ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ನಿ ಕಥೆ ಕನ್ನಡದಲ್ಲಿ

Last Updated 21 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

‘ಜೀ5’ನ ವೆಬ್‌ ಸಿರೀಸ್‌ ‘ಕರಣ್‌ಜಿತ್‌ ಕೌರ್‌’ ದಕ್ಷಿಣದ ಭಾಷೆಗಳಲ್ಲಿ ಡಬ್‌ ಆಗಿದೆ. ಈ ಹಿಂದೆಯೇ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ನಿರ್ಮಾಣವಾದ ಈ ವೆಬ್‌ ಸಿರೀಸ್‌ ಜನಪ್ರಿಯ ವೆಬ್‌ ಸಿರೀಸ್‌ಗಳಲ್ಲಿ ಒಂದಾಗಿತ್ತು. ದಕ್ಷಿಣದ ಭಾಷೆಗಳಾದ ಮರಾಠಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಗಳಲ್ಲಿ ಎರಡೂ ಸೀಸನ್‌ಗಳು ಡಬ್‌ ಆಗಿವೆ.

ಇದು ಮೂಲದಲ್ಲಿ ಇಂಗ್ಲಿಷ್‌ ಸಿರೀಸ್‌ ಆಗಿರುವುದರಿಂದ ಆ ಭಾಷೆಯ ಓಘಕ್ಕೆ ದಕ್ಷಿಣ ಭಾರತದ ಭಾಷೆಯ ಜಾಯಮಾನವನ್ನು ಬದಲಿಸುವುದು ಅತಿ ಕಷ್ಟ. ಅದಿಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಲವಾರು ಸಂಭಾಷಣೆಗಳಲ್ಲಿ ಕೇವಲ ಕ್ರಿಯಾಪದಗಳು ಮಾತ್ರ ಸ್ಥಳೀಯ ಭಾಷೆಯಲ್ಲಿರುವಂತೆ ಇಡೀ ಸಂಭಾಷಣೆಯೇ ಜಾಳುಜಾಳಾಗಿದೆ.

ನುಡಿಗಟ್ಟುಗಳನ್ನು ಸಹ ಯಥಾವತ್ತಾಗಿ ಬಳಸಲಾಗಿದೆ. ಇಂಗ್ಲಿಷ್‌ನಲ್ಲಿ ‘ಈ ಉಡುಗೆ ಫ್ಯುನರಲ್‌ಗೆ ಹಾಕಲು ಸಹ ಲಾಯಕ್ಕಿಲ್ಲ, ನೀನು ಪಾರ್ಟಿಗೆ ಹಾಕಲು ಹೇಳುವೆ’ ಎಂಬ ಸಂಭಾಷಣೆಯನ್ನಂತೂ ಹೇಳಿ ಮುಗಿಸುವುದರಲ್ಲಿಯೇ ಪಾತ್ರಗಳು ಅತ್ತಿತ್ತ ತಿರುಗಿರುತ್ತವೆ. ಸಂಭಾಷಣೆಯನ್ನು ವೇಗವಾಗಿ ಹೇಳುವುದು ಕನ್ನಡದ ಜಾಯಮಾನಕ್ಕೆ ಒಗ್ಗುವುದೇ ಇಲ್ಲ. ಕೇಳುವುದಕ್ಕೂ ನೋಡುವುದಕ್ಕೂ ತಾಳಮೇಳವಿಲ್ಲದಂತಾಗಿದೆ. ಸಂಭಾಷಣೆಗಳನ್ನೆಲ್ಲ ಶಬ್ದಶಃ ಅನುವಾದ ಮಾಡಿರುವುದರ ಪ್ರತಿಫಲ ಇದು. ಎರಡೂ ಪಾತ್ರಗಳ ತುಟಿ ಚಲನೆಗೂ ಭಾಷೆಗೂ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ಡಬ್‌ ಮಾಡಿದ ಎಲ್ಲ ಕಾರ್ಯಕ್ರಮಗಳಲ್ಲೂ ಒಪ್ಪಿಕೊಳ್ಳುತ್ತೇವೆ. ಆದರೆ ಇಲ್ಲಿ, ಮಾತಿಗೂ, ಮೌನಕ್ಕೂ, ಭಾವಕ್ಕೂ, ಭಾಷೆಗೂ ಸಂಬಂಧವೇ ಇಲ್ಲದಂತಾಗಿದೆ.

ಕರಣ್‌ಜಿತ್‌ ಕೌರ್‌ ಸನ್ನಿ ಲಿಯೋನಿ ಆದ ಕಥೆಯು, ಕೆನಡಾದಲ್ಲಿ ವಾಸಿಸುವ ಭಾರತೀಯ ಮೂಲದ ಒಂದು ಕುಟುಂಬದಿಂದ ಆರಂಭವಾಗಿ ಅವಳು ಹಿರಿತೆರೆಯನ್ನು ಅಲಂಕರಿಸುವವರೆಗಿನ ಪಯಣವಾಗಿದೆ. ಇದರಲ್ಲಿ ಅವಳು ಎದುರಿಸಿದ ತೊಳಲಾಟಗಳು, ಕೌಟುಂಬಿಕ ಸಂಘರ್ಷ, ಸಹೋದರನ ನೈತಿಕ ಬೆಂಬಲ ಇವೆಲ್ಲವನ್ನೂ ಕಟ್ಟಿಕೊಡುವಲ್ಲಿ ಇಂಗ್ಲಿಷ್‌ನಷ್ಟು, ಹಿಂದಿಯಷ್ಟು ಸಮರ್ಥವಾಗಿ ಕನ್ನಡದಲ್ಲಿ ಆಗಿಲ್ಲ.

ಸನ್ನಿಯ ಜೀವನಗಾಥೆಯನ್ನು ‘ಜೀ5’ ಆ್ಯಪ್‌ ಮೂಲಕ ವೀಕ್ಷಿಸಬಹುದು. ಸನ್ನಿಯ ಜೀವನಗಾಥೆಯಲ್ಲಿ ಒಂದು ವಿಶೇಷ ಇದೆ. ಇದರಲ್ಲಿ ಸನ್ನಿಯ ಪಾತ್ರವನ್ನು ಸನ್ನಿ ಅವರೇ ನಿಭಾಯಿಸಿದ್ದಾರೆ. ಬಹುತೇಕ ಭಾಗಗಳು ಅಮೆರಿಕ ಹಾಗೂ ಕೆನಡಾದಲ್ಲಿ ಚಿತ್ರೀಕರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT