ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ತಂದೆಯ ಸಾವಿಗೆ ಮೋದಿ ಕಾರಣ ಎಂದರೇ ಅವರ ಸಹೋದರ?

Last Updated 5 ಆಗಸ್ಟ್ 2021, 18:49 IST
ಅಕ್ಷರ ಗಾತ್ರ

‘ತಮ್ಮ ತಂದೆಯ ಸಾವಿಗೆ ಸಹೋದರ, ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬ ಭಾವನೆ ಅವರ ಇತರ ಸಹೋದರರಲ್ಲಿ ಈಗಲೂ ಇದೆ’ ಎಂಬ ಪತ್ರಿಕಾ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಮೋದಿ ಅವರು ಚಿನ್ನ ಕದ್ದು ಮನೆಯಿಂದ ಹೊರನಡೆದಾಗ ಅವರ ತಂದೆ ದಾಮೋದರ ದಾಸ್ ಮೋದಿ ಅವರು ಹೃದಯಾಘಾತದಿಂದ ಮೃತಪಟ್ಟರು. ಹಣಕಾಸಿನ ತೊಂದರೆಯಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಲಿಲ್ಲ’ ಎಂದು ವರದಿಯಲ್ಲಿ ಇದೆ.

‘ಡೆಲ್ಲಿ ನ್ಯೂಸ್‌ ನೆಟ್‌ವರ್ಕ್‌’ ಎಂಬ ಪತ್ರಿಕೆಯಲ್ಲಿ ಈ ವರದಿ ಪ್ರಕಟವಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಹೆಸರಿನ ಪತ್ರಿಕೆಯೇ ಇಲ್ಲ ಎಂಬುದು ‘ಆಲ್ಟ್‌ ನ್ಯೂಸ್‌’ ಮತ್ತು ‘ಲಾಜಿಕಲ್‌ ಇಂಡಿಯನ್‌’ನ ಫ್ಯಾಕ್ಟ್‌ ಚೆಕ್‌ ತಂಡಗಳು ನಡೆಸಿದ ಪರಿಶೀಲನೆಯಿಂದ ಗೊತ್ತಾಗಿದೆ. ವರದಿಯಲ್ಲಿ ಕಾಗುಣಿತದ ಹಲವು ತಪ್ಪುಗಳು ಇವೆ. ‘ಈ ಸುದ್ದಿ ಸುಳ್ಳು’ ಎಂದು ಮೋದಿ ಅವರ ಸಹೋದರರಾದಸೋಮ ಮೋದಿ ಹಾಗೂ ಪ್ರಹ್ಲಾದ್ ಮೋದಿ ಅವರೂ ತಿಳಿಸಿದ್ದಾರೆ. ತಂದೆಯವರು ಕ್ಯಾನ್ಸರ್‌ನಿಂದ ಮೃತಪಟ್ಟಾಗ ನರೇಂದ್ರ ಮೋದಿ ಅವರು ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಆಗಷ್ಟೇ ಬಂದಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT