ಬೆಂಗಳೂರು: ಗೋಲುಗಳ ಮಳೆಗರೆದ ಕೇರಳ ತಂಡವು ಗುರುವಾರ ನಡೆದ ಖೇಲೊ ಇಂಡಿಯಾ– ಅಸ್ಮಿತಾ 13 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಲೀಗ್ (ದಕ್ಷಿಣ ವಲಯ) ಪಂದ್ಯದಲ್ಲಿ 36–0ಯಿಂದ ಅಂಡಮಾನ್ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳ ಪರ ದಿವ್ಯಾ ಯು. ಅವರು 15 ಗೋಲುಗಳನ್ನು ಬಾರಿಸಿದರೆ, ಶಜಾನಾ ಇ.ಬಿ. 11 ಗೋಲುಗಳನ್ನು ದಾಖಲಿಸಿದರು. ಎಲೀನಾ ಎಲಿಜಬೆತ್, ನೈಮಾ ಎಂ.ಕೆ, ಆದ್ಯಾ ದಿನೇಶ್ ಹ್ಯಾಟ್ರಿಕ್ ಸಾಧನೆ ಮೆರೆದರು.

ದಿನದ ಮತ್ತೊಂದು ಪಂದ್ಯದಲ್ಲಿ ಪುದುಚೇರಿ ತಂಡವು 8–0ಯಿಂದ ಆಂಧ್ರಪ್ರದೇಶ ತಂಡವನ್ನು ಸೋಲಿಸಿತು. ಮಹಾದೇವಿ ಮತ್ತು ಸೆಬಿಯಾ ಎಸ್. ಕ್ರಮವಾಗಿ ನಾಲ್ಕು ಮತ್ತು ಮೂರು ಗೋಲು ಗಳಿಸಿ ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.