ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bigg Boss Kannada 10 | ಎಲ್ಲರ ಕಣ್ಣು ಡ್ರೋನ್‌ ಪ್ರತಾಪ್‌ ಮ್ಯಾಲೆ

Published 14 ಅಕ್ಟೋಬರ್ 2023, 4:55 IST
Last Updated 14 ಅಕ್ಟೋಬರ್ 2023, 4:55 IST
ಅಕ್ಷರ ಗಾತ್ರ

ಬಿಗ್ ಬಾಸ್‌ ಶುರುವಾಗಿ ಒಂದು ವಾರ ಕೆಳೆಯುತ್ತಾ ಬಂದಿದೆ. ಮನೆಯಲ್ಲಿ ಸ್ಥಾನ ಉಳಿಸಿಕೊಳ್ಳಲು ಎಲ್ಲ ಸ್ಪರ್ಧಿಗಳು ಪೈಪೋಟಿ ನಡೆಸುತ್ತಿದ್ದಾರೆ. ಈ ವಾರ ಮನೆಯಲ್ಲಿ ಉಳಿಯುವವರು ಯಾರು? ಹೊರಗಡೆ ಹೋಗುವವರು ಯಾರು ಎಂಬ ಲೆಕ್ಕಚಾರವೂ ಶುರುವಾಗಿದೆ. ಈ ವಾರವಿಡಿ ಮನೆಯಲ್ಲಿ ಡ್ರೋನ್‌ ವಿಷಯ ಹೆಚ್ಚು ಸದ್ದು ಮಾಡಿದೆ.

ಡ್ರೋನ್‌ ವಿಚಾರದಲ್ಲಿ ಹಿಗ್ಗಾಮುಗ್ಗಾ ಟ್ರೋಲ್‌ಗೆ ಒಳಗಾಗಿ ಇದೀಗ ಬಿಗ್‌ ಬಾಸ್‌ ಮನೆ ಪ್ರವೇಶಿಸಿರುವ ಪ್ರತಾಪ್‌ ಅವರಿಗೆ ದೊಡ್ಮನೆಯೊಳಗೂ ಡ್ರೋನ್‌ ವಿಷಯವೇ ಮುಳುವಾಗಿದೆ. ಪ್ರತಿಯೊಂದು ಜಗಳ, ವಾದಕ್ಕೂ ಡ್ರೋನ್ ಎಳೆದು ತಂದು ಪ್ರತಾಪ್‌ ಅವರನ್ನು ಬಾಯಿ ಮುಚ್ಚಿಸುವಲ್ಲಿ ಮನೆಯ ಪ್ರತಿ ಸದಸ್ಯರೆಲ್ಲರೂ ಯಶಸ್ವಿಯಾಗಿದ್ದಾರೆ.

ಪ್ರತಾಪ್‌ ಮತ್ತು ವರ್ತೂರ್‌ ಸಂತೋಷ್‌ ಅವರ ಜಗಳವೂ ಡ್ರೋನ್‌ ವಾದದಲ್ಲಿ ಮುಗಿದು ಹೋಯಿತು. ಸ್ನೇಹಿತ್‌ ಅವರು ಡ್ರೋನ್‌ ಅನ್ನು ‘ಡೋಂಗಿ’ ಎನ್ನುವ ಮೂಲಕ ಪ್ರತಾಪ್‌ ಅವರು ತಿರುಗಿ ವಾದ ಮಾಡದಂತೆ ಯಶಸ್ವಿಯಾಗಿ ಬಾಯಿ ಮುಚ್ಚಿಸಿದ್ದಾರೆ.

‘ಅಡುಗೆ ಮಾಡುವಾಗ ಸ್ವಚ್ಚತೆ ಕಾಪಾಡುತ್ತಿಲ್ಲ’ ಎಂದು ವಿನಯ್‌ ಅವರು ಹೇಳಿದ್ದಾರೆ ಎಂದು ಪ್ರತಾಪ್ ಅವರು ಆರೋಪ ಮಾಡಿದ್ದು, ಇದನ್ನು ವಿನಯ್‌ ನಿರಾಕರಿಸಿದ್ದಾರೆ. ‘ಡ್ರೋನ್‌ನ ರೆಕ್ಕೆ ಪುಕ್ಕ ಎಲ್ಲ ಮುರಿತಿನಿ’ ಎನ್ನುವ ಮೂಲಕ ವಿನಯ್‌, ಪ್ರತಾಪ್‌ ಅವರಿಗೆ ಪರೋಕ್ಷವಾಗಿ ಬೆದರಿಕೆ ಹಾಕಿದಂತೆ ನಡೆದುಕೊಂಡಿದ್ದಾರೆ. ಆರೋಪವನ್ನು ಹಿಂದಕ್ಕೆ ತೆಗೆದುಕೊಳ್ಳಲು ಒಪ್ಪದ ಪ್ರತಾಪ್‌, ಸುದೀಪ್‌ ಅವರ ಮಧ್ಯೆ ಪ್ರವೇಶವೇ ಇದಕ್ಕೆ ಪರಿಹಾರ ಎಂದು ಹೇಳಿ ಅಲ್ಲಿಂದ ತೆರಳಿದರು.

ಇನ್ನು ತುಕಾಲಿ ಸಂತೋಷ್ ಅವರ ಗುರಿಯೇ ಡ್ರೋನ್ ಪ್ರತಾಪ್‌ ಎನ್ನುವ ಹಾಗೆ ಇದೆ. ಈ ವಾರವಿಡಿ ಪ್ರತಾಪ್‌ ಅವರ ಕಾಲೆಳೆಯುವ ಮೂಲಕ ತಮಾಷೆ ಮಾಡಿರುವುದು ನೋಡಬಹುದು. ಸಂತೋಷ್‌ ಅವರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಸ್ಯ ಎಂದರೆ ಇನ್ನೊಬ್ಬರನ್ನು ತಮಾಷೆ ಮಾಡುವುದಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿದ ಪ್ರತಾಪ್‌ ಪರ ಬೆಂಬಲ

ಡ್ರೋನ್‌ ವಿಷಯಕ್ಕೆ ಟ್ರೋಲ್‌ ಮಾಡಿದ ಎಷ್ಟೋ ಸಾಮಾಜಿಕ ಮಾಧ್ಯಮಗಳ ಟ್ರೋಲ್‌ ಪೇಜ್‌ಗಳು ಇದೀಗ ಪ್ರತಾಪ್‌ ಪರ ನಿಂತಿರುವುದು ಕಾಣಬಹುದಾಗಿದೆ. ಅಲ್ಲದೇ ಅದೆಷ್ಟೊ ವೀಕ್ಷಕರ ಮೆಚ್ಚಿನ ಸ್ಪರ್ಧಿಯಾಗಿಯೂ ಪ್ರತಾಪ್ ಹೊರಹೊಮ್ಮಿದ್ದಾರೆ.

ಬಿಗ್ ಬಾಸ್ ಕನ್ನಡ JioCinemaದಲ್ಲಿ 24 ಗಂಟೆ ಉಚಿತವಾಗಿ ಪ್ರಸಾರವಾಗುತ್ತಿದೆ.

ಓದಿ: Bigg Boss Kannada 10 | ಡ್ರೋನ್ ಪ್ರತಾಪ್ ರೊಟ್ಟಿ ಪ್ರತಾಪ್ ಆದ್ರಾ?

ಓದಿ: Bigg Boss Kannada 10 | ಬಿಗ್‌ ಬಾಸ್‌ ಮನೆಯೊಳಗೆ ಮೌನಿಯಾದ ಡ್ರೋನ್‌ ಪ್ರತಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT