ಮಂಗಳವಾರ, ಸೆಪ್ಟೆಂಬರ್ 29, 2020
23 °C

ವೈರಲ್ ಆಗಿರುವುದು ಹಳೆಯ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂರ್ವ ಲಡಾಖ್‌ನಲ್ಲಿ ಮೂರುವರೆ ಕಿಲೋಮೀಟರ್ ಭೂ ಪ್ರದೇಶವನ್ನು ಚೀನಾದಿಂದ ಮರು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಸೇನೆಯಲ್ಲಿರುವ ಟಿಬೆಟಿಯನ್ ವಿಶೇಷ ಪ್ಯಾರಾಟ್ರೂಪರ್ ಫೋರ್ಸ್‌ನ ಸೈನಿಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ‘ಮಿಷನ್ ಪಿಒಕೆ/ಅಕ್ಸಾಯಿಚಿನ್’ ಹೆಸರಿನಲ್ಲಿ ಅಖಂಡ ಭಾರತಕ್ಕಾಗಿ ನಡೆದ ಹೋರಾಟವಿದು ಎಂಬ ಅರ್ಥದಲ್ಲಿ ಇದನ್ನು ಬಿಂಬಿಸಲಾಗುತ್ತಿದೆ. ವಿಡಿಯೊದಲ್ಲಿ ಟಿಬೆಟ್‌ನ ಧ್ವಜ ಕಾಣಿಸುತ್ತದೆ. 

ಆಗಸ್ಟ್ 29ರ ರಾತ್ರಿ ಸ್ಕಿರ್ಮಿಷ್‌ನಲ್ಲಿ ಚೀನಾದ ಅತಿಕ್ರಮಣವನ್ನು ಭಾರತೀಯ ಸೇನೆ ತಡೆದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವನ್ನು ಅದಕ್ಕೂ ಮುನ್ನ ಚಿತ್ರೀಕರಿಸಲಾಗಿದೆ ಎಂದು ಲಾಜಿಕಲ್ ಇಂಡಿಯನ್ಸ್ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು