ಶನಿವಾರ, ಅಕ್ಟೋಬರ್ 19, 2019
28 °C

ವಿಮಾನದ ನಕಲಿ ಟಿಕೆಟ್: ಯುವಕ ಸೆರೆ

Published:
Updated:

ಬೆಂಗಳೂರು: ನಕಲಿ ಟಿಕೆಟ್ ಬಳಸಿ ವಿಮಾನದಲ್ಲಿ ಪ್ರಯಾಣಿಸಲು ಯತ್ನಿಸುತ್ತಿದ್ದ ಅಬ್ರಾಜ್ ಖುರೇಶಿ (21) ಎಂಬಾತನನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

’ಕೆ.ಜಿ.ಹಳ್ಳಿ ನಿವಾಸಿ ಆಗಿರುವ ಅಬ್ರಾಜ್, ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಅಬ್ರಾಜ್, 50 ಜನರನ್ನು ಏಜೆನ್ಸಿ ವತಿಯಿಂದ ಪ್ರವಾಸಕ್ಕೆ ಕರೆದೊಯ್ಯಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆತ ಬೇರೊಬ್ಬರ ಹೆಸರಿನಲ್ಲಿ ನಕಲಿ ಟಿಕೆಟ್ ಸೃಷ್ಟಿಸಿದ್ದ. ನಿಲ್ದಾಣದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಸಿಕ್ಕಿ
ಬಿದ್ದ. ಆತನನ್ನು ವಶಕ್ಕೆ ಪಡೆದಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿ ಠಾಣೆಗೆ ಒಪ್ಪಿಸಿ
ದ್ದಾರೆ’ ಎಂದು ಮಾಹಿತಿ ನೀಡಿದರು.

‘ಟಿಕೆಟ್‌ ಸೃಷ್ಟಿಸಿದ್ದು ಯಾರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

 

Post Comments (+)