ನಕಲಿ ಶ್ಯೂರಿಟಿ ನೀಡಿ ಜಾಮೀನು: ಬಂಧನ

7

ನಕಲಿ ಶ್ಯೂರಿಟಿ ನೀಡಿ ಜಾಮೀನು: ಬಂಧನ

Published:
Updated:

ಬೆಂಗಳೂರು: ರೈತರೊಬ್ಬರ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ, 26 ಪ್ರಕರಣಗಳಲ್ಲಿ ಆರೋಪಿಗಳಿಗೆ ಶ್ಯೂರಿಟಿ ನೀಡಿ ಜಾಮೀನು ಕೊಡಿಸಿದ್ದ ಆರೋಪಿ ನವೀನ್‌ ಕುಮಾರ್‌ (30) ಎಂಬಾತನನ್ನು ಕೊತನೂರು ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ನವೀನ್, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಬನಶಂಕರಿ ಸಮೀಪದ ಬಾರೊಂದರಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿದ್ದ. ಅಲ್ಲಿಯೇ ಆತನಿಗೆ ರಾಜನ್ ಎಂಬಾತನ ಪರಿಚಯವಾಗಿತ್ತು. ಆತನ ಮೂಲಕವೇ ನವೀನ್, ನಕಲಿ ದಾಖಲೆ ಸೃಷ್ಟಿಸುವುದನ್ನು ಕಲಿತಿದ್ದ’ ಎಂದು ಪೊಲೀಸರು ಹೇಳಿದರು.

‘ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಾಜನ್, ಮೂರು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದ. ಅದಾದ ನಂತರ, ನವೀನ್‌ನೇ ಸ್ವತಂತ್ರವಾಗಿ ನಕಲಿ ಶ್ಯೂರಿಟಿ ಕೊಡುವುದನ್ನು ಮುಂದುವರಿಸಿದ್ದ’ ಎಂದರು.

‘ಬೈರೇಗೌಡ ಎಂಬ ರೈತನ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದೆ. ಅದನ್ನು ಬಳಸಿಕೊಂಡು ಆರೋಪಿಗಳಿಗೆ ಜಾಮೀನು ಕೊಡಿಸಿದ್ದೇನೆ. ಅದಕ್ಕಾಗಿ ಆರೋಪಿಗಳಿಂದ ಹಣವನ್ನೂ ಪಡೆದಿದ್ದೇನೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !