ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು

5

ವಿಜ್ಞಾನ ವಿಸ್ಮಯದ ಕೆಲವು ಪ್ರಶ್ನೆಗಳು

Published:
Updated:

1. ಪ್ರಬಲ ಹವಾ ವಿದ್ಯಮಾನ ಚಂಡಮಾರುತದ (ಸೈಕ್ಲೋನ್) ಒಂದು ದೃಶ್ಯ ಚಿತ್ರ-1ರಲ್ಲಿದೆ. ಚಂಡಮಾರುತಗಳ ಕುರಿತ ಈ ಕೆಲ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ - ಯೋಚಿಸಿ ತೀರ್ಮಾನಿಸಿ:

ಅ. ಚಂಡಮಾರುತಗಳಿಗೆ ಬೇರೆ ಬೇರೆ ಹೆಸರುಗಳಿವೆ

. ಚಂಡಮಾರುತಗಳು ಕಡಲಿನ ಮೇಲೆಯೇ ಅವತರಿಸುತ್ತವೆ

ಕ. ವಾಯುಭಾರದ ತೀವ್ರ ಕುಸಿತವೇ ಚಂಡಮಾರುತಗಳ ಅವತರಣಕ್ಕೆ ಕಾರಣ

ಡ. ಚಂಡಮಾರುತಗಳು ನೆಲ ಪ್ರದೇಶಗಳ ಮೇಲೆ ಮಾತ್ರ ಮಳೆ ಸುರಿಸುತ್ತವೆ

ಇ. ಚಂಡಮಾರುತಗಳ ಹುಟ್ಟು ಸಮಭಾಜಕದ ಆಸುಪಾಸುಗಳಲ್ಲಿ ಗರಿಷ್ಠ

2. ತನ್ನ ಶರೀರಕ್ಕಿಂತ ಹೆಚ್ಚಿನ ಗಾತ್ರದ ವಸ್ತುವನ್ನು ಇರುವೆಯೊಂದು ಎಳೆದು ಸಾಗಿಸುತ್ತಿರುವ ಚಿತ್ರ ಇಲ್ಲಿದೆ (ಚಿತ್ರ-2). ಇರುವೆಗಳು ತಮ್ಮ ಶರೀರದ ಎಷ್ಟು ಪಟ್ಟು ತೂಕವನ್ನು ಎತ್ತಿ ಸಾಗಿಸಬಲ್ಲವು? ನಿಮ್ಮ ಅಂದಾಜು ಇವುಗಳಲ್ಲಿ ಯಾವುದಕ್ಕೆ ಸಮೀಪ?

ಅ. 5 ಪಟ್ಟು → ಬ. 10 ಪಟ್ಟು

ಕ. 35 ಪಟ್ಟು ಡ. 50 ಪಟ್ಟು ಇ. 150 ಪಟ್ಟು

3. ನಮ್ಮ ಸೌರವ್ಯೂಹದ ಸಕಲ ಗ್ರಹ, ಉಪಗ್ರಹ ಮತ್ತು ಕುಬ್ಜ ಗ್ರಹಗಳಲ್ಲಿ ಗರಿಷ್ಠ ಪ್ರಮಾಣದ ಜ್ವಾಲಾಮುಖಿ ಚಟುವಟಿಕೆ ನಡೆಯುತ್ತಿರುವ ಕಾಯದ ಒಂದು ದೃಶ್ಯ ಚಿತ್ರ-3ರಲ್ಲಿದೆ. ಈ ಕಾಯ ಯಾವುದು ಗೊತ್ತೇ?

ಅ. ನಮ್ಮ ಭೂಮಿ

ಬ. ಗುರುವಿನ ಉಪಗ್ರಹ ಅಯೋ

ಕ. ಶನಿಯ ಉಪಗ್ರಹ ಹೈಪರಿಯಾನ್

ಡ. ಶುಕ್ರ ಗ್ರಹ

ಇ. ಕುಬ್ಜ ಗ್ರಹ ಪ್ಲೂಟೋ

4. ಗಾಳಿಯಲ್ಲಿ ಹಾರಿ, ಬಹು ದೂರ ತೇಲಿ ಸಾಗಬಲ್ಲ ಹಾರುವ ಸರ್ಪವೊಂದು ಚಿತ್ರ-4ರಲ್ಲಿದೆ. ಹಕ್ಕಿಗಳಲ್ಲದ, ಕೀಟಗಳೂ ಅಲ್ಲದ ಅಂಥ ಕೆಲವು ಹಾರಬಲ್ಲ ಪ್ರಾಣಿಗಳ ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ?

ಅ. ಹಾರುವ ಮೀನು →ಬ. ಹಾರುವ ಅಳಿಲು

ಕ. ಹಾರುವ ನರಿ →ಡ. ಹಾರುವ ಹಲ್ಲಿ

ಇ. ಹಾರುವ ಕಪ್ಪೆ

5. ಧರೆಯ ಉತ್ತರ - ದಕ್ಷಿಣ ಧ್ರುವಗಳ ಸನಿಹದ ಪ್ರದೇಶಗಳಲ್ಲಿ ಆಕಾಶದಲ್ಲಿ ಅಗಾಗ ಗೋಚರಿಸುವ ‘ಧ್ರುವ ಪ್ರಭೆ’ಗಳ ಒಂದು ಸುಂದರ ಚಿತ್ರ ಇಲ್ಲಿದೆ (ಚಿತ್ರ-5). ಧ್ರುವ ಪ್ರಭೆಗಳು ಬಹು ಸಾಮಾನ್ಯವಾಗಿ ಭೂ ವಾತಾವರಣದ ಯಾವ ‘ಪದರ’ದಲ್ಲಿ ಮೈದಳೆಯುತ್ತವೆ?

ಅ. ಹವಾ ಗೋಳ (ಟ್ರೋಪೋಸ್ಫಿಯರ್)

ಬ. ಸ್ತರ ಗೋಳ (ಸ್ಟ್ರಾಟೋಸ್ಫಿಯರ್)

ಕ. ಅಯಾನು ಗೋಳ (ಅಯನೋಸ್ಫಿಯರ್)

ಡ. ಬಹಿರ್ಗೋಳ (ಎಕ್ಸೋಸ್ಫಿಯರ್)

6. ವಿಶ್ವದಲ್ಲಿ, ಬಾಹ್ಯಾಕಾಶದಲ್ಲಿ, ನಮ್ಮಿಂದ ಬಹು ದೂರಗಳಲ್ಲಿ ಗ್ಯಾಲಕ್ಸಿಗಳು ಒಟ್ಟೊಟ್ಟಾಗಿ ಹರಡಿವೆ - ಅಂಥದೊಂದು ನಿರ್ಮಿತಿ ಚಿತ್ರ-6ರಲ್ಲಿದೆ. ಇಂತಹ ಪರಮ ಬೃಹತ್ ನಿರ್ಮಿತಿಗಳ ಹೆಸರೇನು?

ಅ. ಸೂಪರ್ ಗ್ಯಾಲಕ್ಸಿ

ಬ. ಗ್ಯಾಲಕ್ಸೀಯ ಪುಂಜ

ಕ. ಗ್ಯಾಲಕ್ಸೀಯ ಗುಂಪು

ಡ. ಗ್ಯಾಲಕ್ಸೀಯ ಗುಚ್ಚ

7. ವಿಶ್ವ ವಿಖ್ಯಾತ ‘ಹಬಲ್ ಬಾಹ್ಯಾಕಾಶ ದೂರದರ್ಶಕ’ ಚಿತ್ರೀಕರಿಸಿದ, ನಮ್ಮ ಕ್ಷೀರ ಪಥದಲ್ಲೇ ಇರುವ ಅತ್ಯದ್ಭುತ ನಿರ್ಮಿತಿಯೊಂದರ ದೃಶ್ಯ ಇಲ್ಲಿದೆ (ಚಿತ್ರ-7). ಈ ನಿರ್ಮಿತಿ ಯಾವ ರೂಪಾನ್ವಯ ಹೆಸರನ್ನು ಪಡೆದು ಪ್ರಸಿದ್ಧವಾಗಿದೆ?

ಅ. ದೇವರ ಕಣ್ಣು

ಬ. ಸೃಷ್ಟಿಯ ಸ್ತಂಭಗಳು

ಕ. ಕುದುರೆ ತಲೆ

ಡ. ಸ್ವರ್ಗದ ಮೆಟ್ಟಿಲು

8. ಬೃಹದ್ದೇಹೀ ಕರಡಿಯೊಂದು ಚಿತ್ರ-8ರಲ್ಲಿದೆ. ಇಲ್ಲಿ ಸೂಚಿಸಿರುವ ವಿಶಿಷ್ಟ ಕರಡಿ ವಿಧಗಳು ಯಾವುವು - ಹೆಸರಿಸಬಲ್ಲಿರಾ?

ಅ. ಅತ್ಯಂತ ದೈತ್ಯ ಶರೀರದ ಕರಡಿ

ಬ. ಚೀನಾ ದೇಶದ ವಿಶ್ವ ಪ್ರಸಿದ್ಧ ಕರಡಿ ವಿಧ

9. ನಿರ್ದಿಷ್ಟ ಹವಾ ಪರಿಸ್ಥಿತಿಗಳಲ್ಲಿ ಹಗಲಲ್ಲಿ ಸೂರ್ಯನ ಬೆಳಕಲ್ಲೂ, ಇರುಳಲ್ಲಿ ಚಂದ್ರನ ಬೆಳಕಲ್ಲೂ ಆಕಾಶದಲ್ಲಿ ಮೈದಳೆವ ವಿಶಿಷ್ಟ ಬೆಳಕಿನ ವಿದ್ಯಮಾನದ ದೃಶ್ಯವೊಂದು ಚಿತ್ರ-9ರಲ್ಲಿದೆ. ಯಾವುದು ಈ ವಿದ್ಯಮಾನ?

ಅ. ಹೇಲೋ

ಬ. ಗ್ಲೋರೀ

ಕ. ಮರೀಚಿಕೆ

ಡ. ಇರಿಡಿಸೆನ್ಸ್

ಇ. ಕರೋನಾ

10. ಪ್ರಣಯ ಕಾಲದಲ್ಲಿ ಚಿತ್ರ-ವಿಚಿತ್ರ ಪುಕ್ಕ-ಗರಿಗಳನ್ನು ಪಡೆದು, ಅವುಗಳನ್ನು ಪ್ರದರ್ಶಿಸಿ ಹೆಣ್ಣುಗಳನ್ನು ಆಕರ್ಷಿಸುವ ಸುಪ್ರಸಿದ್ಧ ‘ಸಗ್ಗವಕ್ಕಿ’ಗಳ ಒಂದು ಪ್ರಭೇದ ಚಿತ್ರ-10ರಲ್ಲಿದೆ. ಸ್ವರ್ಗದ ಹಕ್ಕಿಗಳ ಪ್ರಧಾನ ನೈಸರ್ಗಿಕ ನೆಲೆ ಇವುಗಳಲ್ಲಿ ಯಾವುದು?

ಅ. ಮಡಗಾಸ್ಕರ್

ಬ. ಪಶ್ಚಿಮ ಘಟ್ಟದ ಅಡವಿ

ಕ. ಹವಾಯ್ ದ್ವೀಪಸ್ತೋಮ

ಡ. ನ್ಯೂಗಿನಿ ದ್ವೀಪ

ಇ. ನ್ಯೂಜಿಲೆಂಡ್

11. ನೋಡಿದೊಡನೆಯೇ ತಿಳಿಯುವಂತೆ ವೈಜ್ಞಾನಿಕವಾಗಿ ತುಂಬ ಮಹತ್ವ ಪಡೆಯಬಲ್ಲ ಶಿಲೆಯೊಂದು ಚಿತ್ರ-11ರಲ್ಲಿದೆ. ಈ ಶಿಲೆಯ ಮಹತ್ವಕ್ಕೆ ಕಾರಣ ಏನಿರಬಹುದು ಊಹಿಸಬಲ್ಲಿರಾ?

ಅ. ಅದರ ವಿಶಿಷ್ಟ ಆಕಾರ

ಬ. ಅದರ ವಿಶೇಷ ವರ್ಣಾಲಂಕಾರ

ಕ. ಅದರಲ್ಲಿ ಹುದುಗಿರುವ ಜೀವಿ ಅವಶೇಷ

ಡ. ಅದರ ಖನಿಜ ಸಂಯೋಜನೆ

12. ದ್ವೀಪಗಳ ಒಂದು ವಿಶಿಷ್ಟ ಬಗೆಯಾದ ಎಟಾಲ್ ಚಿತ್ರ-12ರಲ್ಲಿದೆ. ಉಂಗುರಾಕಾರದ ಇಂಥ ದ್ವೀಪಗಳು ಸೃಷ್ಟಿಗೊಳ್ಳಲು ಇವುಗಳಲ್ಲಿ ಯಾವುದು ಕಾರಣ?

ಅ. ಹವಳದ ಜೀವಿಗಳು

ಬ. ಸಾಗರ ತಳದ ಭೂ ಕಂಪನ

ಕ. ಸಾಗರಾಂತಸ್ಥ ಜ್ವಾಲಾಮುಖಿ ಸ್ಫೋಟ

ಡ. ಕಡಲ ತಳದ ಶಿಲಾಪದರಗಳ ಮಡಚುವಿಕೆ

13. ಪಟ್ಟೆ ಪಟ್ಟೆ ಅಲಂಕಾರದ, ಆಕರ್ಷಕ ಚಿತ್ತಾರದ ನೈಸರ್ಗಿಕ ಖನಿಜ ವಿಧ ಚಿತ್ರ-13ರಲ್ಲಿದೆ. ಆಭರಣ ಯೋಗ್ಯ ಸ್ಥಾನವನ್ನೂ ಗಳಿಸಿರುವ ಈ ಖನಿಜ ಯಾವುದು?

ಅ. ಟೋಪಾಜ್

ಬ. ಟೂರ್ಮಲೀನ್

ಕ. ಮ್ಯಾಲಕೈಟ್ ಡ. ಅಗೇಟ್ ಇ. ಬೆರೈಲ್

14. ಬಾವಲಿಗಳು (ಚಿತ್ರ-14) ವಿರಮಿಸುವಾಗಲೆಲ್ಲ ತಲೆಕೆಳಗಾಗಿಯೇ ತೂಗುತ್ತವೆ, ಹೌದಲ್ಲ? ಈ ವೈಚಿತ್ರ್ಯಕ್ಕೆ ಅವುಗಳ ಶರೀರದ ಯಾವ ಲಕ್ಷಣ ಪ್ರಮುಖ ಕಾರಣ?

ಅ. ಬಾವಲಿಗಳಿಗೆ ಕಾಲುಗಳೇ ಇಲ್ಲ

ಬ. ಅವಕ್ಕೆ ಪಾದ ಸಹಿತ ಕಾಲುಗಳಿಲ್ಲ

ಕ. ನೆಲದಿಂದ ಚಿಮ್ಮಿ ಹಾರತೊಡಗುವುದು ಅವಕ್ಕೆ ಸಾಧ್ಯವಿಲ್ಲ

ಡ. ಅವಕ್ಕೆ ವೃಕ್ಷಗಳ ಕೊಂಬೆ-ರೆಂಬೆಗಳಲ್ಲಿ ಕೂರಲು ಬರುವುದಿಲ್ಲ

ಉತ್ತರಗಳು

1. ಡ - ಇದು ತಪ್ಪು ಹೇಳಿಕೆ

2. ಡ - 50 ಪಟ್ಟು

3. ಬ - ಗುರುವಿನ ಚಂದ್ರ ಅಯೋ

4. ಕ - ಹಾರುವ ನರಿ

5, ಕ - ಅಯಾನು ಗೋಳ

6. ಡ - ಗ್ಯಾಲಕ್ಸೀಯ ಗುಚ್ಛ

7. ಬ - ಸೃಷ್ಟಿಯ ಸ್ತಂಭಗಳು

8. ಅ - ಧ್ರುವ ಕರಡಿ (ಪೋಲಾರ್ ಬೇರ್); ಬ - ಪಾಂಡಾ ಕರಡಿ

9. ಇ - ಕರೋನಾ

10. ಡ - ನ್ಯೂಗಿನಿ ದ್ವೀಪ

11. ಕ - ಅದರಲ್ಲಿ ಜೀವಿ ಅವಶೇಷ ಹುದುಗಿದೆ

12. ಅ - ಹವಳದ ಜೀವಿಗಳು

13. ಡ - ಅಗೇಟ್

14. ಬ - ಅವಕ್ಕೆ ಪಾದ ಸಹಿತ ಕಾಲುಗಳಿಲ್ಲ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !