ಸಾಧನೆಗೆ ಕುಟುಂಬದ ಬಡತನ ಅಂಗವಿಕಲತೆಯೇ ಪ್ರೇರಣೆ. ರಕ್ತಸಂಬಂಧದಲ್ಲಿ ಮದುವೆಯಾಗಿದ್ದರಿಂದಲೋ ಏನೋ ಅಮ್ಮ ಅಪ್ಪನಿಗೆ ಹುಟ್ಟಿದ ಮಕ್ಕಳ ಪೈಕಿ ನಾನು ಅಂಧನಾದೆ. ಅಣ್ಣನೂ ಅಂಗವಿಕಲನಾದ; ಅಕಾಲಿಕವಾಗಿ ಸತ್ತೂ ಹೋದ. ಇಬ್ಬರು ಅಕ್ಕಂದಿರು ಚಿಕ್ಕಂದಿನಲ್ಲೇ ತೀರಿಹೋದರು. ನನ್ನ ಪರಿಸ್ಥಿತಿಗಳು ನೋವುಗಳೇ ನನ್ನನ್ನು ರೂಪಿಸಿದವು.