ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಾರಗಳ ಮದುವೆ!

Last Updated 5 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಅದ್ದೂರಿ ಮದುವೆ ಪ್ರಸಂಗಗಳು ಕನ್ನಡ ಕಿರುತೆರೆ ಧಾರಾವಾಹಿಗಳ ಹೊಸ ಒಲವು. ಈ ಮದುವೆ ಪ್ರಸಂಗಗಳ ಸಾಲಿಗೆ ಸೇರುತ್ತಿದೆ ‘ಜೀ’ ಕನ್ನಡ ವಾಹಿನಿಯ ‘ಜೊತೆ ಜೊತೆಯಲಿ’ ಧಾರಾವಾಹಿ. ನೂರನೇ ಸಂಚಿಕೆ ಸಂಭ್ರಮದಲ್ಲಿರುವ ಧಾರಾವಾಹಿಯ ಕಥೆ, ನಾಯಕ-ನಾಯಕಿ ಮದುವೆಯ ಮುಖ್ಯ ಘಟ್ಟ ತಲುಪಿದೆ.

ಫೆಬ್ರುವರಿ 7ರಿಂದ ಎರಡು ವಾರಗಳ ಕಾಲ ಈ ಮದುವೆ ನಡೆಯಲಿದೆ. ಅಂದಹಾಗೆ, ಸೋಮವಾರದಿಂದ ಶುಕ್ರವಾರದವರೆಗೆ ‘ಜೊತೆ ಜೊತೆಯಲಿ’ ಧಾರಾವಾಹಿ ಪ್ರತಿ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ. ಕಿರಣ್ ನಿರ್ದೇಶನದ ಧಾರಾವಾಹಿಯ ನಾಯಕ–ನಾಯಕಿಯರಾದ ಅಭಯ್ –ಶಾಲಿನಿ ಮದುವೆ ಮಂಟಪದ ಕೇಂದ್ರಬಿಂದುಗಳು. ಅದ್ದೂರಿಯಾಗಿ ಚಿತ್ರೀಕರಿಸಲಾದ ಈ ವಿವಾಹ ಮಹೋತ್ಸವದಲ್ಲಿ  ಧಾರಾವಾಹಿಯ ಪ್ರಮುಖ ಕಲಾವಿದರೆಲ್ಲ ಭಾಗವಹಿಸಿದ್ದಾರೆ.

ನಾಲ್ಕು ವಿಶೇಷ ಕ್ಯಾಮೆರಾಗಳಲ್ಲಿ ಮದುವೆ ಸನ್ನಿವೇಶವನ್ನು ಸೆರೆಹಿಡಿದಿದ್ದು, ಈ ಮದುವೆಗಾಗಿ ವಿಶೇಷ ಸೆಟ್ ನಿರ್ಮಾಣ ಮಾಡಲಾಗಿದೆ ಎಂದು ವಾಹಿನಿ ಪ್ರಕಟಣೆ ತಿಳಿಸಿದೆ. ವಾಹಿನಿಯೊಂದರಲ್ಲಿ ವರದಿಗಾರನಾಗಿ ಕೆಲಸ ಮಾಡುವ, ಶ್ರೀಮಂತ ಮನೆತನದ ಅಭಯ್ ತನಗಿಂತಲೂ ಐದು ವರ್ಷ ಹಿರಿಯಳಾದ ಮಧ್ಯಮವರ್ಗದ ಶಾಲಿನಿಯನ್ನು ಪ್ರೀತಿಸುತ್ತಾನೆ.

ಅನೇಕ ವಿರೋಧಗಳ ನಡುವೆಯೂ ಅಭಯ್–ಶಾಲಿನಿ ಮದುವೆಯಾಗುತ್ತಾರೆ. ಮದುವೆ ನಂತರ ಶಾಲಿನಿಯ ಬದುಕಿನ ಬಹುದೊಡ್ಡ ಸತ್ಯವೊಂದು ಅಭಯ್‌ಗೆ ತಿಳಿಯುತ್ತದೆ. ಮುಂದೆ ಅಭಯ್ ಹಾಗೂ ಶಾಲಿನಿಯ ಸಂಸಾರ ನೌಕೆ ಎತ್ತ ಸಾಗುತ್ತದೆ ಎನ್ನುವುದು ಧಾರಾವಾಹಿಯ ಕಥಾಹಂದರ. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT