‘ಫಾಸ್ಟ್ ಟ್ರ್ಯಾಕ್ ಯೋಜನೆ ವಿಫಲ’

7

‘ಫಾಸ್ಟ್ ಟ್ರ್ಯಾಕ್ ಯೋಜನೆ ವಿಫಲ’

Published:
Updated:
Prajavani

ಬೆಂಗಳೂರು: ಗ್ರಾಹಕರಿಗೆ ಸುಲಭವಾಗಿ ಮೂರು ದಿನದಲ್ಲಿ ವಿದ್ಯುತ್ ಸಂಪರ್ಕ ಒದಗಿಸಬೇಕಾದ ಫಾಸ್ಟ್ ಟ್ರ್ಯಾಕ್ ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಕೆ.ಆರ್.ಪುರ ಸಮೀಪದ ಐಟಿಐ ಬಳಿಯಿರುವ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ವೈಟ್‌ಫೀಲ್ಡ್‌ 7ನೇ ಪೂರ್ವ ವಿಭಾಗ ವ್ಯಾಪ್ತಿಯಲ್ಲಿ 7.5 ಕಿಲೋವಾಟ್‌ವರೆಗೆ ವಿದ್ಯುತ್ ಸಂಪರ್ಕ ಪಡೆಯುವ ಮನೆ
ಗಳಿಗೆ ಫಾಸ್ಟ್ ಟ್ರ್ಯಾಕ್ ಯೋಜನೆಯ ಮೂಲಕ ಮೂರು ದಿನದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಬೆಸ್ಕಾಂ ಸುತ್ತೋಲೆ ಹೊರಡಿಸಿದೆ. ಅಧಿಕಾರಿಗಳ ನಿರ್ಲಕ್ಷದಿಂದ ಫಾಸ್ಟ್ ಟ್ರ್ಯಾಕ್‌ ಯೋಜನೆ ನೆಲಕಚ್ಚಿದೆ. ಇಲಾಖೆಯೊಂದಿಗೆ ಮಾಡಿ
ಕೊಳ್ಳುವ ಒಪ್ಪಂದಗಳು ಹಾಗೂ ವಿದ್ಯುತ್ ಮಾಪಕಗಳು ಸರಿಯಿಲ್ಲ ಎಂದು ಸಬೂಬು ಹೇಳುವ ಅಧಿಕಾರಿಗಳು ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡದೆ ಅನನುಕೂಲ ಉಂಟು ಮಾಡುತ್ತಿದ್ದಾರೆ. ಈ ಯೋಜನೆಯನ್ನು ರದ್ದುಗೊಳಿಸಿ ಈ ಹಿಂದೆ ಚಾಲ್ತಿಯಲ್ಲಿದ್ದ ಆಫ್‌ಲೈನ್‌ ವ್ಯವಸ್ಥೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಗುತ್ತಿಗೆದಾರರು ಆಗ್ರಹಿಸಿದರು.

ಸಂಘದ ನಗರ ಸಂಘಟನಾ ಕಾರ್ಯದರ್ಶಿ ಕೆ.ವಿ.ರಘು ಮಾತನಾಡಿ, ವೈಟ್‌ಫೀಲ್ಡ್‌ನ 7ನೇ ಪೂರ್ವ ವಿಭಾಗದಲ್ಲಿ ಗ್ರಾಹಕರಿಗೆ ನೂತನವಾಗಿ ವಿತರಿಸಿದ ಆರ್.ಆರ್.ನಂಬರ್‌ಗಳಿಗೆ ಏಳು ತಿಂಗಳು ಕಳೆದರೂ ಬಿಲ್‌ ಸಿಕ್ಕಿಲ್ಲ. ಒಂದೇ ಬಾರಿ ದೊಡ್ಡಮಟ್ಟದ ಬಿಲ್‌ ಬರುವುದರಿಂದ ಗ್ರಾಹಕರು ಹಣ ಪಾವತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !