ಮಂಗಳವಾರ, ಸೆಪ್ಟೆಂಬರ್ 17, 2019
24 °C

30 ಅಡಿ ಎತ್ತರದ ತೆಂಗಿನಕಾಯಿ ಗಣೇಶ

Published:
Updated:
Prajavani

ಪ್ರತಿ ವರ್ಷ ಭಿನ್ನವಾಗಿ ಗಣೇಶ ಹಬ್ಬವನ್ನು ಆಚರಿಸುವ ಪುಟ್ಟೇನಹಳ್ಳಿ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್ ಈ ಬಾರಿ ತೆಂಗಿನಕಾಯಿಗಳಿಂದ 30 ಅಡಿ ಎತ್ತರದ ಗಣೇಶ ಮೂರ್ತಿ ನಿರ್ಮಿಸಿ ಗಮನಸೆಳೆದಿದೆ.

ಗಣೇಶ ನಿರ್ಮಿಸಲು 9 ಸಾವಿರ ತೆಂಗಿನ ಕಾಯಿ ಹಾಗೂ 3 ಸಾವಿರ ಎಳನೀರು ಬಳಸಲಾಗಿದೆ. ಈ ರೀತಿಯ ಹೊಸ ಪ್ರಯತ್ನಗಳು ಪರಿಸರಸ್ನೇಹಿಯಾಗಿಯೂ ಇರಬೇಕು ಎಂಬುದು ಈ ಟ್ರಸ್ಟ್‌ನ ನಂಬಿಕೆ.

ದೇವಸ್ಥಾನಕ್ಕೆ ತರಕಾರಿಗಳಿಂದ ಅಲಂಕಾರ ಮಾಡಲಾಗುತ್ತದೆ. ಅಲಂಕಾರಕ್ಕೆ 21 ಬಗೆಯ ತರಕಾರಿ ಬಳಸಲಾಗಿದೆ. 50 ಮಂದಿ ಕೆಲಸಗಾರರು 21 ದಿನಗಳಿಂದ ಅಲಂಕಾರಕ್ಕಾಗಿ ತಯಾರಿ ಮಾಡಿಕೊಂಡಿದ್ದಾರೆ.

ಹೋದ ವರ್ಷ ಈ ಸಂಸ್ಥೆ 30 ಅಡಿ ಎತ್ತರದ ಕಬ್ಬಿನ ಗಣಪತಿ ನಿರ್ಮಿಸಿತ್ತು. ಅದಕ್ಕೂ ಹಿಂದಿನ ವರ್ಷ 400 ಕೆ.ಜಿ ಹತ್ತಿಯಿಂದ ಬೃಹತ್ ಗಣೇಶನನ್ನು ನಿರ್ಮಿಸಲಾಗಿತ್ತು. ಈ ವರ್ಷ ಸೋಮವಾರದಿಂದ ಗಣೇಶನ ದರ್ಶನ ಇರಲಿದೆ. ಗಣೇಶ ದರ್ಶನಕ್ಕೆ ಬರುವ ಭಕ್ತರಿಗಾಗಿ 10 ಸಾವಿರ ಕೆ.ಜಿ ಕೇಸರಿ ಬಾತ್ ತಯಾರಿಸಿ ಪ್ರಸಾದ ನೀಡಲಾಗುತ್ತದೆ. ಇದಕ್ಕೆ 2 ಸಾವಿರ ಕೆ.ಜಿ.ಸಕ್ಕರೆ, 2 ಸಾವಿರ ಕೆ.ಜಿ ರವೆ, 1ಸಾವಿರ ಲೀಟರ್ ತುಪ್ಪ ಬಳಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

‘ತೆಂಗಿನಕಾಯಿ ಬಹಳ ಬೇಗ ಕೆಡುವುದಿಲ್ಲ. ಆದ್ದರಿಂದ ಈ ಬಾರಿ ತೆಂಗಿನಕಾಯಿ ಆಯ್ಕೆ ಮಾಡಲಾಗಿದೆ’ ಎಂದು ಟ್ರಸ್ಟಿ ರಾಮ ಮೋಹನ ರಾಜು ಹೇಳುತ್ತಾರೆ. 

Post Comments (+)