ಶುಕ್ರವಾರ, ಜೂನ್ 5, 2020
27 °C

ಫ್ಯಾಕ್ಟ್‌ ಚೆಕ್‌ | ಸೈಕಲ್ ಏರಿ ಹೊರಟ ಕಾರ್ಮಿಕ ಮಹಿಳೆಯ ಚಿತ್ರ ಭಾರತದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್ ಪರಿಣಾಮದಿಂದ ದೇಶದಾದ್ಯಂತ ವಲಸೆ ಕಾರ್ಮಿಕರ ಕರುಣಾಜನಕ ಕಥೆಗಳದ್ದೇ ಸುದ್ದಿ. ಕಾರ್ಮಿಕ ಮಹಿಳೆಯೊಬ್ಬರು ತನ್ನ ಹಸುಗೂಸನ್ನು ಬೆನ್ನಿಗೆ ಕಟ್ಟಿಕೊಂಡು ಸೈಕಲ್ ತುಳಿಯುತ್ತಿರುವ ಚಿತ್ರವನ್ನು ಕಾಂಗ್ರೆಸ್ ಮುಖಂಡ ರಣದೀಪ್ ಸರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ. ‘ಇದು ಹೊಸ ಭಾರತದ ನೈಜತೆ’ ಎಂದು ಉಲ್ಲೇಖಿಸಿದ್ದಾರೆ. ಈ ಟ್ವೀಟ್ 190 ಬಾರಿ ರಿಟ್ವೀಟ್ ಆಗಿದೆ. ಸರ್ಜೇವಾಲಾ ಅವರು ಟ್ವೀಟ್‌ ಮಾಡಿದ ಸ್ವಲ್ಪ ಸಮಯದಲ್ಲೇ ಅದನ್ನು ಅಳಿಸಿ ಹಾಕಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣವನ್ನೂ ಅವರು ನೀಡಿಲ್ಲ. 

ಸೈಕಲ್ ಏರಿ ಹೊರಟ ಕಾರ್ಮಿಕ ಮಹಿಳೆಯ ಚಿತ್ರ ಭಾರತದ್ದಲ್ಲ. ಅದು ನೇಪಾಳಕ್ಕೆ ಸಂಬಂಧಿಸಿದ್ದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. 2016ರಲ್ಲಿ ಬ್ರಿಟನ್ ಮೂಲದ ಬ್ಲಾಗ್‌ನಲ್ಲಿ ಈ ಚಿತ್ರವನ್ನು ಬಳಸಿಕೊಳ್ಳಲಾಗಿತ್ತು. 2012ರಲ್ಲಿ ಈ ಚಿತ್ರವನ್ನು ಸೆರೆಹಿಡಿಯಲಾಗಿತ್ತು.


ನೇಪಾಳದ ನೇಪಾಳ್‌ಗಂಜ್‌ನಲ್ಲಿ ತಾಯಿ–ಮಗುವಿನ ಸೈಕಲ್ ಸವಾರಿ (ಕೃಪೆ: ಪಿಂಟರೆಸ್ಟ್)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು