ಫಸಲ್ ಬಿಮಾ ಯೋಜನೆಯಲ್ಲಿ ಮೋಸ: ಕಾಂಗ್ರೆಸ್‌

7

ಫಸಲ್ ಬಿಮಾ ಯೋಜನೆಯಲ್ಲಿ ಮೋಸ: ಕಾಂಗ್ರೆಸ್‌

Published:
Updated:

ಬೆಂಗಳೂರು: ‘ಕೇಂದ್ರದ ಎನ್‌ಡಿಎ ಸರ್ಕಾರ ರೈತ ಫಸಲ್ ಬಿಮಾ ಯೋಜನೆಯಲ್ಲಿ ರೈತರಿಗೆ ಭಾರಿ ಮೋಸ ಮಾಡಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಟೀಕಿಸಿದರು.

ಮಂಗಳವಾರ ಮಾತನಾಡಿದ ಅವರು, ‘ಮೋದಿ ಸರ್ಕಾರವು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ’ ಎಂದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಅಗ್ರಿಕಲ್ಚರಲ್ ಕಾರ್ಪೊರೇಷನ್ ಮೂಲಕ ರೈತರಿಗೆ ಬೆಳೆ ವಿಮೆ ನೀಡಲಾಗುತ್ತಿತ್ತು. 2016- 17ರಲ್ಲಿ ಎನ್‌ಡಿಎ ಸರ್ಕಾರ ಫಸಲ್‌ ಬಿಮಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ಲಾಭವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಇದರ ಹಿಂದೆ ಕಾರ್ಪೊರೇಟ್ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ’ ಎಂದು ದೂರಿದರು. 

‘ರೈತರಿಗೆ ₹ 1,800 ಕೋಟಿ ವಂಚನೆ’: ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಬಿಐಗೆ ದೂರು ನೀಡಿದ್ದ ರಾಜ್ಯ ಕಾಂಗ್ರೆಸ್‌ ಕಿಸಾನ್‌ ವಿಭಾಗ, ಇದಕ್ಕೆ ಪೂರಕವಾಗಿ ಕೆಲವು ದಾಖಲೆಗಳನ್ನು ಒದಗಿಸಿದೆ.

ಕಿಸಾನ್‌ ವಿಭಾಗದ ಸಚಿನ್‌ ಮೀಗಾ ಸಿಬಿಐ ಎಸ್‌.ಪಿಗೆ ದಾಖಲೆ ಹಸ್ತಾಂತರಿಸಿದರು. ವಿಮಾ ಕಂಪೆನಿ ರೈತರಿಗೆ ₹ 1800 ಕೋಟಿ ವಂಚಿಸಿದೆ ಎಂದು ಅವರು ಇದಕ್ಕೂ ಮೊದಲು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !