ವ್ಯಾಪಾರಿಗಳಿಗೆ, ವಿಶೇಷವಾಗಿ ಜಿಎಸ್ಟಿ ನೋಂದಣಿ ಮಾಡಿಸದವರಿಗೆ ತೆರಿಗೆ ಪಾವತಿಸಿ ಮತ್ತು ನೋಂದಣಿ ಮಾಡಿಸಿಕೊಳ್ಳಿ ಎಂದು ಸೂಚಿಸಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್ಟಿ ನೋಟಿಸ್ ಬಂದರೆ ಏನು ಮಾಡಬೇಕು? ಇಲ್ಲಿದೆ ಸಲಹೆ...

* ಜಿಎಸ್ಟಿ ಕಾಯ್ದೆಯ ಅಡಿಯಲ್ಲಿ, ವಾರ್ಷಿಕ ವಹಿವಾಟು (Aggregate Turnover) ಎಂದರೆ ಕೇವಲ ವ್ಯಾಪಾರಕ್ಕೆ ಸಂಬಂಧಿಸಿದ ಆದಾಯ (Business Receipts) ಮಾತ್ರ. ಅದರಲ್ಲಿ ವೈಯಕ್ತಿಕ ಅಥವಾ ವ್ಯಾಪಾರೇತರ (Non-Business) ವಹಿವಾಟುಗಳು ಸೇರುವುದಿಲ್ಲ

* ಜಿಎಸ್ಟಿ ಕಾಯ್ದೆಯ ಸೆಕ್ಷನ್ 22/24ರ ಅಡಿಯಲ್ಲಿ ನಿಮ್ಮ ವ್ಯವಹಾರದ ವಾರ್ಷಿಕ ವಹಿವಾಟು ಮಿತಿ ಮೀರಿದರೆ ಅಥವಾ ಕಡ್ಡಾಯ ನೋಂದಣಿಗೆ ಒಳಪಡುವ ವ್ಯವಹಾರವಿದ್ದರೆ, ತಕ್ಷಣ ಜಿಎಸ್ಟಿ ನೋಂದಣಿ ಮಾಡಿಸಿ. ಎಲ್ಲಾ ವಹಿವಾಟುಗಳ ದಾಖಲೆಗಳನ್ನೂ ಕ್ರಮಬದ್ಧವಾಗಿ ಇರಿಸಿಕೊಳ್ಳಿ

* ಜಿಎಸ್ಟಿ ಕಾಯ್ದೆಯ ಸೆಕ್ಷನ್ 23ರ ಪ್ರಕಾರ, ಸಂಪೂರ್ಣವಾಗಿ ತೆರಿಗೆ-ವಿನಾಯಿತಿ ಇರುವ ಅಥವಾ ಶೂನ್ಯ-ದರದ ವಸ್ತು/ಸೇವೆಗಳಿಗೆ ನೋಂದಣಿ ಅಗತ್ಯವಿಲ್ಲ. ಉದಾಹರಣೆಗೆ, ಹಣ್ಣು/ತರಕಾರಿ ಮಾರಾಟ, ಕೃಷಿಕರ ಅಕ್ಕಿ ಮಾರಾಟ, ಆಸ್ಪತ್ರೆ ಸೇವೆಗಳು

* ಕೆಲವೊಮ್ಮೆ, ತೆರಿಗೆ ಇಲಾಖೆಯು ಯುಪಿಐ ವಹಿವಾಟಿನ ಒಟ್ಟು ದತ್ತಾಂಶವನ್ನು (ವೈಯಕ್ತಿಕ ಮತ್ತು ವ್ಯಾಪಾರ ವಹಿವಾಟುಗಳನ್ನು ಒಟ್ಟಿಗೆ) ಗಣನೆಗೆ ತೆಗೆದುಕೊಂಡು, ವಾರ್ಷಿಕ ವಹಿವಾಟಿನ ಮಿತಿಯನ್ನು ಮೀರಿದೆ ಎಂದು ಭಾವಿಸಿ ನೋಟಿಸ್ ಜಾರಿ ಮಾಡಬಹುದು. ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್, ವಹಿವಾಟಿನ ಟಿಪ್ಪಣಿಗಳ ಆಧಾರದಲ್ಲಿ ವೈಯಕ್ತಿಕ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಯುಪಿಐ ವಹಿವಾಟುಗಳನ್ನು ಸ್ಪಷ್ಟವಾಗಿ ವಿಂಗಡಿಸಿ ತೋರಿಸಿ, ಇವು ವ್ಯಾಪಾರಕ್ಕೆ ಸಂಬಂಧವಿಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು

* ಯುಪಿಐ ವಹಿವಾಟುಗಳು ಡಿಜಿಟಲ್ ಆರ್ಥಿಕತೆಯನ್ನು ಸುಗಮಗೊಳಿಸಿದರೂ, ಜಿಎಸ್ಟಿ ಕಾಯ್ದೆಯ ಅಡಿ ವಾರ್ಷಿಕ ವಹಿವಾಟಿನ ಮಿತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ತಪ್ಪಾದ ನೋಟಿಸ್ ಸಂದರ್ಭದಲ್ಲಿ, ದಾಖಲೆ ಗಳೊಂದಿಗೆ ತಕ್ಷಣ ಉತ್ತರಿಸಿ, ವಾಣಿಜ್ಯ ತೆರಿಗೆ ಇಲಾಖೆಯಿಂದ ಸ್ಪಷ್ಟನೆ ಪಡೆಯಿರಿ

* ಜಿಎಸ್ಟಿ ತಜ್ಞರ ಸಹಾಯದಿಂದ, ನೋಟಿಸ್ನಲ್ಲಿ ಉಲ್ಲೇಖಿತ ಗಡುವಿನೊಳಗೆ ಇಲಾಖೆಗೆ ಉತ್ತರಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ.

ಲೇಖಕ: ತೆರಿಗೆ ಸಲಹೆಗಾರ
.ಆಳ–ಅಗಲ| ಯುಪಿಐ –ಜಿಎಸ್ಟಿ; ಗೊಂದಲವೇಕೆ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.