ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ
Published 3 ಜೂನ್ 2024, 0:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯಲ್ಲಿನ ವಿಷಯಗಳನ್ನು ಹೊರಗೆ ಸೋರಿಕೆ ಮಾಡುತ್ತಿರುವ ವ್ಯಕ್ತಿಗಳು ಖಂಡಿತವಾಗಿ ನಿಮ್ಮೊಂದಿಗೆ ಇರುತ್ತಾರೆ. ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು.
ವೃಷಭ
ಜತೆಗಾರರ ಅಭಿರುಚಿಗಳು ನಿಮ್ಮ ಅಭಿರುಚಿಗಿಂತ ಬಹಳ ಭಿನ್ನವಾಗಿರುವುದರಿಂದ ಇಂದಿನ ದಿನ ಖುಷಿ ಎನ್ನಿಸುವುದಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ದೇವತಾನುಗ್ರಹದಿಂದ ಸಿಗಲಿದೆ.
ಮಿಥುನ
ಪ್ರಯತ್ನ ಬೇಕಾದಷ್ಟೇ ಇದ್ದರೂ ಯಶಸ್ಸು ಒಲಿದು ಬರುವುದು ಕಷ್ಟಕರ ಸಂಗತಿ. ಯೋಗ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು.
ಕರ್ಕಾಟಕ
ಸಹೋದ್ಯೋಗಿಗಳೊಡನೆ ಪ್ರೀತಿಯಿಂದ ವರ್ತಿಸುವುದರಿಂದ ಕೆಲಸ ಸರಾಗವಾಗಿ ಸಾಗಲಿದೆ. ಹತ್ತಿಯ ಕೆಲಸವನ್ನು ಮಾಡುವಂಥವರಿಗೆ ಉಷ್ಣದ ಸಮಸ್ಯೆ ಕಾಡಬಹುದು. ಆಕಸ್ಮಿಕ ಪ್ರಯಾಣದ ಸಾಧ್ಯತೆಯಿದೆ.
ಸಿಂಹ
ವಿವಿಧ ಕಾರಣಗಳಿಂದಾಗಿ ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸಲಾಗದೆ ದಿನದ ಕಡೆಯಲ್ಲಿ ಬೇಸರ ಪಡುವಿರಿ. ಸಂಗೀತ-ನಾಟ್ಯ ಸಾಧಕರಿಗೆ ಉತ್ತಮವಾದ ವೇದಿಕೆ ದೊರೆತು ವಿದ್ವತ್ ಪ್ರದರ್ಶನವಾಗುವುದು.
ಕನ್ಯಾ
ಕೆಲ ನಿರ್ಧಾರಗಳು ನಿಮಗೆ ಸರಿಯಾಗಿ ಕಂಡು ಬಂದರೂ ಸಭೆಯಲ್ಲಿ ಇತರರ ದೃಷ್ಟಿಕೋನವನ್ನು ನೋಡಿ ಬದಲಿಸಿಕೊಳ್ಳಬೇಕಾಗಬಹುದು. ಬೇರೆ ಬೇರೆ ಕಾರಣಗಳಿಗಾಗಿ ಒಂದೇ ಸ್ಥಳಕ್ಕೆ ಪುನಃ ಭೇಟಿ ನೀಡುವಂತಾಗುತ್ತದೆ
ತುಲಾ
ತಾಯಿಯ ಮೂಲಕ ನಿಮಗೆ ಬರಬೇಕಾದ ಪಿತ್ರಾರ್ಜಿತ ಆಸ್ತಿಗೆ ಬಹಳ ಪ್ರಯತ್ನ ಬೇಕಾಗುತ್ತದೆ. ಸ್ಥಿರ ಆಸ್ತಿಯನ್ನು ಉಳಿಸಿಕೊಳ್ಳುವ ಕಾರಣದಿಂದ ಕೋರ್ಟು ಕಚೇರಿ ನಡುವೆ ಅಲೆಯುವಂತೆ ಆಗುತ್ತದೆ.
ವೃಶ್ಚಿಕ
ಮೇಲಧಿಕಾರಿಗಳಿಂದ ನೀವು ಅಪೇಕ್ಷಿಸುವ ಸಹಕಾರಗಳು ದೊರೆತಂತೆ ಕಂಡರೂ ಸಂತೃಪ್ತಕರ ರೀತಿಯಲ್ಲಿರುವುದಿಲ್ಲ. ಹೊಸ ನೀರು ಬಂದಾಗ ಹಳೆ ನೀರು ಹೋಗುವುದು ಸಹಜವಾದರೂ ಹಳೆಯ ಜನರನ್ನು ಮರೆಯದಿರಿ.
ಧನು
ಮಿತ್ರರಲ್ಲಿ ಸ್ನೇಹವೂ ಬಂಧುಗಳಲ್ಲಿ ಸಂಬಂಧವೂ ಉಳಿಸಿಕೊಂಡು ಹೋಗುವುದು ಇಹಕ್ಕೂ ಪರಕ್ಕೂ ಒಳಿತು ಉಂಟುಮಾಡುತ್ತದೆ. ಇಂದು ವಿದೇಶದಲ್ಲಿರುವ ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ.
ಮಕರ
ಗುರಿಯನ್ನು ತಲುಪುವುದು ಕಷ್ಟವೇನಲ್ಲವಾದರೂ ಪ್ರಯತ್ನ ಮುಖ್ಯ. ಜೀವನದ ಕೆಲವು ಪ್ರಮುಖ ಸಮಾರಂಭಕ್ಕೆ ನೀವು ಕ್ಷಣಗಣನೆ ಮಾಡುವಂತಾಗುವಿರಿ.
ಕುಂಭ
ದ್ರವಾಹಾರದ ಸೇವನೆ ಕಡಿಮೆಯಾಗಿ ಚರ್ಮದಲ್ಲಿ ಶುಷ್ಕತೆ ಉಂಟಾಗುವ ಸಾಧ್ಯತೆ ಇದೆ. ಎಚ್ಚರವಹಿಸಿ. ಕೆಲಸ ಮತ್ತು ದುಡಿಮೆ ಸಮೃದ್ಧಿಯಾಗಿ ಇಲ್ಲವಾದರೂ ಕೌಟುಂಬಿಕ ನೆಮ್ಮದಿಗೆ ಕೊರತೆ ಕಾಣುವುದಿಲ್ಲ.
ಮೀನ
ಸಂಘ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿದವರು ಲೆಕ್ಕ ಪತ್ರಗಳ ಪರಿಶೋಧನೆ ಮಾಡುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಉಂಟಾಗುತ್ತದೆ. ಕಿರಿಯರ ಮಾತನ್ನು ಕಡೆಗಣಿಸದೆ ಪರಾಮರ್ಶಿಸಿ.