ಭಾನುವಾರ, ಸೆಪ್ಟೆಂಬರ್ 19, 2021
25 °C

‘ಜೊತೆ ಜೊತೆಯಲಿ’ ಧಾರಾವಾಹಿಗೆ 100 ಕಂತು ಪೂರೈಸಿದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೀ ಕನ್ನಡ ತನ್ನ ಜನಪ್ರಿಯ ಫಿಕ್ಷನ್‌ ಮತ್ತು ನಾನ್‌ ಫಿಕ್ಷನ್ ಕಾರ್ಯಕ್ರಮಗಳಿಂದ ನಾಡಿನ ಜನರ ಮನ ಗೆದ್ದಿರುವುದು ಎಲ್ಲರಿಗೂ ಗೊತ್ತು. ಈ ವಾಹಿನಿಯಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರಾವಾಹಿಯು ಜ. 23ರಂದು 100 ಕಂತುಗಳನ್ನು ಪೂರೈಸಿದೆ. 

ಎರಡು ಭಿನ್ನ ತಲೆಮಾರಿನ ಪ್ರೇಮಕಥೆಯೇ ಈ ಧಾರಾವಾಹಿಯ ಜೀವಾಳ. ಪ್ರಾರಂಭದ ಎಲ್ಲ ದಾಖಲೆಗಳನ್ನೂ ಮುರಿದು ಕನ್ನಡ ಕಿರುತೆರೆಯಲ್ಲಿಯೇ ಧಾರಾವಾಹಿಗಳ ಪೈಕಿ ಅಗ್ರಸ್ಥಾನ ಪಡೆದಿದ್ದು, ‘ಜೊತೆ ಜೊತೆಯಲಿ’ ತಂಡದ ಹೆಗ್ಗಳಿಕೆ. ಈ ವರ್ಷದ ಮೊದಲ ವಾರದಲ್ಲಿ 14.7 ಟಿ.ವಿ.ಆರ್ ಪಡೆದಿದೆ. ‘ಜೊತೆ ಜೊತೆಯಲಿ’ ತಂಡವು ಈ ಸಂಭ್ರಮವನ್ನು ಜೊತೆ ಜೊತೆಯಲಿ ಲಾಂಛನದ ಕೇಕ್‌ ಕತ್ತರಿಸುವ ಮೂಲಕ ಆಚರಿಸಿತು.

ಆರ್ಯವರ್ಧನ್ ಈ ಧಾರಾವಾಹಿಯ ನಾಯಕ. ಆತನಿಗೆ ಅನು ಸಿರಿಮನೆ ಜೋಡಿ. ಆಕೆ ನಿದ್ರೆಯಲ್ಲಿದ್ದಾಳೆ ಎಂದು ತಿಳಿದು ತನ್ನ ಪ್ರೀತಿ ನಿವೇದಿಸುತ್ತಾನೆ ಆರ್ಯವರ್ಧನ್‌.

ಈ ನಡುವೆಯೇ ಆರ್ಯನ ಕಚೇರಿಯಲ್ಲಿ ಅನುವಿಗೆ ಪರಿಪೂರ್ಣ ಜೋಡಿಯಾದ ನೀಲ್‌ನ ಪ್ರವೇಶವಾಗುತ್ತದೆ. ಮತ್ತೊಂದೆಡೆ ಆರ್ಯನ ಆಪ್ತ ಸಹಾಯಕಿ ಮೀರಾ ಹೆಗ್ಡೆ, ಆರ್ಯ ಮತ್ತು ಅನು ವಿರುದ್ಧ ಸಂಚು ರೂಪಿಸುತ್ತಾಳೆ. ಈ ಜೋಡಿಯು ಎಲ್ಲಾ ಅಡೆತಡೆ ವಿರುದ್ಧ ಹೋರಾಟ ನಡೆಸಿ ತಮ್ಮ ಪ್ರೀತಿ ಉಳಿಸಿಕೊಳ್ಳುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು