ಎರಡು ಬೆರಳ ನಡುವೆ ಹೊಳೆವ ವಜ್ರ

7

ಎರಡು ಬೆರಳ ನಡುವೆ ಹೊಳೆವ ವಜ್ರ

Published:
Updated:
Prajavani

ಮಹಿಳೆಯರ ಆಭರಣ ಲೋಕದಲ್ಲಿ ನವೀನ ವಿನ್ಯಾಸಗಳು ಸ್ಪರ್ಧೆಯೋಪಾದಿಯಲ್ಲಿ ಪರಿಚಯಗೊಳ್ಳುತ್ತಲೇ ಇವೆ. ಕಿವಿಯೋಲೆ, ಕತ್ತಿನ ಆಭರಣಗಳು, ಬಳೆಗಳು ಆಧುನಿಕ ಮತ್ತು ಸಾಂಪ್ರದಾಯಿಕ ವಿನ್ಯಾಸಗಳಿಗೆ ಕ್ಯಾನ್ವಾಸ್‌ಗಳಾಗುತ್ತಲೇ ಇರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಉಂಗುರಗಳಲ್ಲೂ ಸಮಕಾಲೀನ ಜೀವನಶೈಲಿಗೊಪ್ಪುವ ವಿನ್ಯಾಸಗಳು ಪರಿಚಯಗೊಳ್ಳುತ್ತಿವೆ.

ಅಪ್ಪಟ ವಜ್ರದೊಡವೆಗಳ ತಯಾರಕ ಮುಂಚೂಣಿ ಬ್ರ್ಯಾಂಡ್‌ಗಳಲ್ಲಿ ಒಂದಾದ ‘ಫಾರ್‌ಎವರ್‌ಮಾರ್ಕ್‌ ಡೈಮಂಡ್ಸ್‌’ ಪರಿಚಯಿಸಿರುವ ಹೊಸ ಬಗೆಯ ವಜ್ರದ ಉಂಗುರ ಈಗ ಸುದ್ದಿಯಲ್ಲಿದೆ.

ಲಾಸ್‌ಏಂಜಲೀಸ್‌ನಲ್ಲಿ ಕಳೆದ ವಾರ ನಡೆದ ಪ್ರತಿಷ್ಠಿತ ಸ್ಕ್ರೀನ್‌ ಆ್ಯಕ್ಟರ್ಸ್‌ ಗಿಲ್ಡ್‌ ಅವಾರ್ಡ್ಸ್‌ (ಸಾಗ್‌) ಪ್ರದಾನ ಸಮಾರಂಭದಲ್ಲಿ ಈ ಉಂಗುರದ ಪ್ರದರ್ಶನವೂ ನಡೆಯಿತು. ಅಮೆರಿಕದ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿನ ವಿವಿಧ ವಿಭಾಗಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಇಂತಹ ಪ್ರತಿಷ್ಠಿತ ವೇದಿಕೆ ಹಲವು ಬ್ರ್ಯಾಂಡ್‌ಗಳ ಪ್ರಚಾರಕ್ಕೆ ಶೋಕೇಸ್‌ ಆಗಿಯೂ ಬಳಕೆಯಾಗುತ್ತದೆ. ಉಡುಗೆ ತೊಡುಗೆ ಮತ್ತು ಫ್ಯಾಷನ್‌ ಪರಿಕರಗಳು, ಪ್ರಸಾಧನಗಳು, ಒಡವೆಗಳ ಬ್ರ್ಯಾಂಡ್‌ಗಳ ತಮ್ಮ ಉತ್ಪನ್ನಗಳನ್ನು ಸೆಲೆಬ್ರಿಟಿಗಳ ಮೂಲಕ ಜಾಹೀರು ಮಾಡುತ್ತವೆ.

‘ಫಾರ್‌ಎವರ್‌ಮಾರ್ಕ್‌’ ಪರಿಚಯಿಸಿದ ‘ಫೋರ್ಸ್‌ ಆಫ್‌ ನೇಚರ್‌’ ಎಂಬ ಈ ಉಂಗುರದ ಪ್ರದರ್ಶನ ನಡೆದದ್ದೂ ಹಾಗೇ.

ಈ ವರ್ಷದ ‘ಸಾಗ್’ ಪ್ರಶಸ್ತಿ ಪುರಸ್ಕೃತ ನಟಿ ಎಮಿಲಿ ಬ್ಲಂಟ್‌ ಈ ಉಂಗುರವನ್ನು ಧರಿಸಿದ್ದರು. ‘ಎ ಕ್ವೈಟ್‌ ಪ್ಲೇಸ್’ ಸಿನಿಮಾದಲ್ಲಿನ ಅಮೋಘ ನಟನೆಗಾಗಿ ಅವರು ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಪುತ್ಥಳಿಗಿಂತಲೂ ಜೋರಾಗಿ ಮಿಂಚಿದ್ದು
‘ಫೋರ್ಸ್‌ ಆಫ್‌ ನೇಚರ್‌’.

ವೈಶಿಷ್ಟ್ಯವೇನು?

‘ಫೋರ್ಸ್‌ ಆಫ್‌ ನೇಚರ್‌’ ಎಂಬ ಪರಿಕಲ್ಪನೆಯಲ್ಲಿ ಈ ಉಂಗುರವನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಂತ ಅಪರೂಪದ, 3.48 ಕ್ಯಾರಟ್‌ ವಜ್ರದ ಒಂಟಿ ಹರಳನ್ನು ಒಳಗೊಂಡ ಈ ಉಂಗುರ ಅತ್ಯಂತ ವಿಶಿಷ್ಟವೆನಿಸುವುದು ವಿನ್ಯಾಸದಿಂದ. ಎರಡೂ ಬೆರಳುಗಳನ್ನು ಒಳಭಾಗದಿಂದ ಆವರಿಸಿಕೊಂಡು ಹೊರಗೆ ಮಧ್ಯಭಾಗದಲ್ಲಿ ಹರಳು ಕಾಣುತ್ತದೆ. ಎರಡೂ ಬೆರಳಿನ ಹೊರಭಾಗದಿಂದ ಎರಡು ಇಂಚಿನಷ್ಟು ಕೆಳಗೆ ಇಳಿದಿರುವ ವಿನ್ಯಾಸವಂತೂ ಅಚ್ಚರಿ ಮೂಡಿಸುತ್ತದೆ.

ಎರಡು, ಮೂರು ಬೆರಳುಗಳನ್ನು ಆವರಿಸಿಕೊಳ್ಳುವ ಉಂಗುರ ವಿನ್ಯಾಸ ಪರಿಚಯಗೊಂಡು ಕೆಲವು ವರ್ಷಗಳು ಸಂದಿವೆ. ಆದರೆ ಫಾರ್‌ಎವರ್‌ಮಾರ್ಕ್‌ ಅದೇ ವಿನ್ಯಾಸದಲ್ಲಿ ಸ್ವಲ್ಪ ಹೊಸತನವನ್ನು ನೀಡಿದೆ.

ಈ ಉಂಗುರವನ್ನು ವಿನ್ಯಾಸ ಮಾಡಿದವರು ‘ಡೆ ಬೇರ್ಸ್‌ ಗ್ರೂಪ್‌’ಗೆ 2015–16ರಲ್ಲಿ ಶೈನಿಂಗ್ ಲೈಟ್‌ ಪ್ರಶಸ್ತಿ ತಂದುಕೊಟ್ಟ ಲೂಯಿಸ್‌ ಕ್ರೀಕ್‌. ಬೆರಳುಗಳ ಇಬ್ಬದಿಯಲ್ಲಿ ತಿರುಚಿದಂತಹ ವಿನ್ಯಾಸದುದ್ದಕ್ಕೂ ವಜ್ರದ ಹರಳು ತುಂಬಿರುವುದು ಗಮನಾರ್ಹ. 
‘ಇದು ಈ ವರ್ಷದ ವಿಶಿಷ್ಟ ವಿನ್ಯಾಸ’ ಎಂದು, ಎಮಿಲಿ ಬ್ಲಂಟ್‌ ಅವರ ಸ್ಟೈಲಿಸ್ಟ್‌ ಜೆಸ್ಸಿಕಾ ಪಾಸ್ಟರ್‌ ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !