ಮಂಗಳವಾರ, ಮಾರ್ಚ್ 21, 2023
23 °C

Bigg Boss 8: ‘ಪತ್ರವಳ್ಳಿ’ ಪದದ ಅರ್ಥವೇನು? ಚಕ್ರವರ್ತಿಗೆ ಸುದೀಪ್ ಚಾಟಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯ ಎರಡನೇ ಇನಿಂಗ್ಸ್‌ನಲ್ಲಿ ಹೆಚ್ಚು ಸದ್ದು ಮಾಡಿದ ಪದ ಪತ್ರವಳ್ಳಿ. ಈ ಪದವನ್ನು ಮಂಜು ಪಾವಗಡ ಅವರು ದಿವ್ಯಾ ಸುರೇಶ್ ಅವರಿಗೆ ಬಳಸಿದ್ದಾರೆ. ಇದು ಕೆಟ್ಟ ಅರ್ಥವುಳ್ಳ ಪದ ಎಂದು ಅರಚಾಡಿದ ಚಕ್ರವರ್ತಿ ಚಂದ್ರಚೂಡ್ ಕಳೆದ ವಾರ ವೀಕೆಂಡ್ ಎಪಿಸೋಡ್‌ನಲ್ಲಿ ಅಕ್ಷರಶಃ ಗಾಬರಿ ಹುಟ್ಟಿಸಿದರು. ಬಳಿಕ, ಈ ವಾರದ ಸಂಡೇ ಎಪಿಸೋಡಲ್ಲಿ ವಿವರಣೆ ಕೊಟ್ಟ ಕಿಚ್ಚ ಸುದೀಪ್, ಚಕ್ರವರ್ತಿಗೆ ತಿರುಗೇಟು ನೀಡಿದರು.

ಸುದೀಪ್ ಹೇಳಿದ್ದೇನು?: ಚಕ್ರವರ್ತಿಯವರೇ ನೀವು ಕಳೆದ ವಾರ ಮಂಜು, ದಿವ್ಯಾ ಸುರೇಶ್ ಅವರನ್ನು ಪತ್ರವಳ್ಳಿ ಎಂದು ಕರೆದಿದ್ದಾರೆ. ಅದರ ಅರ್ಥ ಬೇಲಿ ಸಂದಿಯ ಕಾಮ ಎಂದು ವಿವರಣೆ ಕೊಟ್ಟಿದ್ದೀರಿ. ಆದರೆ, ನಾವು ಪರಿಶೀಲಿಸಿದ 6 ನಿಘಂಟುಗಳಲ್ಲಿ ಆ ಪದದ ಉಲ್ಲೇಖವೇ ಇಲ್ಲ. ಹೆಣ್ಣು ಮಕ್ಕಳ ಬಗ್ಗೆ ಗೌರವವಿದೆ ಎಂದು ಹೇಳುವ ನೀವು ಆ ಪದದ ವಿವರಣೆ ಕೊಡುವಾಗ ಆ ವಿಷಯದಲ್ಲಿ ಒಬ್ಬ ಹೆಣ್ಣುಮಗಳು ಇದ್ದಾರೆ ಎಂಬುದನ್ನು ಮರಿತೀರೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಚಂದ್ರಚೂಡ್, ಅವರ ಭಾವನೆ ಏನಿತ್ತೋ ಗೊತ್ತಿಲ್ಲ. ನನಗೆ ಈ ರೀತಿ ಅರ್ಥವಾಗುತ್ತಿದೆ. ಬಯಲುಸೀಮೆ, ಮಲೆನಾಡಿನ ಹಳ್ಳಿಗಾಡುಗಳಲ್ಲಿ ಬಳಸುವ ಎಷ್ಟೋ ಪದಗಳಿಗೆ ನಿಘಂಟುಗಳಲ್ಲಿ ವಿವರಣೆ ಇರುವುದಿಲ್ಲ ಎಂದು ಮರುಸಮರ್ಥನೆಗೆ ಪ್ರಯತ್ನಿಸಿದರು. ಆದರೆ, ಚಕ್ರವರ್ತಿ ವಿವರಣೆಗೆ ಸುದೀಪ್ ತೃಪ್ತರಾಗಲಿಲ್ಲ. ಕೊನೆಗೂ ಚಕ್ರವರ್ತಿ ವಿಷಾಧ ವ್ಯಕ್ತಪಡಿಸಲೇಬೇಕಾಯ್ತು.

ಕಳೆದ ವಾರ ಆಗಿದ್ದೇನು?: ಚಕ್ರವರ್ತಿ ಜೊತೆ ಸೇರಬೇಡ ಎಂದು ನಮ್ಮ ಮನೆಯಲ್ಲಿ ಹೇಳಿದ್ದಾರೆ ಎಂದ ಮಂಜು ಪಾವಗಡ ಅವರ ಮಾತಿಗೆ ಸಿಡಿದಿದ್ದ ಚಕ್ರವರ್ತಿಯವರು, ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ನಡುವಿನ ಒಡನಾಟವನ್ನು ಮುಂದಿಟ್ಟಿದ್ದರು. ಮಲಗು ಬಾ ಎಂದು ಮಂಜು ದಿವ್ಯಾಳನ್ನು ಕರೆಯುತ್ತಾನೆ. ಪತ್ರವಳ್ಳಿ ಎಂದು ಬಳಸುತ್ತಾನೆ. ಅದು ಕೆಟ್ಟ ಪದ. ಈ ಬಗ್ಗೆ ನಾನು ಆಕ್ಷೇಪ ಎತ್ತಿದ್ದೆ ಎಂದು ಹೇಳಿದ್ದರು. ಈ ಸಂದರ್ಭ, ಮಂಜು ಪಾವಗಡ ತಬ್ಬಿಬ್ಬಾದರೆ, ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದರು.

ಡಿಗ್ರಿ ಕಾಲೇಜ್: ದಿವ್ಯಾ ಸುರೇಶ್ 2019ರಲ್ಲಿ ನಟಿಸಿದ್ದ ತೆಲುಗಿನ ಡಿಗ್ರಿ ಕಾಲೇಜ್ ಸಿನಿಮಾದ ವಿಷಯ ತೆಗೆದು ಮನೆಯಲ್ಲಿ ರ್‍ಯಾಗಿಂಗ್‌ ಮಾಡುತ್ತಿದ್ದ ಪ್ರಶಾಂತ್ ಸಂಬರಗಿ ಅವರಿಗೂ ಸುದೀಪ್ ಸರಿಯಾಗಿ ಬುದ್ಧಿ ಹೇಳಿದರು. ಅದು ಅವರ ವೃತ್ತಿ, ಅದರಲ್ಲಿ ಸೋಲು, ಗೆಲುವು ಎರಡೂ ಇರುತ್ತದೆ. ಆ ಬಗ್ಗೆ ಹೀಯಾಳಿಸುವುದು ಸರಿಯಲ್ಲ. ಆ ಹೆಣ್ಣುಮಗಳ ಬಗ್ಗೆ ಯೋಚಿಸಿ ಎಂದು ತಿಳಿ ಹೇಳಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್, ನನ್ನ ಸಣ್ಣತನಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. ಬ್ರೇಕ್‌ನಲ್ಲಿ ದಿವ್ಯಾ ಸುರೇಶ್ ಬಳಿ ತೆರಳಿ, ನಿಮ್ಮ ಸಿನಿಮಾ ಬಗ್ಗೆ ನನಗೆ ತಿಳಿದಿರಲಿಲ್ಲ. ಅದಕ್ಕೆಲ್ಲ ಚಂದ್ರಚೂಡ್ ಅವರೇ ರೂವಾರಿ ಎಂದು ಹೇಳಿದರು.

ಇದನ್ನೂ ಓದಿ..  Bigg Boss 8: ಅರವಿಂದ್‌ಗೆ ಶಾಕ್ ಕೊಟ್ಟು ಹೊರ ನಡೆದ ನಟಿ ನಿಧಿ ಸುಬ್ಬಯ್ಯ
 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು