ಲಾಲ್‌ಬಾಗ್‌ಗೆ ಹೊಸ ಅತಿಥಿಗಳು!

7

ಲಾಲ್‌ಬಾಗ್‌ಗೆ ಹೊಸ ಅತಿಥಿಗಳು!

Published:
Updated:

ರಾಜಧಾನಿಯ ಮುಕುಟಮಣಿಯಂತಿರುವ ಲಾಲ್‌ಬಾಗ್‌ಗೆ ಶೀಘ್ರದಲ್ಲೇ ಹೊಸ ನೋಟ ದಕ್ಕಲಿದೆ. ವಿವಿಧ ರೀತಿಯ ಸಸ್ಯಪ್ರಭೇದಗಳ ಮೂಲಕ ಲಾಲ್‌ಬಾಗ್ ಮತ್ತಷ್ಟು ರಂಗು ತುಂಬಿಕೊಳ್ಳಲಿದೆ.

ಬೆಗ್ಗರ್ಸ್‌ ಬೌಲ್, ಅಡನ್‌ಸೊನಿಯಾ ಡಿಜಿಟಾಟಾ, ಮೇ ಫ್ಲವರ್ ವೈಟ್, ಟಬೆಬುಯಾದ ಸೇರಿದಂತೆ ಮತ್ತಿತರ ಹೊಸ ಜಾತಿಯ ಗಿಡಗಳು ಕೆಂಪುತೋಟವನ್ನು ಅಲಂಕರಿಸಲಿವೆ. 127 ಕುಟುಂಬದ 175 ಜಾತಿಯ ಸಸ್ಯಗಳು ಹೊಸ ಅತಿಥಿಗಳಾಗಿ ಬರಲಿವೆ.

ಒಟ್ಟು 240 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಲಾಲ್‌ಬಾಗ್ ಒಡಲಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಗೆಯ ವಿವಿಧ ಪ್ರಭೇದಗಳ ಗಿಡ–ಮರಗಳಿವೆ. ಹೈದರಾಲಿಯ ಸಸ್ಯಪ್ರೇಮದ ಪ್ರತೀಕವಾಗಿ 40 ಎಕರೆಯಲ್ಲಿ 1760ರಲ್ಲಿ ಮೊಘಲ್ ಉದ್ಯಾನ ಮಾದರಿಯಲ್ಲಿ ರೂಪುಗೊಂಡ ಈ ಉದ್ಯಾನ ವಾಯುವಿಹಾರಿಗಳ ಮತ್ತು ಫಿಟ್‌ನೆಸ್ ಪ್ರಿಯರ ನೆಚ್ಚಿನತಾಣವಾಗಿದೆ.

ನಗರವಾಸಿಗಳು ಮತ್ತು ಹೊರ ಸ್ಥಳಗಳಿಂದ ಬರುವ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನಲ್ಲಿ ಐದು ಹೊಸ ರೀತಿಯ ಉದ್ಯಾನಗಳನ್ನು ರೂಪಿಸುವ ಯೋಜನೆ ಹಮ್ಮಿಕೊಂಡಿದೆ. ಈಗಾಗಲೇ ಚಿಟ್ಟೆಗಳ ಉದ್ಯಾನದ ಯೋಜನೆ ಕಾರ್ಯತತ್ಪರವಾಗಿದ್ದು, ಇನ್ನು ಕೆಲವು ತಿಂಗಳಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿರುವ ಅಪರೂಪದ ಸಸ್ಯಪ್ರಭೇದಗಳ ಮಾದರಿಯನ್ನು ಲಾಲ್‌ಬಾಗ್‌ನಲ್ಲಿ ಕಾಣಬಹುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್.

ಚಿಟ್ಟೆ ಉದ್ಯಾನ, ಪಶ್ಚಿಮಘಟ್ಟಗಳ ಸಸ್ಯಗಳು, ವಿವಿಧ ಪ್ರಭೇದಗಳ ಒಗ್ಗೂಡುವಿಕೆಯ ಸಸ್ಯಗಳು, ಅಳಿವಿನಂಚಿನಲ್ಲಿರುವ ಸಸ್ಯಗಳು, ಹೆಚ್ಚಿನ ಸಾಂದ್ರತೆಯಲ್ಲಿ ಬೆಳಯುವ ಸಸ್ಯಗಳು ಹೀಗೆ ಒಟ್ಟಾರೆ 300ರಿಂದ 400 ರೀತಿಯ ಸಸ್ಯಗಳು ಲಾಲ್‌ಬಾಗ್‌ಗೆ ಅತಿಥಿಗಳಾಗಿ ಬರಲಿವೆ. ಪಶ್ಚಿಮಘಟ್ಟಗಳ ಸಸ್ಯಗಳ ಅಧ್ಯಯನಕ್ಕಾಗಿ ಅಲ್ಲಿಗೇ ಹೋಗಬೇಕಿಲ್ಲ. ಇನ್ನು ಮುಂದೆ ವಿದ್ಯಾರ್ಥಿಗಳು, ಸಂಶೋಧಕರು ಲಾಲ್‌ಬಾಗ್‌ನಲ್ಲಿಯೇ ಆ ಸಸ್ಯಗಳನ್ನು ಅಧ್ಯಯನ ಮಾಡಬಹುದು. ಅದಕ್ಕಾಗಿ ಪ್ರತ್ಯೇಕ ಬ್ಲಾಕ್ ಅನ್ನೇ ನಿರ್ಮಿಸಲಾಗುವುದು. ಪ್ರಾಣಿ  ಮತ್ತು ಪಕ್ಷಿಗಳನ್ನು ಆಕರ್ಷಿಸಲು ಹಣ್ಣಿನ ಗಿಡಗಳನ್ನು ನೆಡಲಾಗುವುದು. ಇವುಗಳನ್ನು ವೀಕ್ಷಿಸಲು ಫುಟ್‌ಪಾತ್ ಹಾದಿ ನಿರ್ಮಿಸಲಾಗುವುದು. ಇದು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಲಿದೆ ಎಂದು ನಿರೀಕ್ಷೆ ತೋಟಗಾರಿಕೆ ಇಲಾಖೆಯದ್ದು.

ಅಳಿವಿನಂಚಿಲ್ಲಿರುವ ಸಸ್ಯಗಳು ಮತ್ತು ಪಶ್ಚಿಮ ಘಟ್ಟಗಳ ಅಪರೂಪದ ಸಸ್ಯಗಳನ್ನು ಪತ್ತೆ ಹಚ್ಚಿ ಅವುಗಳನ್ನು ಲಾಲ್‌ಬಾಗ್‌ನಲ್ಲಿ ನೆಟ್ಟು, ಸಸಿಗಳನ್ನು ಮಾಡುವ ಉದ್ದೇಶವಿದೆ. ಇದಕ್ಕಾಗಿ ಲಾಲ್‌ಬಾಗ್‌ ವತಿಯಿಂದ ತಂಡಗಳನ್ನು ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ತಂಡಗಳು ಕಾರ್ಯತತ್ಪರವಾಗಲಿದ್ದು, ಅಲ್ಲಿನ ಹವಾಮಾನಕ್ಕೆ ಹೊಂದಿಕೊಂಡ ಸಸ್ಯ ಪ್ರಭೇದಗಳು ಲಾಲ್‌ಬಾಗ್ ಪರಿಸರದಲ್ಲಿ ಹೊಂದುತ್ತವೋ ಇಲ್ಲವೋ ನೋಡಬೇಕು. ನಂತರವೇ ಅವುಗಳ ಅಭಿವೃದ್ಧಿ ಕಾರ್ಯ ಸಾಧ್ಯವಾಗಲಿದೆ ಎನ್ನುತ್ತಾರೆ ಚಂದ್ರಶೇಖರ್.

ಲಾಲ್‌ಬಾಗ್‌ನಲ್ಲಿ ಈಗ 2, 450 ಬಗೆಯ ಗಿಡ–ಮರಗಳಿವೆ. ಹೊಸ ಬಗೆಯ ಸಸ್ಯಗಳಿಂದಾಗಿ ಈ ಸಂಖ್ಯೆ ಮೂರು ಸಾವಿರಕ್ಕೇರುವ ನಿರೀಕ್ಷೆ ಇದೆ. ಸದ್ಯಕ್ಕೆ ಐದು ಬಗೆಯ ಉದ್ಯಾನಗಳ ಕಾರ್ಯ ಯೋಜನಾ ಹಂತದಲ್ಲಿದೆ. ಅದು ಕಾರ್ಯರೂಪಕ್ಕೆ ಬಂದ ಮೇಲೆ ಪ್ರವಾಸಿಗರಿಂದ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನೋದು ನೋಡಬೇಕು ಎನ್ನುತ್ತಾರೆ ಅವರು.

v

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !