ಕಿ.ರಂ. ನೆನಪಿನಲ್ಲಿ ಕಾವ್ಯ ಶಿವರಾತ್ರಿ

ಬುಧವಾರ, ಮಾರ್ಚ್ 20, 2019
23 °C

ಕಿ.ರಂ. ನೆನಪಿನಲ್ಲಿ ಕಾವ್ಯ ಶಿವರಾತ್ರಿ

Published:
Updated:
Prajavani

ಜನಸಂಸ್ಕೃತಿ ಪ್ರತಿಷ್ಠಾನ ಮತ್ತು ಕಾವ್ಯಮಂಡಲ ಕಿ.ರಂ. ನಾಗರಾಜ ನೆನಪಿನಲ್ಲಿ ಮಾರ್ಚ್ 4ರಂದು ಕಾವ್ಯ ಶಿವರಾತ್ರಿ, ಅಹೋರಾತ್ರಿ ಕಾವ್ಯಗಾಯನ ಕಾರ್ಯಕ್ರಮ ಆಯೋಜಿಸಿದೆ.

ಪ್ರೊ.ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಹೆಚ್ಚು ಪ್ರೀತಿ ಇತ್ತು. ಅವುಗಳ ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಜನಪದ ಮಹಾಕಾವ್ಯಗಳ ವಿಭಿನ್ನ ಒಳನೋಟಗಳನ್ನು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಪ್ರತಿ ಶಿವರಾತ್ರಿಯಂದು ಜನಪದ ಕಾವ್ಯಗಳನ್ನು ಮೊಳಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಈ ಜನಪದ ಕೈಂಕರ್ಯವನ್ನು ಮುಂದುವರಿಸುವ ಸಲುವಾಗಿ ಜನಸಂಸ್ಕೃತಿ ಮತ್ತು ಕಾವ್ಯಮಂಡಲ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಈ ಬಾರಿ ಮಾರ್ಚ್ 4ರಂದು ಸಂಜೆ 6ಕ್ಕೆ ಕಾವ್ಯ ಶಿವರಾತ್ರಿ ಹಾಗೂ ಕಿ.ರಂ. ಕಾವ್ಯಶಿವರಾತ್ರಿ ಪುರಸ್ಕಾರ ಹಾಗೂ ಪ್ರೊ.ಕಿ.ರಂ. ನಾಗರಾಜ–75 ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಬಾರಿ ದೊಡ್ಡಗವಿ ಬಸಪ್ಪ ಮತ್ತು ತಂಡಕ್ಕೆ ಕಾವ್ಯ ಶಿವರಾತ್ರಿ ಪುರಸ್ಕಾರವನ್ನು ನೀಡಲಾಗುತ್ತಿದೆ. ಜೊತೆಗೆ ಮಂಟೇಸ್ವಾಮಿ ಮಹಾಕಾವ್ಯ ಮತ್ತು ಮಲೆ ಮಹದೇಶ್ವರ ಮಹಾಕಾವ್ಯಗಳನ್ನು ಜನಪದ ವೃತ್ತಿ ಗಾಯಕರು ಪ್ರಸ್ತುತ ಪಡಿಸಲಿದ್ದಾರೆ.

ಕಿ.ರಂ. ಅವರಿಗೆ ಇದೀಗ 75 ವರ್ಷಗಳು ಪೂರೈಸಿವೆ. ಈ ಹಿನ್ನೆಲೆಯಲ್ಲಿ ಜನಸಂಸ್ಕೃತಿ ಮತ್ತು ಕಾವ್ಯಮಂಡಲ ಹಾಗೂ ವಿವಿಧ ಸಂಘ–ಸಂಸ್ಥೆಗಳ, ಕಿ.ರಂ. ಒಡನಾಡಿಗಳೊಂದಿಗೆ ಡಿಸೆಂಬರ್ 25, 2019ರವರೆಗೆ ಒಟ್ಟು ನಾಡಿನಾದ್ಯಂತ ಮತ್ತು ಹೊರ ರಾಜ್ಯಗಳಲ್ಲೂ 75 ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ.

ಕವಿಗೋಷ್ಠಿ, ಕಿ.ರಂ. ಬದುಕು–ಬರಹ, ಕಿ.ರಂ. ಉಪನ್ಯಾಸದ ಮಾದರಿಗಳ ಕುರಿತು ಉಪನ್ಯಾಸ ಮಾಲಿಕೆಗಳು ಹಾಗೂ ಅವರು ರಚಿಸಿರುವ ಕಾಲಜ್ಞಾನಿ ಕನಕ, ನೀಗಿಕೊಂಡ ಸಂಸ, ಮಧ್ಯಮ ವ್ಯಾಯೋಗ ನಾಟಕಗಳ ಪ್ರದರ್ಶನ, ಕಿ.ರಂ. ಕುರಿತ ಸಾಕ್ಷ್ಯಚಿತ್ರವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಕವಿತೆಗಳು ಮತ್ತು ಉಪನ್ಯಾಸಗಳನ್ನು ಆಧರಿಸಿದ ಪ್ರಬಂಧಗಳನ್ನು ಕೃತಿರೂಪದಲ್ಲಿ ಪ್ರಕಟಿಸಲಾಗುವುದು.

ಕಾವ್ಯ ಶಿವರಾತ್ರಿ, ಅಹೋರಾತ್ರಿ ಕಾವ್ಯಗಾಯನ:
ಉದ್ಘಾಟನೆ: ಸಂಸದ ಎಲ್. ಹನುಮಂತಯ್ಯ.

ಅತಿಥಿಗಳು: ಕೋಟಿಗಾನಹಳ್ಳಿ ರಾಮಯ್ಯ, ಉಷಾ ಕಟ್ಟೇಮನೆ, ಬಿ.ಎಂ. ಹನೀಫ್, ಕೆ.ಬಿ. ಬೆಟ್ಟೇಗೌಡ, ಪಿ. ಮಲ್ಲಿಕಾರ್ಜುನಪ್ಪ, ಸಂಗಮೇಶ ಉಪಾಸೆ, 
ಕೆ.ಎನ್. ಕವನ.

ಆಯೋಜನೆ: ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ.

ಸ್ಥಳ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಾರ್ಚ್ 4ರಂದು ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !