ಭಾನುವಾರ, ನವೆಂಬರ್ 28, 2021
22 °C

ಕೆಬಿಸಿ 13: 'ಶಾಂದಾರ್‌ ಶುಕ್ರವಾರ್‌'ನಲ್ಲಿ ಅಮಿತಾಭ್‌ ಬಚ್ಚನ್‌ ಮಗಳು, ಮೊಮ್ಮಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ನಡೆಸಿ ಕೊಡುವ 'ಕೌನ್‌ ಬನೇಗಾ ಕರೋಡ್‌ಪತಿ 13 (ಕೆಬಿಸಿ 13)' ಕಾರ್ಯಕ್ರಮದ 'ಶಾಂದಾರ್‌ ಶುಕ್ರವಾರ್' ಎಪಿಸೋಡ್‌ನಲ್ಲಿ ವಿಶೇಷ ಅತಿಥಿಗಳಾಗಿ ಬಿಗ್‌ ಬಿ ಮಗಳು ಶ್ವೇತಾ ಬಚ್ಚನ್‌ ನಂದ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದ ಅವರು ಭಾಗವಹಿಸಲಿದ್ದಾರೆ.

ಶ್ವೇತಾ ಮತ್ತು ನವ್ಯಾ ಇದೇ ಮೊದಲ ಬಾರಿಗೆ ಕೆಬಿಸಿಯ ಹಾಟ್‌ ಸೀಟ್‌ನಲ್ಲಿ ಕೂರಲಿದ್ದಾರೆ. ಮಗಳು ಮತ್ತು ಮೊಮ್ಮಗಳ ಜೊತೆಗಿನ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಮಿತಾಭ್‌, ಇಬ್ಬರೂ ಕೆಬಿಸಿಯಲ್ಲಿ ಪಾಲ್ಗೊಳ್ಳುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 'ಪುತ್ರಿಯರೇ ಉತ್ತಮರು. ವಿಶ್ವವೇ ಇವರದ್ದು' ಎಂದು ಪೋಸ್ಟ್‌ನಲ್ಲಿ ಅಮಿತಾಭ್‌ ಬರೆದಿದ್ದಾರೆ.

ಬಚ್ಚನ್‌ ಅವರ ಎಡಬದಿಯಲ್ಲಿ ನಿಂತಿರುವ ನವ್ಯಾ ಅವರು ತಿಳಿ ಬಿಳಿ ಬಣ್ಣದ ವಸ್ತ್ರದ ಮೇಲೆ ನೀಲಿ ಕೋಟು ಧರಿಸಿದ್ದಾರೆ. ಬಲಬದಿಯಲ್ಲಿ ಅಮಿತಾಭ್‌ ಅವರನ್ನು ನೋಡುತ್ತ ಮುಗುಳ್ನಗುತ್ತಿರುವ ಶ್ವೇತಾ ಗಾಢ ನೀಲಿ ಬಣ್ಣದ ಧಿರಿಸಿನಲ್ಲಿದ್ದಾರೆ.

ಉದ್ಯಮಿಯಾಗಿ ಗುರುತಿಸಿಕೊಂಡಿರುವ ನವ್ಯಾ ನವೇಲಿ ನಂದ ಅವರು ಮಹಿಳಾ ಕೇಂದ್ರಿತ ಆರೋಗ್ಯ ಟೆಕ್‌ ಸಂಸ್ಥೆ ಆರಾ ಹೆಲ್ತ್‌ಕೇರ್‌ನ ಸಹ ಸ್ಥಾಪಕರಾಗಿದ್ದಾರೆ. ಇದು ಮಹಿಳೆಯರಿಗೆ ವೈಜ್ಞಾನಿಕ ಆಧಾರಿತ ಆರೋಗ್ಯ ಉತ್ಪನ್ನಗಳನ್ನು ಪೂರೈಸುವ ಸಂಸ್ಥೆಯಾಗಿದೆ.

ನವ್ಯಾ ಅವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಹಿಳಾ ಸಬಲೀಕರಣದ ದ್ಯೇಯವನ್ನಿಟ್ಟುಕೊಂಡು ಸ್ಥಾಪಿಸಲಾಗಿರುವ 'ಪ್ರಾಜೆಕ್ಟ್‌ ನವೇಲಿ'ಯ ಸಹ ಸ್ಥಾಪಕಿಯೂ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು