ಶುಕ್ರವಾರ, ಏಪ್ರಿಲ್ 23, 2021
28 °C

Bigg Boss 8 | ಕಿರು ವಿಡಿಯೊಗಳ ಮೂಲಕ ಜನಪ್ರಿಯರಾಗಿರುವ ರಘು ಗೌಡ 13ನೇ ಸ್ಪರ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Raghu gowda

ಸಾಮಾಜಿಕ ಜಾಲತಾಣದಲ್ಲಿ ಕಿರು ವಿಡಿಯೊಗಳ ಮೂಲಕ ಜನಪ್ರಿಯರಾಗಿರುವ ರಘು ಗೌಡ, ಏಳೂವರೆ ವರ್ಷ ವಿಪ್ರೊದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಸಿನಿಮಾಗಾಗಿ ಎಂಜಿನಿಯರ್ ಕೆಲಸ ಬಿಟ್ಟರು.

ಫೇಸ್‌ಬುಕ್‌ನಲ್ಲಿ ‘ಮೆಟ್ರೊ ಸಾಗಾ‘, ಎಫ್‌ಎಮ್ ರೇಡಿಯೊ, ಕೆಲವೊಂದು ಟಿವಿ ಗಳಿಗೆ  ವಿಡಿಯೊ, ಆಡಿಯೊ ಕಂಟೆಂಟ್ ಪೂರೈಕೆ ಮಾಡುತ್ತಿದ್ದ ರಘು, ಸೋಷಿಯಲ್ ಮೀಡಿಯಾಗಾಗಿ ಶೋಗಳನ್ನು ಮಾಡಿದ್ದಾರೆ.

‘ನಿದ್ದೆ ಬರದಿದ್ದರೆ ವಿಡಿಯೊ ಮಾಡುವ‘ ಹವ್ಯಾಸವಿರುವ ರಘು ಗೌಡ, ಲಾಕ್‌ಡೌನ್ ಅವಧಿಯಲ್ಲಿ ವಿವಿಧ ವಿಷಯಗಳ ಮೇಲೆ ಹತ್ತಾರು ವಿಡಿಯೊಗಳನ್ನು ಮಾಡಿ, ಹೆಚ್ಚು ಫಾಲೋಯೆರ್ಸ್ ಪಡೆದಿದ್ದಾರೆ. 

ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಲು ಪ್ರಯತ್ನಪಟ್ಟು ಕೈಬಿಟ್ಟರು.  ಈಗ ಕೆಲ ತಿಂಗಳಿನಿಂದ ತಾವೇ ಸ್ವತಂತ್ರವಾಗಿ ವಿಡಿಯೊ ಕಂಟೆಂಟ್ ಸಿದ್ಧ ಮಾಡುತ್ತಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ‘ಮೆಟ್ರೊ ಸಾಗಾ‘ ಮೂಲಕ ಫೇಸ್‌ಬುಕ್‌ನಲ್ಲಿ ಹೆಚ್ಚು ವಿಡಿಯೊಗಳಲ್ಲಿ ಕಾಣಿಸಿಕೊಂಡಿದ್ದರು ರಘು.

ಈಗ ಹದಿಮೂರನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಪ್ರವೇಶಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು