ಬುಧವಾರ, ಏಪ್ರಿಲ್ 14, 2021
31 °C

ಗಿರ್‌ ಅರಣ್ಯದಲ್ಲಿ ಸಿಂಹಿಣಿಗೆ ಕಿರುಕುಳ: 7 ಮಂದಿಗೆ ಜೈಲು ಶಿಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

ಗಿರ್ ಸೋಮನಾಥ್: 2018ರಲ್ಲಿ ಗಿರ್‌ ಅರಣ್ಯದಲ್ಲಿ ಸಿಂಹಿಣಿಯೊಂದಕ್ಕೆ ಕಿರುಕುಳ ನೀಡಿದ ಆರೋಪದ ಮೇಲೆ ಅಹಮದಾಬಾದ್‌ನ ಮೂವರು ಪ್ರವಾಸಿಗರು ಸೇರಿದಂತೆ ಏಳು ಮಂದಿಗೆ ಗುಜರಾತ್‌ನ ಗಿರ್ ಸೋಮನಾಥ ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಗಿರ್ ಗಡಾದ ನ್ಯಾಯಾಲಯದ ನ್ಯಾಯಾಧೀಶ ಸುನಿಕ್ ಕುಮಾರ್ ದಾವೆ ಅವರು ಆರು ಆರೋಪಿಗಳಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದರೆ, ಮತ್ತೊಬ್ಬ ಆರೋಪಿಗೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಸೋಮವಾರ ಆದೇಶ ನೀಡಿದ್ದಾರೆ.

ಸಿಂಹಿಣಿಗೆ ಕಿರುಕುಳ ನೀಡಿದ ಪ್ರದೇಶವಾದ ಬಾಬರಿಯಾ ಅರಣ್ಯ ವಲಯದ ಧುಂಬಕಾರಿಯಾ ಪ್ರದೇಶದಲ್ಲಿ ಈ ಪ್ರಕರಣದ ಆರೋಪಿಯೊಬ್ಬರ ಕುಟುಂಬಕ್ಕೆ ಮಂಜೂರು ಮಾಡಿರುವ ಜಮೀನನ್ನು ವಶಕ್ಕೆ ಪಡೆಯುವಂತೆ ನ್ಯಾಯಾಲಯ ಜಿಲ್ಲಾಧಿಕಾರಿಗೆ ಸೂಚಿಸಿದೆ.

ಸಿಂಹಿಣಿಯೊಂದಕ್ಕೆ ಕೋಳಿಯೊಂದರ ಆಮಿಷ ತೋರಿಸಿ, ಅದಕ್ಕೆ ಕಿರುಕುಳ ನೀಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಸಂಬಂಧ 2018 ಮೇ ತಿಂಗಳಲ್ಲಿ ಎಂಟು ಜನರನ್ನು ಬಂಧಿಸಲಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು