ಮಂಗಳವಾರ, ಸೆಪ್ಟೆಂಬರ್ 28, 2021
21 °C

Bigg Boss: ಹೋಗುವಾಗಲೂ ಚಕ್ರಿಗೆ ಪ್ರಿಯಾಂಕಾ ಶಾಕ್.. ಚಂದ್ರಚೂಡ್ ಅಶ್ಲೀಲ ಸನ್ನೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಎರಡನೇ ಇನಿಂಗ್ಸ್ ಮೂರನೇ ಎಲಿಮಿನೇಶನ್ನಿನಲ್ಲಿ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಹೊರಹೋಗಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಮಾಡಿದ ಕೆಟ್ಟ ಸನ್ನೆ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು, ಎಲಿಮಿನೇಶನ್ ಘೋಷಣೆ ಬಳಿಕ ಮನೆಯಿಂದ ಹೊರ ನಡೆಯುತ್ತಿದ್ದ ಪ್ರಿಯಾಂಕಾ ಅವರಿಗೆ ಬಿಗ್ ಬಾಸ್ ಮನೆಯ ಸದಸ್ಯರಲ್ಲಿ ಒಬ್ಬರನ್ನು ಈ ವಾರ ಹೊರ ಹೋಗಲು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ನೀಡಿದರು. ಚಕ್ರವರ್ತಿ ಹೆಸರನ್ನು ಸೂಚಿಸಿ ಪ್ರಿಯಾಂಕಾ ಹೊರ ನಡೆದರು. ಪ್ರಿಯಾಂಕಾ ಅವರಿಂದ ಚಕ್ರವರ್ತಿ ನೇರವಾಗಿ ನಾಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸುತ್ತಿದ್ದಂತೆ ಕೋಪಗೊಂಡ ಚಕ್ರವರ್ತಿ ಚಂದ್ರಚೂಡ್ ಅವರು ಕ್ಯಾಮೆರಾಗೆ ಮಧ್ಯದ ಬೆರಳು ತೋರಿಸುವ ಮೂಲಕ ಕೆಟ್ಟ ವರ್ತನೆ ತೋರಿದ್ದಾರೆ.

ಅಷ್ಟಕ್ಕೂ ಸುಮ್ಮನಾಗದೆ ಮತ್ತೊಮ್ಮೆ ಮೇಕಪ್ ಕೊಠಡಿಯಲ್ಲೂ ಇದೇ ವರ್ತನೆ ತೋರಿದ್ದಾರೆ.

ಬುದ್ಧಿ ಕಲಿಯದ ಚಕ್ರವರ್ತಿ: ಈ ಹಿಂದೆ ವೈಷ್ಣವಿ ವಿಚಾರದಲ್ಲಿ ಸುಳ್ಳು ಹೇಳಿ ಸಿಕ್ಕಾಕೊಂಡು ಪ್ರಶಾಂತ್ ಸಂಬರಗಿ ಜೊತೆ ಜಗಳ ತೆಗೆದಿದ್ದ ಚಕ್ರವರ್ತಿ ಚಂದ್ರಚೂಡ್, ಅಸಭ್ಯ ಪದಗಳನ್ನು ಬಳಕೆ ಮಾಡಿದ್ದರು. ಇದು ವೀಕ್ಷಕರು ಕೇಳಬಾರದೆಂದು ಬೀಪ್ ಸೌಂಡ್ ಹಾಕಲಾಗಿತ್ತು. ಬಳಿಕ, ವಾರಾಂತ್ಯದಲ್ಲಿ ತರಾಟೆಗೆ ತೆಗೆದುಕೊಂಡಿದ್ದ ಸುದೀಪ್, ನಾವು ಮನೆ ಮಂದಿಯೆಲ್ಲ ಕುಳಿತು ಕಾರ್ಯಕ್ರಮ ನೋಡಬೇಕು. ಈ ರೀತಿ ಪದ ಬಳಕೆ ಸರಿಯೇ ಅದೂ ವಿದ್ಯೆಯೇ ಎಂದು ಪ್ರಶ್ನಿಸಿದ್ದರು. ಬಳಿಕ, ತಿದ್ದಿಕೊಳ್ಳುವುದಾಗಿ ಚಕ್ರವರ್ತಿ ಹೇಳಿದ್ದರು. ಆದರೆ, ಮತ್ತೆ ಅದೇ ಚಾಳಿಯನ್ನೇ ಮುಂದುವರಿಸಿದ್ದಾರೆ.

ಎಣ್ಣೆ–ಸೀಗೆಕಾಯಿಯಂತಿದ್ದ ಪ್ರಿಯಾಂಕಾ–ಚಕ್ರವರ್ತಿ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಪ್ರಿಯಾಂಕಾ ತಿಮ್ಮೇಶ್ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ಮೊದಲಿನಿಂದಲೂ ಹೊಂದಾಣಿಕೆ ಇರಲಿಲ್ಲ. ಚಿಕ್ಕ ವಿಷಯವೂ ಜಗಳಕ್ಕೆ ಕಾರಣವಾಗುತ್ತಿತ್ತು. ನನ್ನನ್ನು ಫೇಕ್ ಎಂದು ಕರೆದರೆಂಬ ಕಾರಣಕ್ಕೆ ಚಕ್ರವರ್ತಿ ಜೊತೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಚಕ್ರವರ್ತಿ ವ್ಯಂಗ್ಯವಾಗಿ ಮಾತನಾಡುತ್ತಾರೆ ಎಂದು ಸುದೀಪ್ ಬಳಿಯೂ ಈ ವಾರಾಂತ್ಯದಲ್ಲಿ ಪ್ರಿಯಾಂಕಾ ದೂರಿದ್ದರು. ಮನೆಯಲ್ಲಿ ಚಕ್ರವರ್ತಿ ವಿಶ್ ಮಾಡಿದಾಗಲೂ ಪ್ರಿಯಾಂಕಾ ಉತ್ತರಿಸಿರಲಿಲ್ಲ. ಇದರಿಂದ, ಕೋಪಗೊಂಡ ಚಕ್ರವರ್ತಿ ಗೊಣಗಾಡಿದಾಗ ತಿರುಗಿಸಿ ಬೈದಿದ್ದರು. ಏಯ್ ನನ್ನ ಸಹವಾಸಕ್ಕೆ ಬರಬೇಡ ಎಂದು ಪ್ರಿಯಾಂಕಾ ಕಿಡಿ ಕಾರಿದ್ದೂ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು