ಪರಸ್ಪರ ಒಪ್ಪಿ ಮದುವೆಯಾಗಿ!

7
ನನ್ನ ಕನಸಿನ ಮದುವೆ

ಪರಸ್ಪರ ಒಪ್ಪಿ ಮದುವೆಯಾಗಿ!

Published:
Updated:

ಒಂದು ಸಂಜೆ ನಾನು ಮತ್ತು ನನ್ನಮ್ಮ ಮನೆಯ ಹೊರಗೆ ಕುಳಿತು ನನ್ನ ಮದುವೆ ಬಗ್ಗೆ ಆಲೋಚಿಸುತ್ತಿದ್ದೆವು. ಅದೇ ಸಮಯಕ್ಕೆ ಅಚಾನಕ್ಕಾಗಿ ನಮ್ಮ ಊರಿನವರೊಬ್ಬರು ಮನೆಗೆ ಬಂದು ನನಗೆ ಪರಿಚಯವಿರುವ ಹುಡುಗ ಇದ್ದಾನೆ ಅಂದರು. ಅದನ್ನು ನಾನು ಮತ್ತು ಅಮ್ಮ ಸಂಪೂರ್ಣವಾಗಿ ನಂಬಿ, ಆ ಹುಡುಗನ ಬಗ್ಗೆ ಕನಸು ಕಾಣತೊಡಗಿದೆವು.

ನಮ್ಮ ಮದುವೆ ವಿಜೃಂಭಣೆಯಿಂದಲೇ ಆಯಿತು. ಆದರೆ, ನಂತರ ನನಗೆ ತಿಳಿದು ಬಂದ ವಿಷಯವೆಂದರೆ ಹುಡುಗನಿಗೆ ನಾನು ಇಷ್ಟವಿರಲಿಲ್ಲ ಅಂತ. ಮನೆಯವರ ಒತ್ತಾಯಕ್ಕೆ ಮಣಿದು ಆತ ನನ್ನ ಮದುವೆಯಾಗಿದ್ದ. ಆಗ ನನಗೆ ಆಕಾಶವೇ ಕೆಳಗೆ ಬಿದ್ದಂತಾಯಿತು. ಮನಸ್ಸಿಗೆ ಘಾಸಿಯಾಯಿತು. ಆಗ ಪ್ರಪಂಚದಲ್ಲಿ ಯಾರನ್ನೂ ನಂಬಬಾರದು ಅನ್ನುವುದು ಸ್ಪಷ್ಟವಾಯಿತು. ಹುಡುಗ–ಹುಡುಗಿ ಪರಸ್ಪರ ಒಪ್ಪಿ ಮದುವೆಯಾಗಬೇಕೆಂಬ ನನ್ನ ಕನಸು ವಾಸ್ತವದಲ್ಲಿ ಈ ರೀತಿಯಾಗಿತ್ತು.

ಆ ದುಃಖದ ಸಂದರ್ಭದಲ್ಲಿ ನನ್ನ ತಂದೆಯನ್ನು ತುಂಬಾ ನೆನಪಿಸಿಕೊಂಡೆ. ಜೀವನ ಇಷ್ಟೇ ಅನ್ನುವ ಬೇಸರವೂ ಉಂಟಾಯಿತು. ಏನೇ ಆಗಲಿ ನಮ್ಮ ಬದುಕಿಗೆ ನಾವೇ ಜವಾಬ್ದಾರರು. ಆದ್ದರಿಂದ ಜೀವನ ಸಂಗಾತಿ ಆರಿಸಿಕೊಳ್ಳುವ  ಮುನ್ನ ಪರಸ್ಪರರು ಕೂತು ಮಾತಾಡಿಕೊಳ್ಳುವುದು ಒಳ್ಳೆಯದು ಎನ್ನುವುದು ಬದುಕು ನನಗೆ ಕಲಿಸಿದ ಪಾಠ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !