ಶನಿವಾರ, ಏಪ್ರಿಲ್ 17, 2021
23 °C

ಹಳೆ ಬೈಕ್‌ ಹೊಸ ‘ಕಿಕ್‌’...

ಪ್ರಜ್ವಲ್‌ ಹೂಲಿ Updated:

ಅಕ್ಷರ ಗಾತ್ರ : | |

Prajavani

ನಗರದ ಯು.ಬಿ ಸಿಟಿಯಲ್ಲಿ ಶನಿವಾರ ಹಳೆಯ ದ್ವಿಚಕ್ರ ವಾಹನಗಳ ಗತವೈಭವ ಅನಾವರಣಗೊಂಡಿತ್ತು. ಆಧುನಿಕ ವಿನ್ಯಾಸದ ಆವರಣದಲ್ಲಿ ಹಳೆಯ ಮಾದರಿಯ ಮೋಟಾರ್‌ ಸೈಕಲ್‌ಗಳು ಒಂದರ ಪಕ್ಕ ಒಂದು ರಾಜಗಾಂಭಿರ್ಯದಿಂದ ನಿಂತಿದ್ದವು. ಹಲವು ಬಗೆಯ ಪುರಾತನ ಬೈಕ್‌ಗಳು ಬಾಲ್ಯದ ನೆನಪುಗಳನ್ನು ಹೆಕ್ಕಿ ತೆಗೆದವು.

ಭಾರತದ ಐತಿಹಾಸಿಕ ವಾಹನಗಳ ಫೆಡರೇಶನ್‌ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮೋಟಾರ್‌ ಸೈಕಲ್ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. 1900 ರಿಂದ 1980 ವರೆಗೆ ಉಪಯೋಗಿಸಿದ 200  ವಾಹನಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ನಟ ಪುನೀತ್‌ ರಾಜ್‌ಕುಮಾರ್‌ ಪ್ರದರ್ಶನಕ್ಕೆ ಚಾಲನೆ ನೀಡಿದರು. 

ಮುಂಬೈ, ಹೈದರಾಬಾದ್‌,ಪುಣೆ ಹೀಗೆ ನೆರೆಹೊರೆಯ ರಾಜ್ಯಗಳಿಂದ ಹಳೆಯ ಬೈಕ್, ಮೊಪೆಡ್‌ಗಳನ್ನು ತರಲಾಗಿತ್ತು. 19ನೇ ಶತಮಾನದ ಆರಂಭದಲ್ಲಿ ರಸ್ತೆಗಳಲ್ಲಿ ಮಹಾರಾಜನಂತೆ ವಿಜೃಂಭಿಸಿದ್ದ ರಾಯಲ್ ಎನ್‌ಫೀಲ್ಡ್‌, ಜಾವಾ, ಯೆಝಿಡಿಸ್, ಇಂಡಿಯನ್ಸ್, ಲ್ಯಾಂಬ್ರೆಟಾದಂತಹ  ವಾಹನಗಳು ಪ್ರದರ್ಶನದಲ್ಲಿದ್ದವು. ಪ್ರತಿ ವಾಹನಗಳ ಮುಂದೆ ಅದರ ವೈಶಿಷ್ಟ್ಯ, ತಯಾರಿಸಿದ ವರ್ಷ, ಸಂಖ್ಯೆ, ಮಾಡೆಲ್ ಇತ್ಯಾದಿ ಮಾಹಿತಿಗಳಿದ್ದವು.  ಅವುಗಳ ಬಣ್ಣ ಕೂಡ ಮಾಸಿದಂತೆ ವಾಹನಗಳ ಮಾಲೀಕರು ಅವನ್ನು ಜತನದಿಂದ ಕಾಪಾಡಿಕೊಂಡಿದ್ದಾರೆ.

ಬಾಲ್ಯದ ನೆನಪು ಬೆಸೆದುಕೊಂಡಿವೆ: ಪುನೀತ್‌

ನನಗೆ ಬೈಕ್‌ ಮೇಲೆ ಅಷ್ಟೊಂದು ಆಸಕ್ತಿ ಇಲ್ಲದಿದ್ದರೂ ಹಳೆಯ ಕಾಲದ ಬೈಕ್‌ ನೋಡುವುದೇ ಒಂದು ಚೆಂದ. ಬಾಲ್ಯದ ನೆನಪುಗಳನ್ನು ನಮ್ಮ ಕಣ್ಮುಂದೆ ತರಿಸುತ್ತವೆ. ಬಾಲ್ಯ ಮತ್ತು ಯೌವ್ವನದಲ್ಲಿ  ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತಿರುಗುವುದು ತುಂಬಾ ಇಷ್ಟದ ಹವ್ಯಾಸವಾಗಿತ್ತು. ಇಲ್ಲಿರುವ ಬೈಕ್‍ಗಳನ್ನು ನೋಡಿದರೆ ನಮ್ಮ ತಂದೆಯವರ ನೆನಪು ಬರುತ್ತದೆ. ನಾನು ಚಿಕ್ಕವನಿದ್ದಾಗ ಅವರು ಇಂತಹ ಬೈಕ್‌ಗಳಲ್ಲಿ ನನ್ನನ್ನು ಸುತ್ತಾಡಿಸುತ್ತಿದ್ದರು  ಎಂದು ಪುನೀತ್‌ ಮೋಟಾರ್‌ ಬೈಕ್‌ಗಳ ಜತೆಗೆ ತಮ್ಮ ಬಾಲ್ಯದ ಒಡನಾಟವನ್ನು ಮೆಲುಕು ಹಾಕಿದರು.  

ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಾರ್ಯಕ್ರಮ ಇನ್ನೂ ಎರಡು ದಿನ ನಡೆಯಲಿದೆ ಎಂದು ತಂಡದ ಮುಖ್ಯಸ್ಥ ಲೋಕೇಶ್‌ ಕುಮಾರ್‌ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು