ಸೋಮವಾರ, ಆಗಸ್ಟ್ 2, 2021
19 °C

ಅಮ್ಮನಾದ ಖುಷಿಯಲ್ಲಿ ನೇಹಾ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಗ್‌ ಬಾಸ್‌ 3ರಲ್ಲಿ ಸ್ಪರ್ಧಿ ನೇಹಾ ಗೌಡ ಅವರು ಹೆಣ್ಣುಮಗುವಿನ ಅಮ್ಮನಾದ ಖುಷಿಯಲ್ಲಿದ್ದಾರೆ. ಮಗುವಿಗೆ ಈಗ ಮೂರು ತಿಂಗಳು. ಅಪ್ಪಂದಿರ ದಿನದಂದು, ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿ ನೇಹಾ ಶುಭಹಾರೈಸಿದ್ದಾರೆ. ಈ ಫೋಟೊ ಈಗ ವೈರಲ್‌ ಆಗಿದೆ. 

‘ಒಂದು ದಿನದ ಮಗು’ ಎಂದು ಫೋಟೊಗೆ ಟ್ಯಾಗ್‌ಲೈನ್‌ ಬರೆದಿರುವ ನೇಹಾ, ‘ಹ್ಯಾಪಿ ಫಾದರ್ಸ್‌ ಡೇ 2020’ ಎಂದು ಪತಿಗೆ ಹಾರೈಸಿದ್ದಾರೆ. ನೇಹಾ ಮದುವೆಯಾದ ನಂತರ ತಮ್ಮ ಪತಿ ಭಾರ್ಗವ್‌ ಜಿ. ಗೌಡ ಜೊತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲೇ ಅವರಿಗೆ ಹೆಣ್ಣುಮಗು ಜನಿಸಿದೆ. 

ಇನ್‌ಸ್ಟಾಗ್ರಾಂನಲ್ಲಿ ಕೆಲ ತಿಂಗಳ ಹಿಂದೆ ತಮ್ಮ ಸೀಮಂತದ ಫೋಟೊಗಳನ್ನು ಅವರು ಹಂಚಿಕೊಂಡಿದ್ದರು. ಗಗನಸಖಿಯಾಗಿದ್ದ ನೇಹಾ ಗೌಡ ‘ಬಿಗ್ ಬಾಸ್’ ಕನ್ನಡ ಸೀಸನ್ 3ನಲ್ಲಿ ನೇರ ಮತ್ತು ಖಡಕ್‌ ಮಾತುಗಳಿಂದ ಜನಪ್ರಿಯರಾಗಿದ್ದರು. ಕನ್ನಡದ ಡಾನ್ಸ್‌ ರಿಯಾಲಿಟಿ ಷೊದಲ್ಲಿ ಕೂಡ ಅವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.