ಶನಿವಾರ, ಡಿಸೆಂಬರ್ 4, 2021
26 °C

ಫ್ಯಾಕ್ಟ್‌ ಚೆಕ್‌: ವಾಹನಗಳಿಗೆ ಹಾನಿ; ಸುಳ್ಳು ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಗರವೊಂದರ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ಗುಂಪೊಂದು ಹಾನಿಗೀಡು ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಿರುವುದು ಕೇಳುತ್ತದೆ. ‘ಉತ್ತರ ಪ್ರದೇಶದ ಪ್ರತಾಪ್‌ಗಡದ ಲಾಲ್‌ಗಂಜ್‌ ನಗರದಲ್ಲಿ ಮುಸ್ಲಿಮರು ದುರ್ಗಾ ಪೂಜೆ ಪೆಂಡಾಲ್‌ಗಳನ್ನು ಧ್ವಂಸಗೊಳಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಹಿಂದೂಗಳ ಗುಂಪು ಮುಸ್ಲಿಮರನ್ನು ಥಳಿಸಿತು. ಜೊತೆಗೆ, ಮಸೀದಿಗಳ ಮೇಲೆ ಹಾರಿಸಿದ್ದ ಮುಸ್ಲಿಮರ ಧಾರ್ಮಿಕ ಧ್ವಜಗಳನ್ನು ತೆಗೆದುಹಾಕಿತು’ ಎಂದು ಅಡಿಬರಹವನ್ನೂ ನೀಡಲಾಗಿದೆ.

ಈ ಮಾಹಿತಿ ಸುಳ್ಳು ಎಂಬುದನ್ನು ಉತ್ತರ ಪ್ರದೇಶ ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆ 2021ರ ಅ.5ರಂದು ಛತ್ತೀಸಗಡದ ಕವರ್ಧಾದಲ್ಲಿ ನಡೆದಿದೆ. ಈ ಘಟನೆಗೂ ಪ್ರತಾಪಗಡಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಟ್ವೀಟ್‌ ಮಾಡಿದೆ. ಜೊತೆಗೆ, ‘ನಯಾ ಭಾರತ್‌’ ಎಂಬ ಸುದ್ದಿ ಪೋರ್ಟಲ್‌ನಲ್ಲಿ ಆ ಘಟನೆಗೆ ಸಂಬಂಧಿಸಿದಂತೆ ಪ್ರಕಟವಾಗಿದ್ದ ಸುದ್ದಿಯನ್ನೂ ಪೋಸ್ಟ್‌ ಮಾಡಿದೆ. ಧ್ವಜ ಹಾರಿಸುವ ಕುರಿತು ನಡೆದಿದ್ದ ಸಂಘರ್ಷ ಕುರಿತ ವಿಡಿಯೊ ಇದು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಈ ವರದಿಯನ್ನು ಆಲ್ಟ್‌ ನ್ಯೂಸ್‌ ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು