ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಈಗ ಸಾಮಾಜಿಕ ತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಪುಟ್ಟ ಗೌರಿ ಸತ್ತೋದ್ಳಾ? ಎಂದು ಗಲಿಬಿಲಿಗೊಂಡು ಸ್ಟೇಟಸ್ ಅಪ್‌ಡೇಟ್ ಮಾಡಿದ್ದ ನೆಟಿಜನ್‍ಗಳು ಇದೀಗ ಆಕೆಯ ಸಾಹಸವನ್ನು ಕೊಂಡಾಡುತ್ತಿದ್ದಾರೆ.

ಅಂಥದ್ದೇನಾಯ್ತು?
ಜೀವನದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿದ್ದ ಪುಟ್ಟ ಗೌರಿಗೆ ಈಗ ಮತ್ತೊಂದು ಅಪಾಯ ಎದುರಾಗಿ ಬಿಟ್ಟಿದೆ. ಪುಟ್ಟ ಗೌರಿ ಈಗ ಕಾಡಿಗೆ ಬಂದು ಬಿಟ್ಟಿದ್ದಾಳೆ. ದೊಡ್ಡ ಬೆಟ್ಟವೊಂದರಿಂದ ಬಿದ್ದರೂ, ಮೇಕಪ್ ಕುಂದಿಲ್ಲ. ಉಟ್ಟ ಉಡುಗೆಯೂ ಚೂರು ಆಚೆ ಈಚೆ ಕದಲಲೇ ಇಲ್ಲ. ಹಾಗೆ ದೊಡ್ಡ ಪ್ರಪಾತಕ್ಕೆ ಬಿದ್ದ ಗೌರಿಗೆ ಹುಲಿ ಎದುರಾಗುತ್ತದೆ. ಹುಲಿಯಿಂದ ವೇಗವಾಗಿ ಓಡುವ ಪುಟ್ಟ ಗೌರಿ ಮರವನ್ನೇರಿ ಕುಳಿತುಕೊಳ್ಳುತ್ತಾಳೆ. ಆಮೇಲೆ ತನ್ನನ್ನು ಕೊಲ್ಲಲು ಬಂದ ಹುಲಿ ಜತೆ ಮಾತನಾಡಿ ಹುಲಿಯನ್ನೇ ರಕ್ಷಣೆ ಮಾಡುತ್ತಾಳೆ. ಬುಸುಗುಡುವ ಹಾವಿನೊಂದಿಗೆ ಹೋರಾಡಿ (ಹಾವಿನ ಕಪಾಳಕ್ಕೆ ಹೊಡೆದು!) ಅಲ್ಲಿಯೂ ಗೆದ್ದು ಬರುತ್ತಾಳೆ. ಈಕೆಯ ಸಾಹಸ ದೃಶ್ಯಗಳಿಂದ ವೀಕ್ಷಕರಿಗೆ ಭರಪೂರ ಮನರಂಜನೆ ಸಿಕ್ಕಿದೆ. ಪುಟ್ಟಗೌರಿ ಮದುವೆ ಧಾರವಾಹಿ ನೋಡಿದ ಕೆಲವರು ನಾಯಕಿಯ ಸಾಹಸಗಳ ಬಗ್ಗೆ ಅಚ್ಚರಿ ವ್ಯಕ್ತಿ ಪಡಿಸಿದರೆ, ಇನ್ನು ಕೆಲವರು ಬಗೆ ಬಗೆಯ ಸ್ಟೇಟಸ್, ಮೀಮ್ ಮತ್ತು ಟ್ರೋಲ್‍ಗಳನ್ನು ಮಾಡಿ ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟಿದ್ದಾರೆ.

ವಿಷ್ಯ ಹುಲಿರಾಯನಿಗೆ ಮುಟ್ಟೋ ಮಟ್ಟಾ ಶೇರ್ ಮಾಡ್ರಿ
ಸಾಮಾಜಿಕ ತಾಣದಲ್ಲಿ ಎಲ್ಲೆಲ್ಲಿಯೂ ಪುಟ್ಟಗೌರಿಯ ಮೀಮ್‍ಗಳು ಸದ್ದು ಮಾಡುತ್ತಿವೆ. ಅವುಗಳಲ್ಲಿ ಕೆಲವೊಂದು ಮೀಮ್‍ಗಳು ಹೀಗಿವೆ.

ಪುಟ್ಟ ಗೌರಿಯ ಸಾಹಸ ದೃಶ್ಯಗಳು ಟ್ರೆಂಡಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.