ಸೋಮವಾರ, ಮಾರ್ಚ್ 20, 2023
25 °C

ಪ್ರೇಕ್ಷಕರ ನಕಾರಾತ್ಮಕ ಪ್ರತಿಕ್ರಿಯೆ ‘ಪಠಾಣ್’ ಚಿತ್ರಕ್ಕೆ ಸಂಬಂಧಿಸಿದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಾರುಕ್ ಖಾನ್–ದೀಪಿಕಾ ಪಡುಕೋಣೆ ತಾರಾಗಣದ ಬಾಲಿವುಡ್ ಚಿತ್ರ ‘ಪಠಾಣ್’ ಬಿಡುಗಡೆಯಾಗಿ, ದಾಖಲೆಗಳನ್ನು ಮುರಿದು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಬಿಡುಗಡೆಗೂ ಮುನ್ನ, ಚಿತ್ರವನ್ನು ನಿಷೇಧಿಸಬೇಕು ಎಂಬ ಕೂಗು ಜೋರಾಗಿತ್ತು. ಚಿತ್ರ ನೋಡಿದ ಪ್ರೇಕ್ಷಕರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯೂಟ್ಯೂಬ್ ವಾಹಿನಿಗಳ ವಿಡಿಯೊಗಳನ್ನು ಹಲವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇವು ಹಳೆಯ ವಿಡಿಯೊಗಳು. 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತುಣುಕುಗಳು ‘ಫಿಲ್ಮಿಫೀವರ್’ ಹಾಗೂ ‘ಬಾಲಿವುಡ್‌ವಾಲಾ’ ಹೆಸರಿನ ಯೂಟ್ಯೂಬ್ ವಾಹಿನಿಗಳಿಗೆ ಸಂಬಂಧಿಸಿದ ಹಳೆಯ ವಿಡಿಯೊಗಳು ಎಂದು ‘ಲಾಜಿಕಲ್ ಇಂಡಿಯನ್’ ವೆಬ್‌ಸೈಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಈ ಎರಡೂ ವಾಹಿನಿಗಳಲ್ಲಿ ಪ್ರಸಾರವಾಗಿರುವ ವಿಡಿಯೊಗಳು, ‘ಬ್ರಹ್ಮಾಸ್ತ್ರ’ ಹಾಗೂ ‘ರೂಹಿ’ ಸಿನಿಮಾಗಳಿಗೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಗಳು ಎಂದು ವೆಬ್‌ಸೈಟ್ ವರದಿ ಮಾಡಿದೆ. ಬೇರೆ ಸಿನಿಮಾಗಳಿಗೆ ಜನರು ನೀಡಿದ ಪ್ರತಿಕ್ರಿಯೆಗಳನ್ನೇ ಪಠಾಣ್ ಸಿನಿಮಾದ ಪ್ರತಿಕ್ರಿಯೆಗಳು ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು