ಬುಧವಾರ, ಮಾರ್ಚ್ 29, 2023
32 °C

Bigg Boss 8: ಮಂಜು ಪಾವಗಡ–ದಿವ್ಯಾ ಸುರೇಶ್ ನಡುವೆ ಬಿರುಕಿಗೆ ಕಾರಣವಾದ ಶಮಂತ್?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಗ್ ಬಾಸ್ ಕನ್ನಡದ ರಿಯಾಲಿಟಿ ಶೋನ ಎರಡನೇ ಇನಿಂಗ್ಸ್‌ನ 8ನೇ ದಿನ ಸದಸ್ಯರು ಪೈಪೋಟಿಯಿಂದ ಕ್ಯಾಪ್ಟನ್ಸಿ ಕಂಟೆಸ್ಟೆಂಟ್ ಟಾಸ್ಕ್‌ನಲ್ಲಿ ಪಾಲ್ಗೊಂಡರು. ಈ ಮಧ್ಯೆ, ಮನೆಯಲ್ಲಿ ಜೋಡಿಹಕ್ಕಿಳಂತಿದ್ದ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ನಡುವೆ ಬಿರುಕು ಮೂಡಿರುವುದು ಕಂಡುಬಂದಿತು.

ಹೌದು, ಲೋಟ ಹೊಡೆಯುವ ಟಾಸ್ಕ್ ವೇಳೆ ದಿವ್ಯಾ ಸುರೇಶ್ ಅವರು ಶಮಂತ್‌ಗಾಗಿ ಪ್ರಾರ್ಥಿಸಿದ್ದು ಮತ್ತು ಅವನು ಆಟದಿಂದ ಹೊರಬಿದ್ದಾಗ ಬೇಸರ ವ್ಯಕ್ತಪಡಿಸಿದ ವರ್ತನೆ ಬಗ್ಗೆ ಮಂಜು ಪ್ರಶ್ನೆ ಎತ್ತಿದ್ದರು. ಇಷ್ಟು ದಿನ ನಾವಿಬ್ಬರು ಜೊತೆಯಾಗಿ ಇದ್ದಿದ್ದಕ್ಕೆ ಅರ್ಥವೇನು? ಎಂದು ಪ್ರಶ್ನೆ ಎತ್ತಿದ ಮಂಜು ಪಾವಗಡ ನೀನು ಇಷ್ಟು ಬದಲಾಗುತ್ತೀಯಾ ಅಂದುಕೊಂಡಿರಲಿಲ್ಲ? ನಿನ್ನ ವರ್ತನೆಯಿಂದ ನನಗೆಷ್ಟು ಬೇಸರವಾಗಿರಬಹುದು ಎಂದು ಯೋಚಿಸಿದ್ದೀಯಾ? ವೀಕೆಂಡ್ ಎಪಿಸೋಡ್‌ನಲ್ಲಿ ಏನೆಲ್ಲ ಆದರೂ ನಾನು ನಿನ್ನ ಜೊತೆಯೇ ಇದ್ದೇನೆ. ಅದು ನಾನು. ಆದರೆ, ನೀನು ಮಾತ್ರ ಈ ರೀತಿ ಆಡುತ್ತಿದ್ದೀಯಾ? ಎಂದು ಜಗಳ ತೆಗೆದರು.

ಮಂಜು ಮಾತಿಗೆ ಶಾಕ್ ಆದ ದಿವ್ಯಾ ಸುರೇಶ್ ಅವರು, ನೀನೂ ಸಹ ಆಟದ ಸಂದರ್ಭ ಬೇರೆಯವರಿಗೆ ಹೆಚ್ಚು ಪ್ರೋತ್ಸಾಹ ಕೊಡುತ್ತೀಯ. ನಾನು ಮಾಡಿದರಲ್ಲಿ ತಪ್ಪೇನಿದೆ? ಬೇರೆ ಯಾರೋ ನಿನಗೆ ಹೇಳಿಕೊಟ್ಟಿದ್ದಾರೆ ಅಥವಾ ಪ್ರ್ಯಾಂಕ್ ಮಾಡ್ತಿದ್ದೀಯಾ ಎಂದು ಪ್ರಶ್ನಿಸಿದರು.

ಆದರೆ, ಮಂಜು ಪಾವಗಡ ಉತ್ತರ ಮಾತ್ರ ಬದಲಾಗಲಿಲ್ಲ. ಇದರಿಂದ ಮತ್ತೆ ಬೇಸರಗೊಂಡ ದಿವ್ಯಾ ಸುರೇಶ್, ಸರಿ ನಾಳೆಯಿಂದ ನಾನು ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ಕಣ್ಣೀರು ಹಾಕಿದರು. ನಿನ್ನಿಂದ ದೂರಾದರೆ ನನಗೆ ನಿನ್ನ ಫ್ಯಾನ್ಸ್ ವೋಟ್ ಹಾಕುವುದಿಲ್ಲ. ಮುಂದಿನ ವಾರವೇ ಹೊರಗೆ ಹೋಗ್ತೀನಿ ಎಂದು ಕಣ್ಣೀರು ಹಾಕಿದರು.

ಕೊನೆಗೂ ಒಂದು ಟಾಸ್ಕ್ ಗೆದ್ದ ಕ್ವಾಟ್ಲೆ ಕಿಲಾಡಿಗಳು: ಕ್ಯಾಪ್ಟನ್ಸಿ ಕಂಟೆಸ್ಟೆಂಟ್ ಟಾಸ್ಕ್‌ಗಳ ಪೈಕಿ ಮೂರರಲ್ಲಿ ಸೋತ ಮಂಜು ನೇತೃತ್ವದ ಕ್ವಾಟ್ಲೆ ಕಿಲಾಡಿಗಳು ತಂಡ ನಾಲ್ಕನೆಯ ಮ್ಯೂಸಿಕ್ ಕೇಳಿ ಹಾಡನ್ನು ಗುರುತಿಸುವ ಟಾಸ್ಕ್‌ನಲ್ಲಿ 7–4ಅಂಕಗಳಿಂದ ಗೆಲುವು ದಾಖಲಿಸಿದೆ. ಅರವಿಂದ್, ದಿವ್ಯಾ ಉರುಡುಗ, ವೈಷ್ಣವಿ, ಶಮಂತ್, ಪ್ರಶಾಂತ್ ಮತ್ತು ಚಂದ್ರಚೂಡ್ ಅವರನ್ನೊಳಗೊಮಡ ಅರವಿಂದ್ ನಾಯಕತ್ವದ ಸೂರ್ಯ ಸೇನೆ ಬಲಿಷ್ಠವಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮಂಜು ಪಾವಗಡ ನಾಯಕತ್ವದ ಕ್ವಾಟ್ವೆ ಕಿಲಾಡಿಗಳು ತಂಡದಲ್ಲಿ ನಟಿಯರಾದ ಶುಭಾ ಪೂಂಜಾ, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ ಮತ್ತು ದಿವ್ಯಾ ಸುರೇಶ್ ರಘು ಇದ್ದು, ಈ ತಂಡ ಕೊಂಚ ದುರ್ಬಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು