ಮಧ್ಯವಯಸ್ಸಿನ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸುತ್ತಿರುವ ದೃಶ್ಯವಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಮನೆಯಲ್ಲಿ ದೇವರಿಗೆ ಆರತಿ ಮಾಡುತ್ತಿದ್ದ ಈ ವ್ಯಕ್ತಿಯನ್ನು ಹೊರಗೆ ಎಳೆದುತಂದು, ಅವರ ಮಗಳ ಕಣ್ಣಮುಂದೆಯೇ ಥಳಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ದೇವರ ಪೂಜೆ ಮಾಡುವುದೂ ಅಪರಾಧವೇ’ ಎಂಬ ಸಂದೇಶವನ್ನೂ ಈ ವಿಡಿಯೊದ ಜತೆಗೆ ಹರಿಯಬಿಡಲಾಗಿದೆ.

ಆದರೆ, ಈ ವಿಡಿಯೊ ಬಗ್ಗೆ ಸ್ಪಷ್ಟನೆ ನೀಡಿರುವ ಕೋಲ್ಕತ್ತ ಪೊಲೀಸರು, ಇದು ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಆಕೆಯ ಕುಟುಂಬದವರು ಥಳಿಸಿದ ಸಂದರ್ಭದ ವಿಡಿಯೊ ಎಂದು ಸರಣಿ ಟ್ವೀಟ್ಗಳ ಮೂಲಕ ಹೇಳಿದ್ದಾರೆ. ಇದೇ ವಿಡಿಯೋ 2017ರಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ‘ಪೂಜೆ ಸಂದರ್ಭದಲ್ಲಿ ಬರುವ ಗಂಟೆಯ ಸದ್ದಿನಿಂದ ಕಿರಿಕಿರಿಯಾಗುತ್ತದೆ ಎಂಬ ಕಾರಣಕ್ಕೆ ಮುಸ್ಲಿಮರು ಹಿಂದೂ ಪೂಜಾರಿಯನ್ನು ಥಳಿಸುತ್ತಿದ್ದಾರೆ’ ಎಂದು ಆಗ ಅಡಿಬರಹ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.