ಶನಿವಾರ, ಸೆಪ್ಟೆಂಬರ್ 18, 2021
21 °C

Bigg Boss 8: ಚಕ್ರವರ್ತಿಯನ್ನು ಸದ್ದಿಲ್ಲದೆ ಹೊರಗೆ ಕಳಿಸಿದ ಬಿಗ್ ಬಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನ ಸೀಸನ್ 8ರ ಎರಡನೇ ಇನಿಂಗ್ಸ್‌ನ 4ನೇ ಸ್ಪರ್ಧಿಯಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಎಲಿಮಿನೇಟ್ ಆಗಿದ್ದಾರೆ.

ಈ ಹಿಂದೆ ಸುದೀಪ್ ಹೇಳಿದಂತೆ ಯಾರಿಗೂ ಗೊತ್ತಾಗದಂತೆ ಸದ್ದಿಲ್ಲದೆ ಚಕ್ರವರ್ತಿ ಚಂದ್ರಚೂಡ್ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಿದ್ದಾರೆ. ವೇದಿಕೆ ಮೇಲೆ ಸುದೀಪ್ ಜೊತೆ ಮಾತನಾಡುವ ಅವಕಾಶ ಮತ್ತು ಮನೆಯ ಸದಸ್ಯರಿಗೆ ಬೈ ಹೇಳುವ ಅವಕಾಶವನ್ನೂ ಚಕ್ರವರ್ತಿಗೆ ಕೊಡಲಿಲ್ಲ.

ಅಶ್ಲೀಲ ಸನ್ನೆ ಮಾಡಿದ್ದರ ಎಫೆಕ್ಟ್?: ಪ್ರಿಯಾಂಕಾ ತಿಮ್ಮೇಶ್ ನಿರ್ಗಮನದ ಸಂದರ್ಭದಲ್ಲಿ ಅಶ್ಲೀಲ ಸನ್ನೆ ಮಾಡುವ ಮೂಲಕ ಚಕ್ರವರ್ತಿ ಚಂದ್ರಚೂಡ್ ಅವರು ವೀಕ್ಷಕರು, ನಿರೂಪಕ ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ದರು. ಅಂದಿನಿಂದ ಅವರ ಬಗ್ಗೆ ಅಭಿಪ್ರಾಯವೇ ಬದಲಾಗಿತ್ತು. ವಾರಾಂತ್ಯದಲ್ಲಿ ಸುದೀಪ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.  ಈ ವಾರದ ದಿನಗಳಲ್ಲಿ ಒಬ್ಬರು ಯಾರಿಗೂ ಗೊತ್ತಾಗದಂತೆ ಮನೆಯಿಂದ ಹೊರ ಹೋಗುತ್ತಾರೆ. ನಾನು ಶನಿವಾರ, ಇಲ್ಲಿಗೆ ಬರುವ ಹೊತ್ತಿಗೆ ನಿಮ್ಮಲ್ಲಿ ಒಬ್ಬರು ಇರುವುದಲ್ಲ ಎಂದು ಹೇಳಿದ್ದರು. ಅದರಂತೆ, ಚಕ್ರವರ್ತಿಯವರನ್ನು ಹೊರಗೆ ಕಳುಹಿಸಲಾಗಿದೆ.

ಹೇಗಿತ್ತು ಎಲಿಮಿನೇಶನ್?: ಮನೆಯ ಟೆಲಿಫೋನ್‌ಗೆ ಕರೆ ಮಾಡಿದ್ದ ಬಿಗ್ ಬಾಸ್ ಒಬ್ಬೊಬ್ಬರನ್ನೇ ಸೇಫ್ ಮಾಡುತ್ತಾ ಬಂದರು. ಕೊನೆಯಲ್ಲಿ ಶಮಂತ್ ಮತ್ತು ಚಂದ್ರಚೂಡ್ ಉಳಿದಿದ್ದರು. ಈ ಸಂದರ್ಭ ಶಮಂತ್ ಬಳಿ ಅವರ ಬಿಗ್ ಬಾಸ್ ಮನೆಯ ಅನುಭವಗಳನ್ನು ವಿಚಾರಿಸಿದ ಬಿಗ್ ಬಾಸ್ ಚಕ್ರವರ್ತಿ ಅವರಿಗೆ ಫೋನ್ ನೀಡಲು ತಿಳಿಸಿದರು. ಬಿಗ್ ಬಾಸ್ ಮನೆಯಲ್ಲಿ ಮಾಡಿದ ತಪ್ಪುಗಳ ಬಗ್ಗೆ ಆತ್ಮಾವಲೋಕನಕ್ಕೆ ಅವಕಾಶ ನೀಡಿದರು. ಆ ಬಳಿಕ, ನಿಮ್ಮ ಪಯಣ ಇಲ್ಲಿಗೆ ಮುಗಿಯಿತು. ಫೋನ್ ಶಮಂತ್ ಕೈಗೆ ಕೊಟ್ಟು ತೆರೆದಿರುವ ಮನೆಯ ಮುಖ್ಯದ್ವಾರದ ಮೂಲಕ ಯಾರಿಗೂ ಗೊತ್ತಾಗದಂತೆ ಹೊರಗೆ ಬನ್ನಿ ಎಂದು ಸೂಚಿಸಿದರು. ಲಿವಿಂಗ್ ಏರಿಯಾದಲ್ಲಿದ್ದ ಮನೆಯ ಸದಸ್ಯರ ಜೊತೆಗೂ ಮಾತನಾಡಲು ಅವಕಾಶ ಕೊಡಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು