡಿ ತಾಲ್ಲೂಕಿನ ನಲವತ್ತಕ್ಕೂ ಹೆಚ್ಚು ಗ್ರಾಮಗಳ ಮಕ್ಕಳು, ಯುವತಿಯರು ಮತ್ತು ಮಹಿಳೆಯರು ಇಲ್ಲಿಗೆ ಬಂದು ಹೊಲಿಗೆ ತರಬೇತಿ, ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಈ ತಂಡವು ಹಕ್ಕಿ ವೀಕ್ಷಣೆ, ಕಲೆ ಮತ್ತು ರಂಗಭೂಮಿಯ ಕಾರ್ಯಾಗಾರಗಳನ್ನೂ ಏರ್ಪಡಿಸಿ ಜನರ ಬೌದ್ಧಿಕ ವಿಕಸನಕ್ಕೆ ಕೆಲಸ ಮಾಡುತ್ತಿದೆ.

ಈಗ ಸಂಸ್ಥೆಯನ್ನು ಸಬಿಹಾ ಅವರ ಸಹೋದರಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಶಬನಮ್ ಹಶ್ಮಿ ಮುನ್ನಡೆಸುತ್ತಿದ್ದಾರೆ.

ಅನುವಾದ: ಅಬ್ದುಲ್ ರಹಿಮಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.